
ಮಂಗಳೂರು, ಆಗಸ್ಟ್. 28 : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ರಥಬೀದಿ, ಮಂಗಳೂರು. ಇಲ್ಲಿನ ಪಟ್ಟೆ ಲಿಂಗಪ್ಪಚಾರ್ಯ ಕಲ್ಯಾಣ ಮಂಟಪದಲ್ಲಿ 28.08.2026 ಶುಕ್ರವಾರ ಬೆಳಿಗ್ಗೆ ” ಶ್ರೀ ವರಮಹಾಲಕ್ಷ್ಮಿ ಪೂಜೆ” ಯು ಕ್ಷೇತ್ರದ ಶ್ರೀ ಗುರುಮಠದ ಪ್ರಧಾನ ಅರ್ಚಕರಾದ ಕೆ ಸುದರ್ಶನ್ ಪುರೋಹಿತರ ಆಚಾರ್ಯತ್ವದಲ್ಲಿ ಸಂಪನ್ನಗೊಂಡಿತು.
ಶ್ರೀ ವರಮಹಾಲಕ್ಷ್ಮಿ ದೇವರನ್ನು ಬೆಳ್ಳಿಯ ಕಲಶದಲ್ಲಿ ಆವಾನಿಸಿ ಪೂಜೆ ನೆರವೇರಿಸಲಾಯಿತು. . ಈ ಸಂದರ್ಭದಲ್ಲಿ ಸುವಾಸಿನಿಯರಿಗೆ ವಾಯನ ದಾನ ಮಾಡಲಾಯಿತು. ವಿಶ್ವಬ್ರಾಹ್ಮಣ ಮಹಿಳಾ ಸಮಿತಿ ಸದಸ್ಯರು ಶ್ರೀ ದೇವಿಯ ಸ್ತೋತ್ರ ಹಾಗೂ ಭಜನೆ ಮಾಡಿದರು.
ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಮೊಕ್ತೇಸರರು, ಆಡಳಿತ ಮಂಡಳಿಯ ಮಾಜಿ ಸದಸ್ಯರು, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು.
_Sathish Kapikad


