
ಮಂಗಳೂರು, ಫೆಬ್ರವರಿ,04: ಶ್ರೀ ಮಾರಿಯಮ್ಮನ ಪ್ರಸಿದ್ಧ ಕ್ಷೇತ್ರ ಉರ್ವ ಶ್ರೀ ಮಾರಿಗುಡಿಯಲ್ಲಿ ವರ್ಷವಾಧಿ ಜಾತ್ರಾ ಮಹೋತ್ಸವ ಇದೇ ಬರುವ ಮಾ.9ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಈಗಾಗಲೇ ಫೆಬ್ರವರಿ 27, ಶುಕ್ರವಾರದಂದು ಬೆಳಗ್ಗೆ ಸಾಂಪ್ರದಾಯಿಕ ಪ್ರಸಾದ ಹಾರಿಸುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿದೆ.
ಮಂಗಳೂರಿನ ಉರ್ವ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಪ್ರತಿವರ್ಷ ಫೆಬ್ರವರಿ ಕೊನೆ ವಾರ ಅಥವಾ ಮಾರ್ಚ್ ತಿಂಗಳ ಆರಂಭದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಹಾಲು ಉಕ್ಕಿಸುವ ಪೂಜೆ, ದರ್ಶನ ಬಲಿ, ಕಂಚಿಲು ಸೇವೆ ಮತ್ತು ಮಹಾರಾಶಿ ಪೂಜೆಗಳು ಪ್ರಮುಖವಾಗಿವೆ.
ವರ್ಷವಾಧಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಾರ್ಚ್ 6 ರಂದು ಚಂಡಿಕಾ ಯಾಗ ಆಯೋಜಿಸಲಾಗಿದೆ. 2026ರ ಸಾಲಿನಲ್ಲಿ ಜಾತ್ರೋತ್ಸವವು ಮಾರ್ಚ್ 9 ಮತ್ತು 10 ರಂದು ನಡೆಯಲಿದೆ. ಇಲ್ಲಿ ಪ್ರತೀ ವರ್ಷ ಪ್ರಮುಖವಾಗಿ ಸೋಮವಾರ ಮತ್ತು ಮಂಗಳವಾರ ವಾರ್ಷಿಕ ಜಾತ್ರೆ ನಡೆಯುತ್ತದೆ. ಮಾರ್ಚ್ 14ರಂದು ಶ್ರೀ ಮಲರಾಯ ನೇಮೋತ್ಸವ ಜರಗುವ ಮೂಲಕ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ವಿಶೇಷ ಪೂಜೆಗಳು : ಉರ್ವ ಮಾರಿಗುಡಿ ವಾರ್ಷಿಕ ಪೂಜೆಯ ವಿಶೇಷ ಪೂಜೆಗಳು: ಹಾಲು ಉಕ್ಕಿಸುವ ಪೂಜೆ, ಕಳಸ ಪ್ರತಿಷ್ಠೆ, ಪ್ರಧಾನ ಹೋಮ, ಕಂಚಿಲು ಸೇವೆ, ಮತ್ತು ದರ್ಶನ ಬಲಿ.
ಪ್ರಸಾದ ಹಾರಿಸಿದ ಹತ್ತು ದಿನಗಳ ಬಳಿಕ ಜಾತ್ರಾ ಮಹೋತ್ಸವ ಆರಂಭ : ಕುದ್ರೋಳಿಯಿಂದ ಕುಂಜತ್ತ ಬೈಲ್‍ವರೆಗೆ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ವ್ಯಾಪ್ತಿಯಿದೆ. ಈ ಗ್ರಾಮದ ಬ್ರಾಹ್ಮಣೇತರ ಹಿಂದೂಗಳಿಗೆ ಉರ್ವ ಮಾರಿಗುಡಿ ಜಾತ್ರೆ ವಿಶೇಷ. ಪ್ರಸಾದ ಹಾರಿಸಿ ಹತ್ತು ದಿನಕ್ಕೆ ಜಾತ್ರೆ ಆರಂಭಗೊಳ್ಳುತ್ತದೆ. ಪ್ರಸಾದ ಹಾರಿಸಿದ ಬಳಿಕ ಉರ್ವ ಮಾರಿಗುಡಿಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಮದುವೆ, ಗೃಹಪ್ರವೇಶದಂತಹ ಶುಭಕಾರ್ಯಗಳು ನಡೆಯುವುದು ನಿಷಿದ್ಧ. ಅಲ್ಲದೆ ಈ ವ್ಯಾಪ್ತಿಗೆ ಒಳಪಡುವ ಹಿಂದೂಗಳು ತಮ್ಮ ಮನೆಗಳಲ್ಲಿ ಕೋಳಿ ಕುಯ್ದು ಪದಾರ್ಥ ಮಾಡುವ ಪದ್ಧತಿ ಇರುವುದಿಲ್ಲ, ಜೊತೆಗೆ ಕಡುಬು(ಪುಂಡಿ) ಹಾಗೂ ಸೇವಿಗೆಗೆ ಕೂಡ ಪುಂಡಿ ಮಾಡುವ ಹಾಗಿಲ್ಲ ಎಂಬ ಹಿರಿಯರ ನಂಬಿಕೆಯಿದೆ.
__Sathish Kapikad

