
(ಕಡತ ಚಿತ್ರ)
ಮಂಗಳೂರು,ಆ.18(ಕ.ವಾ):- ಕಲ್ಚರಲ್ ಹೈವೇ, ಲೆಕ್ಸಾ ಲೈಟಿಂಗ್ ಟೆಕ್ನಲಾಜೀಸ್ ಪ್ರೈವೇಟ್ ಅಮಿಟೆಡ್ ಹಾಗೂ ಬ್ಲಿಂಕಿಟ್ ಕಂಪೆನಿಗಳ ವತಿಯಿಂದ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಖಾಲಿ ಇರುವ ಎಚ್.ಆರ್ ಇಂಚಾರ್ಜ್, ಪ್ರೊಡಕ್ಷನ್ ಅಸಿಸ್ಟೆಂಟ್ ಸೂಪರ್‍ವೈಸರ್, ಪ್ರೊಡಕ್ಷನ್ ಹೆಲ್ಸ್, ಎಲೆಕ್ನಿಷಿಯನ್, ಎಆರ್‍ಸಿ ವೆಲ್ಡರ್ಸ್, ಆಫೀಸ್ ಅಸಿಸ್ಟೆಂಟ್, ವಿಎಂಸಿ/ಸಿಎನ್‍ಸಿ, ಸೂಪರ್‍ವೈಸರ್, ಅಸಿಸ್ಟೆಂಟ್ ಸ್ಟೋರ್ ಮ್ಯಾನೇಜರ್, ಫ್ರಂಟ್ ಆಫೀಸ್, ಫ್ರಂಟ್ ಡೆಸ್ಕ್, ಬಿಡಿಎಮ್, ಸೇಲ್ಸ್ ಎಕ್ಸಿಕ್ಯೂಟಿವ್, ಹೌಸ್ ಕೀಪಿಂಗ್, ಪಿಕ್ಕರ್, ಪ್ಯಾಕರ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಗಸ್ಟ್ 20 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30 ರವರೆಗೆ ಪಡೀಲ್ ಜಿಲ್ಲಾಡಳಿತ ಕೇಂದ್ರದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ ಪಾಸ್/ಫೇಲ್, ಪಿ.ಯು.ಸಿ, ಯಾವುದೇ ಪದವಿ, ಡಿಪ್ಲೊಮಾ ಅಥವಾ ಐಟಿಐ(ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಷಿಯನ್) ವಿದ್ಯಾರ್ಹತೆ ಹೊಂದಿರುವ 18 ರಿಂದ 35 ವರ್ಷದ ಒಳಗಿನ ಪುರುಷ ಅಭ್ಯರ್ಥಿಗಳು ಮಾತ್ರ ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಪ್ರಕಟಣೆ ತಿಳಿಸಿದೆ.
_Sathish Kapikad


