Close Menu
SK Media NewsSK Media News
    What's Hot

    ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ: ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಂಸದರು ಹಾಗೂ ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ

    September 17, 2026

    ಸೆಪ್ಟೆಂಬರ್ 20ರಂದು ಮಂಗಳೂರಿನಲ್ಲಿ ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ : ವಿವಿಧ ತಂಡಗಳಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ

    September 17, 2026

    ಬಂಟ್ಸ್ ಹಾಸ್ಟೇಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ : ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸಂಪನ್ನ – ಮೆರವಣಿಗೆಗೆ ಮೆರುಗು ನೀಡಿದ ನೂರಾರು ಭಜನಾ ತಂಡಗಳು 

    September 17, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಸೆಪ್ಟೆಂಬರ್ 20ರಂದು ಮಂಗಳೂರಿನಲ್ಲಿ ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ : ವಿವಿಧ ತಂಡಗಳಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ
    ಅಂತಾರಾಷ್ಟ್ರೀಯ

    ಸೆಪ್ಟೆಂಬರ್ 20ರಂದು ಮಂಗಳೂರಿನಲ್ಲಿ ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ : ವಿವಿಧ ತಂಡಗಳಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ

    September 17, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು: ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ ಸೆ.20ರಂದು ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ನಿರಂತರವಾಗಿ ನಡೆಯಲಿದೆ ಎಂದು ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ ಅಶೋಕ್ ಮೊಯ್ಲಿ ಹೇಳಿದರು.

    ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಅಥಿತಿಗಳಾಗಿ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ. ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ವಿ. ದೇವಾಡಿಗ, ಶತಮಾನೋತ್ಸವ ಆಚರಣೆ ಗೌರವಾಧ್ಯಕ್ಷ , ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಭಾಗವಹಿಸಲಿದ್ದಾರೆ ಎಂದರು.

    ಮುಖ್ಯ ಅತಿಥಿಗಳಾಗಿ ಡಾ.ದೇವರಾಜ್ ಕೆ., ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕರುಣಾಕರ ಎಂ.ಹೆಚ್., ವಿಶ್ವ ದೇವಾಡಿಗ ಮಹಾಮ೦ಡಲದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಡಾ. ಬಿ.ಎಸ್. ಶೇರಿಗಾರ್, ವಿಶ್ವ ದೇವಾಡಿಗ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್‌ ದಾಸ್, ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಬಾರ್ಕೂರು ಇದರ ಅಧ್ಯಕ್ಷಅಣ್ಣಯ್ಯ ಬಿ. ಶೇರಿಗಾ‌ರ್, ದೇವಾಡಿಗ ಸಂಘ ಮುಂಬೈ ಅಧ್ಯಕ್ಷ ರವಿ ಸುಬ್ಬಯ್ಯ ದೇವಾಡಿಗ, ಮಂಗಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೆ. ದೇವಾಡಿಗ, ನಾರಾಯಣ್ ಎಂ. ದೇವಾಡಿಗ, ದಿನೇಶ್ ಕುಮಾರ್ ದೇವಾಡಿಗ, ಬಾಬು ದೇವಾಡಿಗ ಆಂಗ್ಲಮೊಗರು ಮಾಜಿ ಪ್ರಾಂಶುಪಾಲರು, ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು, ಭಾಸ್ಕರ್ ಶೇರಿಗಾರ್, ಸ್ಥಾಪಕ ಅಧ್ಯಕ್ಷರು, ಆಲ್‌ ಅಮೆರಿಕನ್ ತುಳು ಅಸೋಸಿಯೇಷನ್ (AATA) ಉಸಾ, ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರು ಅಧ್ಯಕ್ಷರು, ಕುಂದಾಪುರ ದೇವಾಡಿಗ ಮಿತ್ರ, ಆಲೂರು ರಘುರಾಮ ದೇವಾಡಿಗ, ಟ್ರಸ್ಟಿ ಸದಸ್ಯರು, ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ನಾಗರಾಜ್ ದೇವಾಡಿಗ ಪಡುಕೋಣೆ, ಅಧ್ಯಕ್ಷರು, LG ಫೌಂಡೇಶನ್, ಸುರೇಶ್ ಚಂದಪ್ಪ ದೇವಾಡಿಗ, ದುಬೈ, ಶೇಖ‌ರ್ ದೇವಾಡಿಗ ಸಾಯಿ ನಿಧಿ ಗ್ರೂಪ್ ಆಫ್ ಹೋಟೆಲ್ಸ್ ಮು೦ಬೈ, ಅಶೋಕ್ ಮೊಯ್ಲಿ ಅಧ್ಯಕ್ಷರು ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮ೦ಗಳೂರು ಇವರು ಪಾಲ್ಗೊಳ್ಳಲಿದ್ದಾರೆ.

    ಸಂಜೆ 5:30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ಎಂ. ವೀರಪ್ಪ ಮೊಯ್ಲಿ ಮಾಜಿ ಮುಖ್ಯಮ೦ತ್ರಿಗಳು, ಗೌರವ ಅತಿಥಿಗಳಾಗಿ ಯು.ಟಿ. ಖಾದ‌ರ್, ಡಿ. ವೇದವ್ಯಾಸ ಕಾಮತ್, ಹರೀಶ್ ಶೇರಿಗಾರ್, ಗೌರವಾಧ್ಯಕ್ಷರು ಶತಮಾನೋತ್ಸವ ಆಚರಣಾ ಸಮಿತಿ, ಡಾ.ದೇವರಾಜ್ ಕೆ. ಗೌರವಾಧ್ಯಕ್ಷರು, ವಿಷನ್ ಮಂಗಳ ಯೋಜನೆ ಶತಮಾನೋತ್ಸವ ಆಚರಣೆ, ಅಶೋಕ್ ಮೊಯ್ಲಿ ಅಧ್ಯಕ್ಷರು, ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.), ಮಂಗಳೂರು ಪಾಲ್ಗೊಳ್ಳಲಿದ್ದಾರೆ.

    ಮುಖ್ಯ ಅತಿಥಿಗಳಾಗಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞ, ಡಾ.ಎ. ಶ್ರೀನಿವಾಸ್ ರಾವ್, ಕುಲಾಧಿಪತಿಗಳು ಶ್ರೀನಿವಾಸ್ ಕಾಲೇಜು, ವಿಶಾಲ್ ಹೆಗ್ಡೆ ಕುಲಾಧಿಪತಿಗಳು ನಿಟ್ಟೆ, ಡಾ.ಸಿ.ಪಿ. ಹಬೀಬ್‌ ರಹ್ಮಾನ್, ಎಂ.ಎನ್. ರಾಜೇಂದ್ರ ಕುಮಾ‌ರ್, ಅಧ್ಯಕ್ಷರು SCDCC ಬ್ಯಾಂಕ್, ಡಾ. ಎ.ಜೆ ಶೆಟ್ಟಿ, ಅಧ್ಯಕ್ಷರು ಎ.ಜೆ. ಗ್ರೂಪ್ ಆಫ್ ಕಂಪೆನೀಸ್, ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷರು, ಬ೦ಟರ ಯಾನೆ ನಾಡವರ ಮಾತೃಸಂಘ, ರೊನಾಲ್ಡ್ ಮಾರ್ಟಿಸ್ ವ್ಯವಸ್ಥಾಪಕ ನಿರ್ದೇಶಕರು, ಬ್ಲೂ ರಾಯಲ್ ಗ್ರೂಪ್ ದುಬೈ, ಸರ್ವೋತ್ತಮ ಶೆಟ್ಟಿ ಅಧ್ಯಕ್ಷರು, ಕರ್ನಾಟಕ ಸ೦ಘ ಅಬುಧಾಬಿ, ಗಣೇಶ್ ಶೆಟ್ಟಿ, ಜಗನ್ನಾಥ್‌ ಶೇರಿಗಾರ್, ಸಂಜೀತ್‌ ಶೆಟ್ಟಿ, ಕರುಣಾಕರ ಎಂ.ಹೆಚ್ ಅಧ್ಯಕ್ಷರು, ಶತಮಾನೋತ್ಸವ ಆಚರಣಾ ಸಮಿತಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

    ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ಸಾಂಪ್ರದಾಯಿಕ ವಾದ್ಯಗಳ ಸಂಗಮದಲ್ಲಿ ನಾಗೇಂದ್ರ ಕುಡುಪು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಉದಯ್ ಶೇರಿಗಾ‌ರ್, ಅಲೆವೂರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಅವರ ತಂಡದಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ ಚೆಂಡೆ + ನಾಗಸ್ವರ + ಉಡುಕೆ + ಡೋಲು ಇದರ ವಿಶೇಷ ಪ್ರದರ್ಶನ ನಡೆಯಲಿದೆ ಎಂದವರು ವಿವರ ನೀಡಿದರು.

    ಶತಮಾನೋತ್ಸವ ಆಚರಣೆ ಗೌರವಾಧ್ಯಕ್ಷ , ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಅವರು ಕಾರ್ಯಕ್ರಮದ ಕುರಿತ ಪೂರಕ ಮಾಹಿತಿಗಳನ್ನು ನೀಡಿದರು.

    ಪತ್ರಿಕಾಗೋಷ್ಟಿಯಲ್ಲಿ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕರುಣಾಕರ ಎಂ.ಹೆಚ್, ಡಾ.ದೇವರಾಜ್ ಕೆ, ವೀಣಾ ಗಣೇಶ್, ಗೀತಾ ಕಲ್ಯಾಣಪುರ, ಲೋಹಿತಾಕ್ಷ ಮರೋಳಿ ಮತ್ತಿತರರು ಉಪಸ್ಥಿತರಿದ್ದರು.

    _Sathish Kapikad 

    Share. Facebook Twitter Pinterest LinkedIn Email WhatsApp
    Previous Articleಬಂಟ್ಸ್ ಹಾಸ್ಟೇಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ : ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸಂಪನ್ನ – ಮೆರವಣಿಗೆಗೆ ಮೆರುಗು ನೀಡಿದ ನೂರಾರು ಭಜನಾ ತಂಡಗಳು 
    Next Article ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ: ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಂಸದರು ಹಾಗೂ ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ

    Related Posts

    ಕರಾವಳಿ

    ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ: ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಂಸದರು ಹಾಗೂ ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ

    September 17, 2026
    ಕರಾವಳಿ

    ಬಂಟ್ಸ್ ಹಾಸ್ಟೇಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ : ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸಂಪನ್ನ – ಮೆರವಣಿಗೆಗೆ ಮೆರುಗು ನೀಡಿದ ನೂರಾರು ಭಜನಾ ತಂಡಗಳು 

    September 17, 2026
    ಕರಾವಳಿ

    ನನಗೆ ಬಂಟ ಸಮಾಜದ ಋಣ ಇದೆ‌, ಶಾಸಕನಾಗಿ ಬಂಟ ಸಮಾಜದೊಟ್ಟಿಗೆ ಯಾವತ್ತೂ ನಾನು ಇರುತ್ತೇನೆ:ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್

    September 17, 2026
    Add A Comment
    Leave A Reply Cancel Reply

    Top Posts

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.