
(ಕಡತ ಚಿತ್ರ)
ಮಂಗಳೂರು, ಸೆ.101(ಕ.ವಾ): ಅಪೊಲೊ ಫಾರ್ಮಸಿ ಕಂಪೆನಿಯ ವತಿಯಿಂದ ಪುತ್ತೂರು, ಬೆಳ್ತಂಗಡಿ, ಉಜಿರೆ, ಬಿ.ಸಿ.ರೋಡ್ ಹಾಗೂ ಮಂಗಳೂರಿನಲ್ಲಿ ಖಾಲಿ ಇರುವ ಫಾರ್ಮಾಸಿಸ್ಟ್, ಸ್ಟೋರ್ ಇನ್‍ಚಾರ್ಜ್, ಸೇಲ್ಸ್ ಅಸೋಸಿಯೇಟ್ ಮತ್ತು ಡೆಲಿವರಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ಸೆಪ್ಟೆಂಬರ್ 15ರಂದು ಬೆಳಿಗ್ಗೆ 10:30 ರಿಂದ 1:30 ರವರೆಗೆ ಪಡೀಲ್ ಜಿಲ್ಲಾಡಳಿತ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.
ನೇರ ಸಂದರ್ಶನದಲ್ಲಿ ಪಿ.ಯು.ಸಿ, ಯಾವುದೇ ಪದವಿ ಅಥವಾ ಡಿ.ಫಾರ್ಮಾ, ಬಿ.ಫಾರ್ಮಾ ವಿದ್ಯಾರ್ಹತೆ ಹೊಂದಿರುವ ಪುರುಷ ಅಭ್ಯರ್ಥಿಗಳು ಮತ್ತು ಡಿ.ಫಾರ್ಮಾ, ಬಿ.ಫಾರ್ಮಾ ವಿದ್ಯಾರ್ಹತೆ ಹೊಂದಿರುವ ಮಹಿಳಾ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಕಂಪನಿ ವತಿಯಿಂದ ಪಿ.ಎಫ್, ಇ.ಎಸ್.ಐ, ಬೋನಸ್, ಗ್ರಾಚುಟಿ ಇರುತ್ತದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
_Sathish Kapikad


