
ಮಂಗಳೂರು: ನಗರದ ಮುಲ್ಲಾಕಾಡ್ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ದತ್ತು ಪಡೆದಿರುವ ರೋಟರಿ ಕ್ಲಬ್ ಹಿಲ್‌ಸೈಡ್ ಮಂಗಳೂರು ಇವರು ಮಕ್ಕಳಿಗೆ ಮತ್ತು ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗೆ ನೆರವು ನೀಡುವ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿರುತ್ತಾರೆ.
ಈ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲಾ ರೋಟರಿ ಅನುದಾನದಲ್ಲಿ ಶಾಲೆಯ ಮುಂಭಾಗದಲ್ಲಿ ಮಕ್ಕಳಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ನೀಡಲು ಲೋಹದ ತಗಡಿನ ಮೇಲ್ಛಾವಣಿಯನ್ನು ಅಳವಡಿಸಲಾಯಿತು.

ಇದರ ಉದ್ಘಾಟನೆಯನ್ನು ರೋಟರಿ ಜಿಲ್ಲೆ 3181 ಇದರ ಗವರ್ನರ್ ಆದ ರೋ. ಶ್ರೀ ರಾಮಕೃಷ್ಣ.ಪಿ.ಕೆ ಇವರು ನೆರವೇರಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ಗೀತಾ ಲಕ್ಷ್ಮೀಶ್ ಅವರು ಮಾತನಾಡುತ್ತಾ, “ಇದೊಂದು ಉತ್ತಮ ಯೋಜನೆಯಾಗಿದ್ದು, ಶಾಲೆಗೆ ಅನುಕೂಲವಾಗಲಿದೆ” ಎಂದು ತಿಳಿಸಿ, ಶಾಲಾ ಪರವಾಗಿ ರೋಟರಿ ಕ್ಲಬ್ ಹಿಲ್‌ಸೈಡ್ ಇದರ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಹಿಲ್ಸ್ ನ ಅಧ್ಯಕ್ಷರಾದ ರೋ.ಪೀಟರ್ , ಕಾರ್ಯದರ್ಶಿ ರೋ.ವಾಸದೇವ ಶೆಟ್ಟಿಗಾರ್, ರೋ. ಶ್ರೀನಿವಾಸ್ ಕಿಣಿ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಜಿ ಉಸ್ಮಾನ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ವೀಣಾ, ರೋಟರಿ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
__Sathish Kapikad


