ಮಂಗಳೂರು,ಆ.11(ಕ.ವಾ): ಮಂಗಳೂರು ನಗರಕ್ಕೆ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಿ ನಂತರ ಜಲ ಶುದ್ದೀಕರಣ ಘಟಕಗಳಲ್ಲಿ ನೀರನ್ನು ಶುದ್ಧೀಕರಿಸಿ ನಗರದ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ನದಿಯ ನೀರಿನ ಹರಿವು ಹೆಚ್ಚಾಗಿ ತುಂಬೆ ಜಾಕ್ ವೆಲ್‍ನ ಇನ್ ಟೇಕ್ ಭಾಗದಲ್ಲಿ ಮರದ ದಿಮ್ಮಿಗಳು, ಕೊಂಬೆಗಳು, ಪ್ಲಾಸ್ಟಿಕ್ ತ್ಯಾಜ್ಯ, ಬಟ್ಟೆ, ಚೀಲಗಳು, ಹೂಳು ಹಾಗೂ ಇತರ ವಸ್ತುಗಳು ಸಂಗ್ರಹಗೊಂಡು ಪಂಪ್‍ನ ಸ್ಟ್ರೈನರ್ ಹಾನಿಗೊಳಗಾಗಿ ಮುಚ್ಚಿ ಹೋಗಿರುತ್ತದೆ. ಇದರಿಂದ ಪಂಪ್‍ನ ಪಂಪಿಂಗ್ ಸಾಮಥ್ರ್ಯವು ಕಡಿಮೆಯಾಗಿರುತ್ತದೆ.

ಇನ್ ಟೇಕ್ ಭಾಗದಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯಗಳನ್ನು ತೆರವುಗೊಳಿಸಿ ಹಾನಿಯಾಗಿರುವ ಸ್ಟ್ರೈನರ್ ಅನ್ನು ಸರಿಪಡಿಸಿ ಪಂಪಿಂಗ್ ವ್ಯವಸ್ಥೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಿಂದ ನೀರನ್ನು ಪೂರ್ಣ ಪಂಪಿಂಗ್ ಸಾಮಥ್ರ್ಯದಲ್ಲಿ ನಿರಂತರವಾಗಿ ಪಂಪಿಂಗ್ ಮಾಡಲು ಕಷ್ಟ ಸಾಧ್ಯವಾಗಿರುತ್ತದೆ.

ಆದುದರಿಂದ ಸುರತ್ಕಲ್ ಪ್ರದೇಶದ ವಾರ್ಡುಗಳು ಹಾಗೂ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಲೋ ಲೆವಲ್ ವಾರ್ಡುಗಳಿಗೆ ಪರ್ಯಾಯ ದಿನಗಳಲ್ಲಿ ನೀರನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಆಗಸ್ಟ್ 31 ರವರೆಗೆ ಅನುಸರಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನೀರನ್ನು ಮಿತವಾಗಿ ಮತ್ತು ಅವಶ್ಯಕತೆ ಅನುಗುಣವಾಗಿ ಬಳಸುವಂತೆ ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

_Sathish Kapikad

Share.
Leave A Reply

Exit mobile version