
ಸಾಂದರ್ಭಿಕ ಚಿತ್ರ
ಮಂಗಳೂರು,ಆ.06 (ಕ.ವಾ):- ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮದ್ಯದೊಂದಿಗೆ ಆಹಾರ ಪೂರೈಸುವ ಬಾರ್ ಗಳ ಮೇಲೆ ಬುಧವಾರ ರಾತ್ರಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಬಾರಿಗೆ ಆಗಮಿಸಿದವರ ಗುರುತಿನ ಚೀಟಿ ತಪಾಸಣೆ ನಡೆಸಲಾಯಿತು.ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಕೆ ಶಂಕೆ ಹಿನ್ನೆಲೆಯಲ್ಲಿ ಮಂಗಳೂರಿನ ಕೆಲವು ಬಾರ್ ಗಳಿಗೆ ಅಧಿಕಾರಿಗಳುದಿಢೀರ್ ದಾಳಿ ನಡೆಸಿದ್ದಾರೆ
ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಸದಂತೆ ಸನ್ನದುದಾರರಿಗೆ ಸೂಚನೆ ನೀಡಲಾಯಿತು. ಮದ್ಯ ಪೂರೈಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಬಕಾರಿ ಅಧಿಕಾರಿಗಳು ಎಚ್ಚರಿಸಿದರು.
ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ನಿರ್ದೇಶನದಂತೆ ದಾಳಿಯಲ್ಲಿ ಮಂಗಳೂರು ಉಪವಿಭಾಗ 1 ರ ಉಪ ಅಧೀಕ್ಷಕಿ ಗಾಯತ್ರಿ ಸಿ ಹೆಚ್ ಅವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಚೇತನ್ ಕುಮಾರ್, ಪ್ರತಿಭಾ, ಮಿಲ್ಲರ್ ಜಾನ್ಸನ್ ಡಿಸೋಜ, ಕಮಲ, ದತ್ತಗುರು, ಉಪನಿರೀಕ್ಷಕರಾದ ರಜಾಕ್, ಜಯಪ್ಪ ಹಾಗೂ ಪೇದೆಗಳಾದ ಸಂದೀಪ್, ಸಂಧ್ಯಾ, ಶಿವಲಿಂಗಪ್ಪ, ಆನಂದ್, ಮಂಜಪ್ಪ, ದೇವರಾಜ್ ಪಾಲ್ಗೊಂಡಿದ್ದರು.
_Sathish Kapikad


