ಮಂಗಳೂರು: ಮಂಗಳೂರಿನ ವಿಶ್ವಬ್ರಾಹ್ಮಣ ಸಮಾಜದ ಕುಟುಂಬದಲ್ಲಿ ಸಾರ್ವಜನಿಕ ಗಣೇಶೋತ್ಸವದಂತೆ ಪ್ರತೀ ವರ್ಷ ವಿವಿಧ ರೀತಿಯ ಗಣಪತಿ ವಿಗ್ರಹ ರಚಿಸದೇ ಸಾoಪ್ರದಾಯಿಕ ರೀತಿಯಲ್ಲಿ ತಲೆ ತಲೆತಲಾoತರ ಗಳಿಂದ ಪರಂಪರಾಗತವಾಗಿ ಚೌತಿ ಹಬ್ಬದಂದು ಸುಜೀರ್ ಕುಟುಂಬದವರು ನಿರಂತರವಾಗಿ 140 ವರ್ಷಗಳಿಂದ ಆರಾಧನೆ ಮಾಡಿಕೊಂಡು ಬಂದಿರುವುದು ಮಂಗಳೂರಿನ ನಗರದ ಮಧ್ಯ ಭಾಗದಲ್ಲಿ ವಿಶೇಷತೆಯಾಗಿದೆ

ಇಲ್ಲಿ ಬೆಳಗ್ಗೆ ಗಣ ಹೋಮ ದಶಕಗಳ ಕಾಲದ ಹಿಂದೆ ಕೀರ್ತಿ ಶೇಷ ಸುಜೀರ್ ಯುವರಾಜ ಆಚಾರ್ಯರು ಗಣಹೋಮ ಆರಂಭ ಮಾಡಿದ್ದರೆಂದು ಸುದ್ದಿ. ಮಧ್ಯಾಹ್ನ ಮಹಾಪೂಜೆ ಸಂಜೆ ವಿಸರ್ಜನೆ ನಡೆದು ಕೊಂಡುಬಂದಿದೆ.

ಕಳೆದ 140 ವರ್ಷಗಳಿಂದಲೂ ಮನೆಯಲ್ಲಿಯೇ ಶ್ರೀ ಗಣಪತಿಯ ವಿಗ್ರಹವನ್ನು ಆವೆ ಮಣ್ಣಿನಿಂದ ತಯಾರಿಸಿ ಪೂಜೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕುಟುಂಬದ ಸದಸ್ಯರು (ಮಂಗಳೂರು, ಚೆನ್ನೈ, ಬೆಂಗಳೂರು, ಮುಂಬೈ ) ಮಾಡಿಕೊಂಡು ಬಂದಿರುತ್ತಾರೆ).

21 ಬಗೆಯ ವಿವಿಧ ಖಾದ್ಯಗಳನ್ನು ಮನೆಯಲ್ಲಿಯೇ ಗ್ರಹಿಣಿಯರು ಮಾಡಿ ದೇವರಿಗೆ ಸಮರ್ಪಿಸಲಾಗುತ್ತದೆ..

ಸುಜೀರ್ ಗಣಪತಿಯ ವಿಶೇಷತೆಗಳು ಕಳೆದ 140 ವರ್ಷಗಳಿಂದಲೂ ಅವೆಮಣ್ಣಿನಿಂದ ಸುಜೀರ್ ಕುಟುಂಬದ ಸದಸ್ಯರೇ ತಲೆ ತಲೆ ತಲಾoತರದಿಂದ ಮಾಡಿಕೊಂಡು ಬಂದಿದ್ದಾರೆ.

“ಸುಜೀರ್” ಎಂಬುದು ಮಂಗಳೂರಿನ ಫರಂಗಿಪೇಟೆ ಬಳಿ ಇರುವ ಊರು ಇಲ್ಲಿ ಸುಜೀರ್ ಕುಟುಂಬದ ಹಿರಿಯ ತಲೆಮಾರಿನ ಸುಜೀರ್ ನಾಗಪ್ಪ ಆಚಾರ್ಯ ದಂಪತಿಗಳಿಗೆ ಸಂತಾನ ಭಾಗ್ಯ ಇಲ್ಲದ ಕಾರಣ ಅವರು ತನಗೆ ಮಗು ಆದರೆ ಮಗುವಿಗೆ ಗಣಪತಿ ಎಂದು ಪುತ್ರನಿಗೆ ನಾಮಕರಣ ಮಾಡುತ್ತೇನೆ ಮತ್ತು ಪ್ರತೀ ವರ್ಷ ಚೌತಿ ಸಂದರ್ಭ ಗಣಪತಿ ವಿಗ್ರಹ ರಚಿಸಿ ಆರಾಧಿಸಿಕೊಂಡು ಬರುತ್ತೇನೆಂದು ಹರಕೆ ಹೊತ್ತ ಫಲವಾಗಿ 1885 ಇಸವಿಯಲ್ಲಿ ಪುತ್ರ ಸಂತಾನ ಪ್ರಾಪ್ತಿ ಸುಜೀರ್ ನಾಗಪ್ಪ ಆಚಾರ್ಯರಿಗೆ ಆಯಿತು.

ತಾನು ಹೇಳಿಕೊಂಡ ಹರಕೆಯಂತೆ ಪುತ್ರನಿಗೆ ಗಣಪತಿ ಎಂದು ನಾಮಕರಣ ಮಾಡಿ 1885 ಇಸವಿಯಿಂದಲೇ ಚೌತಿ ಸಂದರ್ಭ ಗಣಪತಿಯ ವಿಗ್ರಹ ಆವೆಮಣ್ಣಿನಿಂದ ರಚಿಸಿ ನಿರಂತರವಾಗಿ ಕುಟುಂಬದ ಸದಸ್ಯರು ಕಳೆದ 140 ವರ್ಷಗಳಿಂದ ಅನೇಕ ನೆಂಟರಿಷ್ಟರ ಉಪಸ್ಥಿತಿಯಲ್ಲಿ ಚೌತಿ ಹಬ್ಬ ಸಂಭ್ರಮ, ಸಡಗರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

ಹರಕೆಯ ರೂಪದಲ್ಲಿ ಗಣಪತಿ ದೇವರಿಗೆ ಬೆಳ್ಳಿಯ ಮತ್ತು ಕೆಲವೊಂದು ಚಿನ್ನದ ವಸ್ತು ರೂಪದಲ್ಲಿ ಸುಜೀರ್ ಕುಟುಂಬದವರಲ್ಲದೆ ಇತರರೂ ಹರಕೆಯ ರೂಪದಲ್ಲಿ ನೀಡಿರುತ್ತಾರೆ

ಸಾರ್ವಜನಿಕ ಗಣೇಶೋತ್ಸವದಂತೆ ವರ್ಷ ವರ್ಷ ವಿವಿಧ ರೀತಿಯ ಗಣಪತಿ ರಚಿಸದೇ ಸಂಪ್ರದಾಯಿಕ ರೀತಿಯಲ್ಲಿ ಪರಂಪರಾಗತವಾಗಿ ಒಂದು ಕುಟುಂಬದವರು ಆರಾಧನೆ ಮಾಡಿಕೊಂಡು ಬಂದಿರುವುದು ವಿಶೇಷವಾಗಿದೆ .
ಸುಜೀರ್ ನಾಗಪ್ಪ ಆಚಾರ್ಯರ ಪುತ್ರ ಸುಜೀರ್ ಗಣಪತಿ ಆಚಾರ್ಯರು ಪ್ರಸಿದ್ಧ ಕಲಾತ್ಮಕ ಸ್ವರ್ಣ ಶಿಲ್ಪಿಯಾಗಿದ್ದರು . ಇವರು ಮಂಜುಟ್ಟಿ ಒಳಗೆ ಹಾಕಬಹುದಾದಂತಹ ಚಿನ್ನದ ಚೈನ್ ಮಾಡಿರುತ್ತಾರೆ . ಚಿನ್ನಾಭರಣಗಳ ಕುಸುರಿ ಕೆಲಸದ ಕಲಾ ನೈಪುಣ್ಯತೆಗೆ ಆ ಕಾಲದ ಮೈಸೂರು ಮಹಾರಾರಾಜರು ಇವರಿಗೆ ಪಾರಿತೋಷಕ ನೀಡಿ ಗೌರವಿಸಿದ್ದಾರೆ

ಸುಜೀರ್ ಗಣಪತಿ ಆಚಾರ್ಯರ ನಂತರ ಅವರ ಪುತ್ರರಾದ ಸುಜೀರ್ ಜಯರಾಮ ಆಚಾರ್ಯ ಯುವರಾಜ ಆಚಾರ್ಯ ವೇಣುಗೋಪಾಲ್ ಆಚಾರ್ಯ ಶಿವಶಂಕರ ಆಚಾರ್ಯ ರಮೇಶ್ ಆಚಾರ್ಯ ರವೀಂದ್ರ ಆಚಾರ್ಯ ಇವರುಗಳು ಗಣಪತಿಯ ಆರಾಧನೆಯನ್ನು ಮಾಡಿಕೊಂಡು ಬಂದಿರುತ್ತಾರೆ

.*ಕಳೆದ 4 ದಶಕಗಳಿಂದ ಸುಜೀರ್ ಪ್ರವೀಣ್* (ಕಳೆದ 40 ವರ್ಷಗಳಿಂದ ವಿಗ್ರಹ ರಚಿಸುತ್ತಿದ್ದಾರೆ) ಸುಜೀರ್ ಕುಟುಂಬದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಚೌತಿ ಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಮಾಡಿಕೊಂಡು ಬಂದಿದ್ದಾರೆ.

_Sathish Kapikad 

Share.
Leave A Reply

Exit mobile version