ಮಂಗಳೂರು: ಆಟಿ ಅಮಾವಾಸ್ಯೆ ಪ್ರಯುಕ್ತ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಹಾಗೂ ಆರೋಗ್ಯ ಭಾರತಿ, ಮಂಗಳೂರು ಇವರ ಸಹಯೋಗದಲ್ಲಿ ಉಚಿತ ಹಾಲೆಮರದ ಕಷಾಯ ವಿತರಣಾ ಕಾರ್ಯಕ್ರಮ ಬುಧವಾರ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯ ವೆಲೆನ್ಸಿಯಾ ಹಾಗೂ ಕದ್ರಿ ಶಾಖೆಗಳಲ್ಲಿ ನಡೆಯಿತು.

ಆಸ್ಪತ್ರೆಯ ಕದ್ರಿ ಶಾಖೆಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯ ವೈದ್ಯರು ಹಾಗೂ ಆರೋಗ್ಯ ಭಾರತಿಯ ಜಿಲ್ಲಾ ಉಪಾಧ್ಯಕ್ಷರಾದ ಡಾ. ಸಚಿನ್ ನಡ್ಕ, ಆಸ್ಪತ್ರೆಯ ವೈದ್ಯೆ ಡಾ. ಅನುಷಾ, ಆರೋಗ್ಯ ಭಾರತಿಯ ಪ್ರಾಂತ ಉಪಾಧ್ಯಕ್ಷರು ಹಾಗೂ ಜಿಲ್ಲಾ ಗೌರವಾಧ್ಯಕ್ಷರಾದ ಡಾ. ಮುರಳೀ ಮೋಹನ ಚೂಂತಾರು, ಜಿಲ್ಲಾ ಅಧ್ಯಕ್ಷರಾದ ಡಾ. ಈಶ್ವರ ಭಟ್ ಪಳ್ಳಾದೆ, ವಿಭಾಗ ಸಂಚಾಲಕರಾದ ಶ್ರೀ ಪುರುಷೋತ್ತಮ ದೇವಸ್ಯ, ಕಾರ್ಯದರ್ಶಿಗಳಾದ ಶ್ರೀ ಉಮೇಶ್ ಪ್ರಭು ಬನ್ನೂರು, ಜೊತೆ ಕಾರ್ಯದರ್ಶಿಗಳಾದ ಶ್ರೀ ದಿನೇಶ್ ಚಂದ್ರಗಿರಿ ಹಾಗೂ ಯೋಗ ಗುರುಗಳಾದ ಶ್ರೀ ರವೀಶ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಮುರಳೀ ಮೋಹನ ಚೂಂತಾರು ಅವರು, ಆಟಿ ಅಮಾವಾಸ್ಯೆಯಂದು ಹಾಲೆಮರದ ಕಷಾಯ ಸೇವಿಸುವುದು ತುಳುನಾಡಿನ ಪಾರಂಪರಿಕ ಸಂಪ್ರದಾಯವಾಗಿದ್ದು, ಅದರ ಮಹತ್ವವನ್ನು ವಿವರಿಸಿದರು.

ಡಾ. ಸಚಿನ್ ನಡ್ಕ ಅವರು ಮಾತನಾಡಿ, ಹಾಲೆಮರದ ಕಷಾಯ ಸೇವಿಸುವ ಮೂಲಕ ಎಲ್ಲರೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮಕ್ಕೆ ಆಗಮಿಸಿ ಕಷಾಯವನ್ನು ಸ್ವೀಕರಿಸಿದ ಎಲ್ಲರಿಗೂ ಅವರು ಧನ್ಯವಾದಗಳನ್ನು ಸಲ್ಲಿಸಿದರು.

ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯ ವೆಲೆನ್ಸಿಯಾ ಹಾಗೂ ಕದ್ರಿ ಶಾಖೆಗಳ ಸುತ್ತಮುತ್ತಲಿನ ಪ್ರದೇಶಗಳ ಸುಮಾರು 1,000ಕ್ಕೂ ಹೆಚ್ಚು ಜನರು ಈ ಉಚಿತ ಕಷಾಯ ವಿತರಣೆಯ ಪ್ರಯೋಜನವನ್ನು ಪಡೆದರು.

ಅದೇ ರೀತಿ, ವೆಲೆನ್ಸಿಯಾ ಶಾಖೆಯಲ್ಲಿಯೂ ಸಾರ್ವಜನಿಕರಿಗೆ ಉಚಿತವಾಗಿ ಹಾಲೆಮರದ ಕಷಾಯವನ್ನು ವಿತರಿಸಲಾಯಿತು.

ಈ ಸಾರ್ಥಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಆರೋಗ್ಯ ಭಾರತಿ ತಂಡ, ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮತ್ತು ಕಷಾಯವನ್ನು ಸ್ವೀಕರಿಸಲು ಆಗಮಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.

_Sathish Kapikad

Share.
Leave A Reply

Exit mobile version