
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬೆನ್ನಲ್ಲೇ ಶ್ರೀ ಪದ್ಮರಾಜ್ ಆರ್. ಪೂಜಾರಿ ಅವರು ದೇರೆಬೈಲ್ ನೈರುತ್ಯ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಟಿ.ಸಿ. ಗಣೇಶ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು.
ಅಧಿಕಾರದ ಯಾವುದೇ ಆಡಂಬರವಿಲ್ಲದೆ, ತಳಮಟ್ಟದ ಕಾರ್ಯಕರ್ತರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ ಡಿಸಿಸಿ ಅಧ್ಯಕ್ಷರ ಈ ನಡೆ ಪಕ್ಷದ ಕಾರ್ಯಕರ್ತರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
“ನಿಮ್ಮೊಂದಿಗೆ ನಾವಿದ್ದೇವೆ, ನಾನು ನಿಮ್ಮ ಜೊತೆ ಇದ್ದೇನೆ” ಎಂಬ ಆತ್ಮೀಯ ಧೈರ್ಯದ ಮಾತುಗಳ ಮೂಲಕ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಿದ ಪದ್ಮರಾಜ್ ಆರ್. ಪೂಜಾರಿ ಅವರ ಸರಳತೆ ಹಾಗೂ ಕಾಳಜಿ, ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಪಕ್ಷದ ಸಂಘಟನೆಯ ಬಲ ತಳಮಟ್ಟದ ಕಾರ್ಯಕರ್ತರಿಂದಲೇ ಎಂಬುದನ್ನು ಅರಿತು, ಕಾರ್ಯಕರ್ತರ ಸಂಕಷ್ಟ ಹಾಗೂ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ನಾಯಕತ್ವದ ನಡೆ ಇದಾಗಿದೆ ಎಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಡಾ. ಬಿ.ಜಿ. ಸುವರ್ಣ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಂದ್ರ ಚಿಲಿಂಬಿ, ವಾರ್ಡ್ ಅಧ್ಯಕ್ಷ ಹ್ಯಾರಿ ಡಿಸೋಜ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಯೋಗೀಶ್ ನಾಯಕ್, ಮಾಜಿ ಪಾಲಿಕೆ ಸದಸ್ಯರಾದ ಪದ್ಮನಾಭ ಅಮಿನ್ ಹಾಗೂ ಪದ್ಮನಾಭ ಪಣಿಕರ್, ಯುವ ಕಾಂಗ್ರೆಸ್ ಅಧ್ಯಕ್ಷ ವೆಲ್ವಿನ್ ಜೇಸನ್ ಕ್ಯಾಸ್ಟಲಿನೊ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಪೃಥ್ವಿ ಸಾಲಿಯಾನ್, ಸಮರ್ಥ ಭಟ್, ಹಿಂದುಳಿದ ವರ್ಗಗಳ ಘಟಕದ ಕಾರ್ಯದರ್ಶಿ ರವಿರಾಜ್ ಪೂಜಾರಿ ಸೇರಿದಂತೆ ವಾರ್ಡಿನ ಪ್ರಮುಖರಾದ ಲತೀಶ್, ಮನೋಜ್ ಉರ್ವ, ಶೇಖರ್ ಗಟ್ಟಿ, ರಮಣಿ, ಮೋಹಿನಿ, ರವಿ ಉರ್ವ, ರಾಜೇಶ್ ದೇವಾಡಿಗ, ನೀತ್ ಶರಣ್, ಸೀತಾರಾಮ ಶೆಟ್ಟಿ, ಕಿಶೋರ್ ಹಾಗೂ ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
_Sathish Kapikad