Close Menu
SK Media NewsSK Media News
    What's Hot

    ವಾರ್ಡ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದ ಡಿಸಿಸಿ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ : ತಳಮಟ್ಟದ ಕಾರ್ಯಕರ್ತರಿಗೆ “ನಾನು ನಿಮ್ಮ ಜೊತೆ ಇದ್ದೇನೆ” ಎಂಬ ಭರವಸೆ 

    September 11, 2026

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸಂಭ್ರಮ : 108 ತೆಂಗಿನಕಾಯಿಗಳ ಮಹಾಗಣಪತಿ ಹೋಮ, ವೈಭವದ ಸಾಮೂಹಿಕ ರಂಗಪೂಜೆ

    September 11, 2026

    ಡಿ.ಫಾರ್ಮಾ, ಬಿ.ಫಾರ್ಮಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉದ್ಯೋಗಾವಕಾಶ : ಸೆ.15 ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    September 11, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಬರುತ್ತಿದ್ದಾಳೆ “ಶ್ರೀಮತಿ ಸತ್ಯಭಾಮ” :ಮೇಕಪ್‌ಗೆ ಕುಳಿತಿದ್ದಾಳೆ
    ಕರಾವಳಿ

    ಬರುತ್ತಿದ್ದಾಳೆ “ಶ್ರೀಮತಿ ಸತ್ಯಭಾಮ” :ಮೇಕಪ್‌ಗೆ ಕುಳಿತಿದ್ದಾಳೆ

    July 22, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು: ಆ ಪೋಸ್ಟರೇ ಹೊಸತನವನ್ನು ತುಂಬಿಕೊಂಡಿದೆ, ತಬ್ಬಿಕೊಂಡಿದೆ. “ಶ್ರೀಮತಿ ಸತ್ಯಭಾಮ” ಟೈಟಲ್ ಅನ್ನೇ ಆಭರಣ, ಸೀರೆಯಿಂದ ಅಲಂಕರಿಸಲಾಗಿದೆ.

    Born to Rule ಎಂಬ ಅಡಿಬರಹ ಹಾಗೂ ಸತ್ಯಭಾಮ ನಿಂತ ಭಂಗಿಯು ಆಕೆಯ ಪಾತ್ರ ಎಂಥದ್ದು ಎಂಬುದನ್ನೂ ಸೂಚಿಸುತ್ತದೆ. ಅವೆಲ್ಲವುಗಳಿಂದ ಮುಖ್ಯವಾಗಿ – ಕೈಲಾಸ – ವೈಕುಂಠ ತಿರ್ಗ್ದ್ ಕಲಾಸಂಗಮ ಕುಡ ಭೂಲೋಕೊಗು ಎಂಬ ಒಂದು ವಾಕ್ಯದ ಮೂಲಕ ಈ ತಂಡವು ಪೌರಾಣಿಕ ಕಥೆಗಳ ಬಳಿಕ ಮತ್ತೆ ಸಾಮಾಜಿಕ ಕಥೆಗೆ ಹೊರಳಿದೆ ಎಂಬುದನ್ನು ವಿಭಿನ್ನವಾಗಿ ತಿಳಿಸುವ ಪ್ರಯತ್ನ ಮಾಡಿದೆ.

    ತುಳು ರಂಗಭೂಮಿಯ ಬದಲಾವಣೆಯ ಹರಿಕಾರ, ಹೊಸತನದ ರೂವಾರಿ ಎಂದೇ ಗುರುತಿಸಿಕೊಂಡಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಎರಡು ಮೂರು ವರ್ಷಗಳಿಂದ ಪೌರಾಣಿಕ, ಐತಿಹಾಸಿಕ ನಾಟಕಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಈಗ ಮತ್ತೆ ಸಾಮಾಜಿಕ ನಾಟಕಕ್ಕೆ ಮರಳಿದ್ದಾರೆ.

    ಈ ಹಿಂದೆಯೂ ಅವರು ಒರಿಯರ್ದೊರಿ ಅಸಲ್, ಮದಿಮೆ, ಕುಟುಂಬ, ಕೋಡೆ – ಇನಿ- ಎಲ್ಲೆ, ಮೈತಿದಿ ಮುಂತಾದ ಸಾಮಾಜಿಕ ನಾಟಕಗಳ ಮೂಲಕ ಜನರ ಮನಸ್ಸು ಗೆದ್ದವರು. ಅದಾದ ಬಳಿಕ ಅವರಿಗೆ “ಶಿವದೂತೆ ಗುಳಿಗೆ” ನಾಟಕವು ಅಪಾರ ಖ್ಯಾತಿ ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಅದರ ಬೆನ್ನಿಗೆ “ಛತ್ರಪತಿ ಶಿವಾಜಿ” ನಾಟಕದ ಮೂಲಕ ಜನಮನ್ನಣೆ ಗಳಿಸಿದರು. ಈಗ ಈ ಬಾರಿ “ಶ್ರೀಮತಿ ಸತ್ಯಭಾಮ” ಎಂಬ ಸಾಮಾಜಿಕ ನಾಟಕದ ಮೂಲಕ ಜನರ ಮುಂದೆ ಬರಲಿದ್ದಾರೆ.

    “ಶ್ರೀಮತಿ ಸತ್ಯಭಾಮ” ನಾಟಕದ ಪೋಸ್ಟರ್ ಗಳು ವಾಟ್ಸಾಪ್ ಗ್ರೂಪ್ ಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ಮುಖ್ಯವಾಗಿ ಸತ್ಯಭಾಮ ಪಾತ್ರಧಾರಿಯ ಬಗ್ಗೆ ಸಾಕಷ್ಟು ಕುತೂಹಲವಿದೆ. ಯಾರು ಮಾಡಿರಬಹುದು ಈ ಪಾತ್ರವನ್ನು ಎಂಬ ಕುತೂಹಲವನ್ನು ತಣಿಸಲು ಸದ್ಯಕ್ಕಂತೂ ಕೊಡಿಯಾಲ್‌ಬೈಲ್ ಸಿದ್ದರಿಲ್ಲ. ತಂಡದಲ್ಲಿ ಯಾವೆಲ್ಲ ಪ್ರಮುಖ ಕಲಾವಿದರು ಇದ್ದಾರೆ ಎಂಬುದನ್ನೂ ಕಾದು ನೋಡಬೇಕಷ್ಟೆ.

    ಈ ನಾಟಕದಲ್ಲೂ ಅದ್ದೂರಿ ಸೆಟ್ಟಿಂಗ್, ವಿಶೇಷ ತಾಂತ್ರಿಕತೆ ಬಳಸಲು ಕೊಡಿಯಾಲ್ ಬೈಲ್ ಮುಂದಾಗಿದ್ದಾರೆ. ಅದ್ದೂರಿತನ, ತಾಂತ್ರಿಕತೆಯಿಂದಲೇ “ಶಿವಧೂತೆ ಗುಳಿಗೆ’ ಜನಮಚ್ಚುಗೆ ಪಡೆದಿದೆ. ಆದ್ದರಿಂದ ಹೊಸ ನಾಟಕದಲ್ಲೂ ಅದ್ದೂರಿತನಕ್ಕೆ ಕಿಂಚಿತ್ತೂ ಕೊರತೆಯಾಗಬಾರದು ಎಂದು ಕೊಡಿಯಾಲ್‌ಬೈಲ್ ವಿಶೇಷ ಆಸ್ಥೆ ವಹಿಸಿದ್ದಾರೆ.

    ಸಂಗೀತದ ವಿಷಯಕ್ಕೆ ಬಂದರೆ ಮತ್ತೆ ಅದೇ ಹೆಮ್ಮೆಯ ಎ. ಕೆ. ವಿಜಯ್ ಕೋಕಿಲಾ ಅವರೇ ಕೆಲಸ ಮಾಡಿದ್ದಾರೆ. ಇವರು ಕಲಾಸಂಗಮದ ಹೆಮ್ಮೆಯ ಮತ್ತು ಖಾಯಂ ಸಂಗೀತ ನಿರ್ದೇಶಕರಾಗಿದ್ದಾರೆ. ಕೊಡಿಯಾಲ್‌ಬೈಲ್ ಅವರ ಎಲ್ಲ ಯಶಸ್ವಿ ನಾಟಕಗಳ ಹಿಂದೆ ಈ ಸಂಗೀತ ನಿರ್ದೇಶಕರ ಕೊಡುಗೆ ಪ್ರಮುಖವಾಗಿದೆ.

    ಶ್ರೀಮತಿ ಸತ್ಯಭಾಮ ಮೇಕಪ್‌ಗೆ ಕುಳಿತಿದ್ದಾಳೆ. ಸದ್ಯದಲ್ಲೇ ಎದ್ದು ಬರಲಿದ್ದಾಳೆ ನಿಮ್ಮ ಮುಂದೆ. ಸ್ವಾಗತಿಸಲು ಸಿದ್ಧರಾಗಿ.

    ನವಂಬರ್ 1ರಂದು ಸುರತ್ಕಲ್ ನಲ್ಲಿ “ಶ್ರೀಮತಿ ಸತ್ಯಭಾಮ”:

    ವಿಜಯಕುಮಾರ್ ಕೊಡಿಯಾಲ್ ಬೈಲ್ ಯಾವುದೇ ಹೊಸ ನಾಟಕಗಳನ್ನು ಮಾಡುವಾಗ ಅಲ್ಲಿ ಅದ್ದೂರಿತನವನ್ನು ಉಳಿಸಿಕೊಳ್ಳುತ್ತಾರೆ. ತಾಂತ್ರಿಕತೆಯನ್ನೂ ಧಾರಾಳವಾಗಿ ಬಳಸಿಕೊಳ್ಳುತ್ತಾರೆ. ಈ ಮೂಲಕ ಒಂದು ಹೊಸತನ ಹಾಗೂ ಭಿನ್ನತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

    ಈಗ “ಶ್ರೀಮತಿ ಸತ್ಯಭಾಮ” ನಾಟಕದಲ್ಲೂ ಆ ಹೊಸತನ, ಅದ್ದೂರಿತನ ಕಂಡುಬರಲಿದೆ. ಪ್ರಸ್ತುತ ಅವರು ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಬಿಝಿಯಾಗಿದ್ದಾರೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ “ಶ್ರೀಮತಿ ಸತ್ಯಭಾಮ” ನಮ್ಮ, ನಿಮ್ಮೆಲ್ಲರ ಊರಿಗೆ ಬರಲಿದ್ದಾಳೆ. ಹೀಗೆ ಸುತ್ತಾಡುತ್ತಾ ನವೆಂಬರ್ 1ರಂದು ರವಿವಾರ ಸಂಜೆ ಸುರತ್ಕಲ್‌ಗೆ ಬರುತ್ತಿದ್ದಾಳೆ. ಅಂದು ಶ್ರೀಮತಿ ಸತ್ಯಭಾಮಾಳ ಸಂಪೂರ್ಣ ಪರಿಚಯ ಪಡೆದುಕೊಳ್ಳಬಹುದು.

    _Sathish Kapikad

    Share. Facebook Twitter Pinterest LinkedIn Email WhatsApp
    Previous Articleಡಾ| ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಸಭಾಭವನದ ನಿರ್ಮಾಣ: ಮುಂಬೈಯಲ್ಲಿ ಸಮಾಲೋಚನ ಸಭೆ – ಡಿಸೆಂಬರ್ ನಲ್ಲಿ ಲೋಕಾರ್ಪಣೆ: ಐಕಳ
    Next Article ಯುವ ಕಾಂಗ್ರೆಸ್ ನ ದ.ಕ ಜಿಲ್ಲಾ ಕಾರ್ಯದರ್ಶಿಯಾಗಿ ಆಯಿಷಾ.ಪಿ ನೇಮಕ

    Related Posts

    ಕರಾವಳಿ

    ವಾರ್ಡ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದ ಡಿಸಿಸಿ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ : ತಳಮಟ್ಟದ ಕಾರ್ಯಕರ್ತರಿಗೆ “ನಾನು ನಿಮ್ಮ ಜೊತೆ ಇದ್ದೇನೆ” ಎಂಬ ಭರವಸೆ 

    September 11, 2026
    ಕರಾವಳಿ

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸಂಭ್ರಮ : 108 ತೆಂಗಿನಕಾಯಿಗಳ ಮಹಾಗಣಪತಿ ಹೋಮ, ವೈಭವದ ಸಾಮೂಹಿಕ ರಂಗಪೂಜೆ

    September 11, 2026
    ಕರಾವಳಿ

    ಡಿ.ಫಾರ್ಮಾ, ಬಿ.ಫಾರ್ಮಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉದ್ಯೋಗಾವಕಾಶ : ಸೆ.15 ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    September 11, 2026
    Add A Comment
    Leave A Reply Cancel Reply

    Top Posts

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.