(ಸಾಂದರ್ಭಿಕ ಚಿತ್ರ)

ಮಂಗಳೂರು, ಜು.10(ಕ.ವಾ): ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಖಾಲಿ ಇರುವ ಕೆಲವೊಂದು ಹುದ್ದೆಗಳಿಗೆ ಮಂಗಳೂರಿನ ಪಡೀಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಕರೆಯಲಾಗಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್, ಮಂಗಳೂರು ಮತ್ತು ಗೋಲ್ಡನ್ ವಿಂಗ್ಸ್ ಲಿಫ್ಟ್ ಮತ್ತು ಎಲಿವೇಟರ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು ಮತ್ತು ಸಂಭವ್ ಪೌಂಡೇಶನ್, ಬೆಂಗಳೂರು ವತಿಯಿಂದ ಖಾಲಿ ಇರುವ ಅಸಿಸ್ಟಂಟ್ ಮ್ಯಾನೇಜರ್, ಹೆಚ್.ಆರ್ ಮತ್ತು ಟೆಲಿಕಾಲಿಂಗ್, ಸೇಲ್ಸ್ ಎಕ್ಸಿಕ್ಯೂಟಿವ್, ಲಿಪ್ಸ್ ಟೆಕ್ನಿಶಿಯನ್, ಇ.ವಿ ಇಲೆಕ್ಟ್ರಿಶಿಯನ್, ಇಲೆಕ್ಟ್ರಿಶಿಯನ್, ಸಿ.ಎನ್.ಸಿ. ಆಪರೇಟರ್, ಹೆಲ್ಪರ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ಜುಲೈ 14 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30 ರವರೆಗೆ ಪಡೀಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.

ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವಿ, ಐ.ಟಿ.ಐ ಅಥವಾ ಡಿಪ್ಲೊಮಾ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ಭಾಗವಹಿಸಬಹುದು.

ಕೆಲಸದ ಸ್ಥಳ ಮಂಗಳೂರು, ಬೆಂಗಳೂರು. ಹೆಚ್ಚಿನ ಮಾಹಿತಿಗೆ : ಮಂಗಳೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

_Sathish Kapikad

Share.
Leave A Reply

Exit mobile version