Close Menu
SK Media NewsSK Media News
    What's Hot

    ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ: ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಂಸದರು ಹಾಗೂ ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ

    September 17, 2026

    ಸೆಪ್ಟೆಂಬರ್ 20ರಂದು ಮಂಗಳೂರಿನಲ್ಲಿ ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ : ವಿವಿಧ ತಂಡಗಳಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ

    September 17, 2026

    ಬಂಟ್ಸ್ ಹಾಸ್ಟೇಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ : ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸಂಪನ್ನ – ಮೆರವಣಿಗೆಗೆ ಮೆರುಗು ನೀಡಿದ ನೂರಾರು ಭಜನಾ ತಂಡಗಳು 

    September 17, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ನನಗೆ ಬಂಟ ಸಮಾಜದ ಋಣ ಇದೆ‌, ಶಾಸಕನಾಗಿ ಬಂಟ ಸಮಾಜದೊಟ್ಟಿಗೆ ಯಾವತ್ತೂ ನಾನು ಇರುತ್ತೇನೆ:ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್
    ಕರಾವಳಿ

    ನನಗೆ ಬಂಟ ಸಮಾಜದ ಋಣ ಇದೆ‌, ಶಾಸಕನಾಗಿ ಬಂಟ ಸಮಾಜದೊಟ್ಟಿಗೆ ಯಾವತ್ತೂ ನಾನು ಇರುತ್ತೇನೆ:ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್

    September 17, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು: ಸಂಸ್ಕಾರಯುತ ಹಿಂದೂ ಸಮಾಜವನ್ನು ಒಟ್ಟು ಮಾಡಲು ಗಣೇಶೋತ್ಸವ ಪ್ರೇರಣೆಯಾಗಿದೆ. ಬಂಟ್ಸ್ ಹಾಸ್ಟೇಲ್ ನಲ್ಲಿ ನಡೆಯುವ ಶ್ರೀ ಗಣೇಶೋತ್ಸವ ಶಿಸ್ತುಬದ್ದವಾಗಿ ನಡೆಯುತ್ತಿದ್ದು, ಎಲ್ಲರಿಗೂ ಮಾದರಿಯಾಗಿದೆ. ಶಾಸಕನಾಗಿ ನಾನು ಬಂಟ ಸಮಾಜದೊಟ್ಟಿಗೆ ಯಾವತ್ತೂ ನಾನಿದ್ದೇನೆ. ನನಗೆ ಬಂಟ ಸಮಾಜದ ಋಣ ಇದೆ‌ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ನುಡಿದರು.

    ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ ರೋಗ ರುಜಿನ ದೂರ ಮಾಡಲು, ಜೀವನದಲ್ಲಿ ಶಾಂತಿ ನೆಮ್ಮದಿ ಕಾಣಲು ಗಣೇಶನ ಆರಾಧನೆ ಅಗತ್ಯ. ಬಂಟ್ಸ್ ಹಾಸ್ಟೇಲ್ ನ ಗಣೇಶೋತ್ಸವ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಗಣೇಶೋತ್ಸವಗಳಿಗೂ ಮಾದರಿಯಾಗಿದೆ.

    ಭಜನೆ ಹರಿಕೀರ್ತನೆಯೊಂದಿಗೆ ಸಾಗುವ ಶೋಭಾಯಾತ್ರೆಯನ್ನು ಕಣ್ತುಂಬಿ ನೋಡುವುದೇ ಆನಂದ.‌ ಬಂಟ್ಸ್ ಹಾಸ್ಟೇಲ್ ನಲ್ಲಿ ಆದಷ್ಟು ಬೇಗ ವಾಣಿಜ್ಯ ಸಂಕೀರ್ಣ ನಿರ್ಮಾಣ ಆಗಲಿ, ಅಜಿತ್ ಕುಮಾರ್ ರೈ ಮಾಲಾಡಿ, ಕೆ ಪ್ರಕಾಶ್ ಶೆಟ್ಟಿ, ಡಾ ಮೋಹನ್ ಆಳ್ವ ಎಲ್ಲರೂ ಜೊತೆಯಾಗಿ ಕೆಲಸ ಮಾಡಿದಾಗ ಇದು ಸಾಧ್ಯವಾಗುತ್ತದೆ. ಕಟ್ಟಡ ನಿರ್ಮಾಣ ಕನಸಾಗಿ ಉಳಿಯದೆ ನನಸಾಗ ಬೇಕು. ನಾವೆಲ್ಲರೂ ಅವರೊಂದಿಗೆ ಇರುತ್ತೇವೆ ಎಂದರು.

    ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಎಂ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಪುಂಚಮೆ, ಉದ್ಯಮಿ ಸುಯೋಗ್ ಶೆಟ್ಟಿ, ಮಾಜಿ ಸಚಿವ ಬಿ ನಾಗರಾಜ ಶೆಟ್ಟಿ, ಡಾ ಸತ್ಯ ಕೃಷ್ಣ ಭಟ್, ರಘುರಾಮ ಭಟ್, ಪ್ರದೀಪದ ಕುಮಾರ್ ಕಲ್ಕೂರ,ವಿವಿಧ ಬಂಟರ ಸಂಘಗಳ ಪದಾಧಿಕಾರಿಗಳಾದ ರತ್ನಾಕರ್ ಶೆಟ್ಡಿ ಎಕ್ಕಾರ್, ಅಶೊಕ್ ಶೆಟ್ಟಿ ಮುಲ್ಕಿ, ಜಯರಾಮ‌ ಬೆಳ್ತಂಗಡಿ, ಮಹಾಬಲ ಚೌಟ,
    ವಿಜಯ ಶೆಟ್ಟಿ ಕಾರ್ಕಳ , ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಮೊದಲಾದವರು ಉಪಸ್ಥಿತರಿದ್ದರು.

    ಸಮಾರಂಭದಲ್ಲಿ ವೇದಮೂರ್ತಿ ಡಾ ಸತ್ಯ ಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.

    ಅಜಿತ್ ಕುಮಾರ್ ರೈ ಮಾಲಾಡಿ ಸ್ವಾಗತಿಸಿದರು. ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ವಂದಿಸಿದರು. ಕಿರಣ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.

    _Sathish Kapikad 

    Share. Facebook Twitter Pinterest LinkedIn Email WhatsApp
    Previous Articleತುಳುನಾಡಿನ ಬಗ್ಗೆ ಸರ್ವರಿಗೂ ಸದಭಿಪ್ರಾಯ : ಬಂಟ್ಸ್ ಹಾಸ್ಟೇಲ್ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ನಟ ಶಿವಧ್ವಜ್ ಶೆಟ್ಟಿ
    Next Article ಬಂಟ್ಸ್ ಹಾಸ್ಟೇಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ : ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸಂಪನ್ನ – ಮೆರವಣಿಗೆಗೆ ಮೆರುಗು ನೀಡಿದ ನೂರಾರು ಭಜನಾ ತಂಡಗಳು 

    Related Posts

    ಕರಾವಳಿ

    ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ: ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಂಸದರು ಹಾಗೂ ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ

    September 17, 2026
    ಅಂತಾರಾಷ್ಟ್ರೀಯ

    ಸೆಪ್ಟೆಂಬರ್ 20ರಂದು ಮಂಗಳೂರಿನಲ್ಲಿ ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ : ವಿವಿಧ ತಂಡಗಳಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ

    September 17, 2026
    ಕರಾವಳಿ

    ಬಂಟ್ಸ್ ಹಾಸ್ಟೇಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ : ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸಂಪನ್ನ – ಮೆರವಣಿಗೆಗೆ ಮೆರುಗು ನೀಡಿದ ನೂರಾರು ಭಜನಾ ತಂಡಗಳು 

    September 17, 2026
    Add A Comment
    Leave A Reply Cancel Reply

    Top Posts

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.