Close Menu
SK Media NewsSK Media News
    What's Hot

    ವಾರ್ಡ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದ ಡಿಸಿಸಿ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ : ತಳಮಟ್ಟದ ಕಾರ್ಯಕರ್ತರಿಗೆ “ನಾನು ನಿಮ್ಮ ಜೊತೆ ಇದ್ದೇನೆ” ಎಂಬ ಭರವಸೆ 

    September 11, 2026

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸಂಭ್ರಮ : 108 ತೆಂಗಿನಕಾಯಿಗಳ ಮಹಾಗಣಪತಿ ಹೋಮ, ವೈಭವದ ಸಾಮೂಹಿಕ ರಂಗಪೂಜೆ

    September 11, 2026

    ಡಿ.ಫಾರ್ಮಾ, ಬಿ.ಫಾರ್ಮಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉದ್ಯೋಗಾವಕಾಶ : ಸೆ.15 ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    September 11, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಮಾತಾ ಅಮೃತಾನಂದಮಯಿ ಮಠ, ಮಂಗಳೂರು : ಸ್ವಾಮಿನಿ ಮಂಗಳಾಮೃತ ಪ್ರಾಣರವರ ಸಾರಥ್ಯದಲ್ಲಿ  ಗುರು ಪೂರ್ಣಿಮಾ- ಗುರುಪೂಜೆ ಸಂಪನ್ನ 
    ಕರಾವಳಿ

    ಮಾತಾ ಅಮೃತಾನಂದಮಯಿ ಮಠ, ಮಂಗಳೂರು : ಸ್ವಾಮಿನಿ ಮಂಗಳಾಮೃತ ಪ್ರಾಣರವರ ಸಾರಥ್ಯದಲ್ಲಿ  ಗುರು ಪೂರ್ಣಿಮಾ- ಗುರುಪೂಜೆ ಸಂಪನ್ನ 

    August 11, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಆಗಸ್ಟ್ 9 ರಂದು ಗುರು ಪೂರ್ಣಿಮೆಯನ್ನು ಗುರುಪೂಜೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
    ಅಮ್ಮನ ಭಕ್ತರ ಅಭಿಲಾಷೆಯಂತೆ 41ದಿನಗಳ ಕಾಲ ಭಕ್ತರು ಗುರುಪೂಜೆ ನೆರವೆರಿಸುತ್ತಿದ್ದು ಇದರ ಸಮಾರೋಪ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

    ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ಸಾರಥ್ಯದಲ್ಲಿ
    ಪೂರ್ವಾಹ್ನ 9.30ರಿಂದ ಮಧ್ಯಾಹ್ನ1.00 ರ ತನಕ ಶ್ರೀ ಗುರು ಪಾದುಕಾ ಪೂಜೆ,ಗುರು ಹೋಮ, ಮಹಾ ಮೃತ್ಯುಂಜಯ ಹೋಮ, ಸರ್ವೈಶ್ವರ್ಯ ಪೂಜೆ, ಆರತಿ ಮತ್ತು ಭಕ್ತರಿಂದ ಕ್ಷೀರಾಭಿಷೇಕ,ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು.

    ಅಮೃತ ಫ್ಯಾಮಿಲಿ ಸದಸ್ಯತ್ವ ಅಭಿಯಾನ:

    ವಿಶ್ವದ ಪ್ರತಿಷ್ಠಿತ ಅಮೃತಾ ಫ್ಯಾಮಿಲಿಯ ನೂತನ ಸದಸ್ಯರಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಮಾಜಮುಖಿ ಸೇವಾಕಾಂಕ್ಷಿಗಳು ಮತ್ತು ಆಧ್ಯಾತ್ಮಿಕ ಸಾಧನೆಯ ಆಸಕ್ತ ಭಕ್ತರು ಸದಸ್ಯತನ ಸ್ವೀಕರಿಸಿದರು.

    ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮಿನ್ ಅಮೃತ ಸಂಗಮ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಮತ್ತು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಅರ್ಪಿಸಿದರು.

    ಬ್ರಹ್ಮಚಾರಿ ರತೀಶ್ ಮತ್ತು ತಂಡದವರು ಗುರು ಹೋಮ ಮತ್ತು ಮಹಾಮೃತ್ಯುಂಜಯ ಹೋಮದ ವಿಧಿವಿಧಾನಗಳನ್ನು ನೆರವೇರಿಸಿದರು.

    ಈ ಸಂದರ್ಭದಲ್ಲಿ ಅಮ್ಮನ ಆಶ್ರಮದ ವಿವಿಧ ಸೇವಾ ಸಮಿತಿಗಳ ಪದಾಧಿಕಾರಿಗಳು ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

    ಅಮೃತ ವಿದ್ಯಾಲಯಂ ಮಂಗಳೂರು : ಗುರುಪೂರ್ಣಿಮೆ ಪ್ರಯುಕ್ತ ಸಂಸ್ಕೃತಿ ಪೂಜೆ

    ಅಮೃತ ವಿದ್ಯಾಲಯಂನಲ್ಲಿ ಸದ್ಗುರು ಶ್ರೀ ಮಾತಾ ಅಮೃತಾ ನಂದಮಯ ದೇವಿಯವರ ಪ್ರೇರಣೆಯಂತೆ ರವಿವಾರ ಗುರುಪೂರ್ಣಿಮೆ ಪ್ರಯುಕ್ತ ಸಂಸ್ಕೃತಿ ಪೂಜೆ ಆಯೋಜಿಸಲಾಯಿತು.

    ಸಾಂಪ್ರದಾಯಿಕ ಸ್ವಾಗತದೊಂದಿಗೆ ವಿದ್ಯಾರ್ಥಿಗಳು ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಹಿಂದೂ ಧರ್ಮದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುವ ವೇದ ಮಂತ್ರ ಪಠನ ನಡೆಯಿತು.
    ಸಂಸ್ಕೃತಿ ಪೂಜೆಯನ್ನು ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಚಾಲನೆ ನೀಡಿದರು.

    ಮುಖ್ಯ ಅತಿಥಿಗಳಾದ ಶ್ರೀ ಭರತ್ ಪ್ರಭು, HPCL ರಿಟೇಲ್ ಔಟ್‌ಲೆಟ್‌ನ ವ್ಯವಸ್ಥಾಪಕ ಪಾಲುದಾರರು ಹಾಗೂ ಸನಾತನ ಸಂಸ್ಥೆಯ ಸಕ್ರಿಯ ಕಾರ್ಯಕರ್ತರು ಸಭೆಯನ್ನುದ್ದೇಶಿಸಿ ಆದರ್ಶ ಶಿಷ್ಯನಾಗುವ ಮಹತ್ವ ಹಾಗೂ ಪವಿತ್ರ ಗುರು–ಶಿಷ್ಯ ಪರಂಪರೆಯನ್ನು ಅನುಸರಿಸುವ ಅಗತ್ಯವನ್ನು ಒತ್ತಿ ಹೇಳಿದರು.

    ಜೀವನದಲ್ಲಿ ಎದುರಾಗುವ ಪ್ರತಿಯೊಂದು ಅನುಭವದಿಂದಲೂ — ಅದು ಸಕಾರಾತ್ಮಕವಾಗಿರಲಿ ಅಥವಾ ನಕಾರಾತ್ಮಕವಾಗಿರಲಿ — ಕಲಿತು, ಅವುಗಳನ್ನು ನಮ್ಮ ಬೆಳವಣಿಗೆ ಮತ್ತು ಆತ್ಮೋನ್ನತಿಗೆ ಅವಕಾಶಗಳಾಗಿ ಬಳಸಿಕೊಳ್ಳಬೇಕು ಎಂದು ಅವರು ಪ್ರೇರೇಪಿಸಿದರು.

    ಅನಂತರ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ನಿರ್ದೇಶನದಂತೆ ಸಂಸ್ಕೃತಿ ಪೂಜೆಯ ವಿಧಿ ವಿಧಾನಗಳು ನಡೆಯಿತು. ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ತಮ್ಮ ತಂದೆ ತಾಯಿಯರ ಪಾದ ಪೂಜೆ ನೆರವೇರಿಸಿದರು.
    ಅವರು ಆಶೀರ್ವಚನವಿತ್ತು

    ಗುರು ಪೂರ್ಣಿಮೆಯ ಮಹತ್ವ ಹಾಗೂ ಗುರು ತತ್ತ್ವದ ಅಪಾರ ಶಕ್ತಿಯನ್ನು ವಿವರಿಸಿದರು. ಗುರುವು ವ್ಯಕ್ತಿಗೆ ಜೀವನವನ್ನು ಜ್ಞಾನ ಮತ್ತು ವಿವೇಕ ನೀಡಿ ಉತ್ತಮ ಮಾರ್ಗದರ್ಶನ ನೀಡುತ್ತಾರೆ ಎಂದು ತಿಳಿಸಿದರು. ಇದನ್ನು ಭಗವಾನ್ ಶ್ರೀಕೃಷ್ಣ ಮತ್ತು ಅರ್ಜುನರ ಪವಿತ್ರ ಸಂಬಂಧದ ಉದಾಹರಣೆಯ ಮೂಲಕ ವಿವರಿಸಿದರು.

    ಸಮಾಜದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಅಮ್ಮನವರು ಮಾಡುತ್ತಿರುವ ಯೋಜನೆಗಳು ಹಾಗೂ ಸುಸಂಸ್ಕೃತ ಸಮೃದ್ಧ ಸಮಾಜಕ್ಕಾಗಿ ಸಂಸ್ಕೃತಿ ಪೂಜೆಯ ಮಹತ್ವವನ್ನು ತಿಳಿಸಿದರು.

    ಈ ಸಂದರ್ಭದಲ್ಲಿ ಪೋಷಕರಾದ ಶ್ರೀಮತಿ ಭವಾನಿ ಪ್ರಭು ಮತ್ತು ಶ್ರೀಮತಿ ಚೇತನಾ ಅವರು ಸಂಸ್ಥೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿ, ಸಂಸ್ಕೃತಿ ಪೂಜೆಯ ತಮ್ಮ ಅನುಭವವನ್ನು ಹಂಚಿಕೊಂಡರು.

    ನಂತರ ಶ್ರೀ ಶೇಷಂ ಶಯನ ಕುಣಿತ ಭಜನಾ ತಂಡದ ಸಂಸ್ಥಾಪಕ ಹಾಗೂ ತರಬೇತುದಾರರಾದ ಶ್ರೀ ರಂಜಿತ್ ಕಾಂಚನ್ ಅವರನ್ನು ಸನ್ಮಾನಿಸಲಾಯಿತು.
    ಆಯುಧ್ ತಂಡ ಮತ್ತು ವಿದ್ಯಾರ್ಥಿಗಳಿಂದ ಗುರು ಸ್ತೋತ್ರ ಅಷ್ಟೋತ್ತರ ಪಠಣೆ ಹಾಗೂ ಭಜನೆಗಳು ಸಂಪನ್ನಗೊಂಡಿತು.

    ಕಾರ್ಯಕ್ರಮವು ಎಲ್ಲರಲ್ಲೂ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಬಗ್ಗೆ ಹೊಸ ಅರಿವು ಹಾಗೂ ಗೌರವವನ್ನು ಮೂಡಿಸುವ ಉದ್ದೇಶವನ್ನು ಹೊಂದಿತು.

    ಶಾಲಾ ಪ್ರಾಂಶುಪಾಲೆ ಮಧುಲಿಕ, ಉಪ ಪ್ರಾಂಶುಪಾಲೆ ರೇಖಾ ಕಾಮತ್, ಉಪಸ್ಥಿತರಿದ್ದರು.

    ಶಿಕ್ಷಕಿಯರಾದ ವನಮಾಲ ಶೆಣೈ ಸ್ವಾಗತಿಸಿ, ಮಿನಲ್ ರಾವ್ ಸ್ವಾಗತಿಸಿದರು.

    _Sathish Kapikad
    ಮಂಗಳ ಪ್ರಭಾ ಕಾರ್ಯಕ್ರಮದ ನಿರೂಪಣೆಗೈದರು.

    Share. Facebook Twitter Pinterest LinkedIn Email WhatsApp
    Previous Articleದೂರದರ್ಶನ ಬಿ-ಹೈ ಗ್ರೇಡ್ ಪಡೆದ ನೃತ್ಯವಿದುಷಿ ಅಯನಾ ಪೆರ್ಲ
    Next Article 80ನೇ ಸ್ವಾತಂತ್ರ ದಿನಾಚರಣೆ ಪ್ರಯುಕ್ತ  ನಾಳೆ ಮಂಗಳೂರಿನಲ್ಲಿ ತಿರಂಗಾ ಯಾತ್ರೆ 

    Related Posts

    ಕರಾವಳಿ

    ವಾರ್ಡ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದ ಡಿಸಿಸಿ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ : ತಳಮಟ್ಟದ ಕಾರ್ಯಕರ್ತರಿಗೆ “ನಾನು ನಿಮ್ಮ ಜೊತೆ ಇದ್ದೇನೆ” ಎಂಬ ಭರವಸೆ 

    September 11, 2026
    ಕರಾವಳಿ

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸಂಭ್ರಮ : 108 ತೆಂಗಿನಕಾಯಿಗಳ ಮಹಾಗಣಪತಿ ಹೋಮ, ವೈಭವದ ಸಾಮೂಹಿಕ ರಂಗಪೂಜೆ

    September 11, 2026
    ಕರಾವಳಿ

    ಡಿ.ಫಾರ್ಮಾ, ಬಿ.ಫಾರ್ಮಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉದ್ಯೋಗಾವಕಾಶ : ಸೆ.15 ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    September 11, 2026
    Add A Comment
    Leave A Reply Cancel Reply

    Top Posts

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.