
ಮಂಗಳೂರು, ಆಗಸ್ಟ್. 28 : ನಗರದ ಬೋಳೂರು ಅಮೃತಾನಂದಮಯಿ ರಸ್ತೆಯಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ತಾರೀಕು 28/8/2026 ರಂದು ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಶ್ರದ್ಧಾ ಭಕ್ತಿಯಿಂದ ಜರುಗಿತು.

ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣರವರ ನಿರ್ದೇಶನದಂತೆ ಜರುಗಿದ ಈ ಪೂಜೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮಗಾಗಿ ಸ್ವತಃ ತಾವೇ ಪೂಜೆಯನ್ನು ಮಾಡಿ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾದರು.

ಬ್ರಹ್ಮಚಾರಿ ರತೀಶ್ ಮತ್ತು ಕಿರಣ್ ಕಲಾಂಜಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು, .ಮಧ್ಯಾಹ್ನ 12.30ಕ್ಕೆ ಆರತಿ ಹಾಗೂ ಮಹಾ ಪ್ರಸಾದ ವಿತರಣೆ ಜರುಗಿತು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಮತ್ತು ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಭಕ್ತರು ಭಾಗವಹಿಸಿದ್ದರು.
_Sathish Kapikad


