Close Menu
SK Media NewsSK Media News
    What's Hot

    ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ: ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಂಸದರು ಹಾಗೂ ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ

    September 17, 2026

    ಸೆಪ್ಟೆಂಬರ್ 20ರಂದು ಮಂಗಳೂರಿನಲ್ಲಿ ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ : ವಿವಿಧ ತಂಡಗಳಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ

    September 17, 2026

    ಬಂಟ್ಸ್ ಹಾಸ್ಟೇಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ : ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸಂಪನ್ನ – ಮೆರವಣಿಗೆಗೆ ಮೆರುಗು ನೀಡಿದ ನೂರಾರು ಭಜನಾ ತಂಡಗಳು 

    September 17, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ: ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಂಸದರು ಹಾಗೂ ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ
    ಕರಾವಳಿ

    ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ: ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಂಸದರು ಹಾಗೂ ಬಿಜೆಪಿ ಜಿಲ್ಲಾ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆ

    September 17, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು, ಸೆ. 17: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ದೇವಾಲಯದಲ್ಲಿ ಸಂಕ್ರಮಣದ ಈ ಶುಭದಿನದಂದು ಗುರುವಾರ ವಿಶೇಷ ರುದ್ರಾಭಿಷೇಕ ಹಾಗೂ ಪೂಜೆ ನೆರವೇರಿಸಲಾಯಿತು.

    ಪೂಜೆಯ ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ದೇಶವನ್ನು ಮುನ್ನಡೆಸುತ್ತಿರುವ ಸಂದರ್ಭದಲ್ಲಿ ಅವರ ಜನ್ಮದಿನವನ್ನು ಸೇವಾ ಸಂಕಲ್ಪದ ಮೂಲಕ ಆಚರಿಸಲು ಅವಕಾಶ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

    ಕದ್ರಿ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ, ಆಯುಷ್ಯ ಹಾಗೂ ದೇಶದ ಆಡಳಿತವನ್ನು ಯಶಸ್ವಿಯಾಗಿ ಮುನ್ನಡೆಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಲಾಗಿದೆ. ಸೆ.17ರಿಂದ ಅ.17 ರವರೆಗೆ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರ ಮೂಲಕ ವಿವಿಧ ಸಾಮಾಜಿಕ ಹಾಗೂ ಸೇವಾ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಇಂದು ಸಂಜೆ ಮನೆ ಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ಪ್ರಧಾನಿಗೆ ಶುಭ ಹಾರೈಸಲಾಗುವುದು ಎಂದು ತಿಳಿಸಿದರು.

    ನರೇಂದ್ರ ಮೋದಿ ಅವರ ದೀರ್ಘಕಾಲದ ಸಾರ್ವಜನಿಕ ಸೇವೆ ಮತ್ತು ಆಡಳಿತದ ವಿವಿಧ ಯೋಜನೆಗಳು ಹಾಗೂ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಸೇವಾ ಸಂಕಲ್ಪ ಅಭಿಯಾನದ ಮೂಲಕ ಕೈಗೊಳ್ಳಲಾಗುವುದು. ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಮತ್ತು ಬಿಜೆಪಿ ಕಾರ್ಯಕರ್ತರ ಪರವಾಗಿ ಪ್ರಧಾನಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸುವುದಾಗಿ ಸತೀಶ್ ಕುಂಪಲ ಹೇಳಿದರು.

    ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸೇರಿಕೊಂಡು ಸೇವಾ ಸಂಕಲ್ಪ ಅಭಿಯಾನಕ್ಕೆ ಕದ್ರಿ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗಿದೆ ಎಂದರು.

    ದೇಶದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಸಬಲೀಕರಣ ದೊರೆಯಬೇಕು, ದೇಶದ ಅಖಂಡತೆ ಮತ್ತು ಸಾಂಸ್ಕೃತಿಕ ಪುನರುಜ್ಜೀವನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಪ್ರಯತ್ನಗಳು ಮುಂದುವರಿಯಲಿ ಎಂದು ಕದ್ರಿ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುವುದಾಗಿ ಅವರು ಹೇಳಿದರು.

    ಕಾರ್ಯಕ್ರಮದಲ್ಲಿ ಪ್ರೇಮಾನಂದ ಶೆಟ್ಟಿ , ಯತೀಶ್ ಆರ್ವರ್ , ವಸಂತ್ ಜೆ. ಪೂಜಾರಿ, ನಂದನ್ ಮಲ್ಯ, ಪೂರ್ಣಿಮಾ, ಮನೋಹರ್ ಶೆಟ್ಟಿ, ಶಕೀಲಾ ಕಾವಾ, ರಮೇಶ್ ಕಂಡೆಟ್ಟು ಸೇರಿದಂತೆ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

    _Sathish Kapikad

    Share. Facebook Twitter Pinterest LinkedIn Email WhatsApp
    Previous Articleಸೆಪ್ಟೆಂಬರ್ 20ರಂದು ಮಂಗಳೂರಿನಲ್ಲಿ ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ : ವಿವಿಧ ತಂಡಗಳಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ

    Related Posts

    ಅಂತಾರಾಷ್ಟ್ರೀಯ

    ಸೆಪ್ಟೆಂಬರ್ 20ರಂದು ಮಂಗಳೂರಿನಲ್ಲಿ ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ : ವಿವಿಧ ತಂಡಗಳಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ

    September 17, 2026
    ಕರಾವಳಿ

    ಬಂಟ್ಸ್ ಹಾಸ್ಟೇಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ : ಅದ್ಧೂರಿ ಶೋಭಾಯಾತ್ರೆಯೊಂದಿಗೆ ಸಂಪನ್ನ – ಮೆರವಣಿಗೆಗೆ ಮೆರುಗು ನೀಡಿದ ನೂರಾರು ಭಜನಾ ತಂಡಗಳು 

    September 17, 2026
    ಕರಾವಳಿ

    ನನಗೆ ಬಂಟ ಸಮಾಜದ ಋಣ ಇದೆ‌, ಶಾಸಕನಾಗಿ ಬಂಟ ಸಮಾಜದೊಟ್ಟಿಗೆ ಯಾವತ್ತೂ ನಾನು ಇರುತ್ತೇನೆ:ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್

    September 17, 2026
    Add A Comment
    Leave A Reply Cancel Reply

    Top Posts

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.