ಮಂಗಳೂರು: ಅಕ್ಷೋಬರ್ 25ರಿಂದ 29ರವರೆಗೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ರಾಷ್ಟ್ರ ಮಟ್ಟದ CBSE (ಹುಡುಗಿಯರ) ಈಜುಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್ನ ಸದಸ್ಯರಾದ ಕು| ಆರಾಧ್ಯ ಆಚಾರ್ ಇವರು ಬಾಲಕಿಯರ 14 ವರ್ಷದ ಒಳಗಿನ ವಯೋಮಾನದಲ್ಲಿ ಸ್ಪರ್ಧಿಸಿ 50 ಮೀಟರ್ ಫ್ರಿಸ್ಟೈಲ್ ಹಾಗೂ 50 ಮೀಟರ್ ಬಟರ್ ಫ್ಲೈ ಈಜುಸ್ಪರ್ಧೆಗಳಲ್ಲಿ 2 ಚಿನ್ನದ ಪದಕಗಳನ್ನು ಗಳಿಸಿ ಉತ್ತಮ ಸಾಧನೆ ಗೈದಿರುತ್ತಾರೆ.

ಈ ಸಾಧನೆಯ ಹಿನ್ನೆಲೆಯಲ್ಲಿ ಇವರು SGFI ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು CBSE ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಕೆನರಾ ಹೈಸ್ಕೂಲ್ ಡೊಂಗರಕೇರಿ (CBSE), ಮಂಗಳೂರು ಇಲ್ಲಿನ 8ನೇ ತರಗತಿಯ ವಿದ್ಯಾರ್ಥಿನಿಯಾಗಿರುತ್ತಾರೆ.

ಇವರು ಕ್ಲಬ್ಬಿನ ಹಿರಿಯ ಈಜು ತರಬೇತುದಾರರಾದ ಶ್ರೀ ಎಂ. ಶಿವಾನಂದ ಗಟ್ಟಿ ಇವರ ಮಾರ್ಗದರ್ಶನದಲ್ಲಿ ಮುಖ್ಯ ತರಬೇತುದಾರರಾದ ಶ್ರೀ ಶಿಶಿರ್ ಎಸ್. ಗಟ್ಟಿ (ಎನ್.ಐ.ಎಸ್), ತರಬೇತುದಾರರಾದ ಶ್ರೀ ಕೀರ್ತನ್ ಎಸ್. ಶೆಟ್ಟಿ, ಶ್ರೀ ಚೇತನ್ ಎಸ್ ಶೆಟ್ಟಿ, ಶ್ರೀ ರಾಜೇಶ್ ಖಾರ್ವಿ ಬೆಂಗ್ರೆ, ಶ್ರೀ ಪ್ರಥಮ್ ಎ ಕುಂದರ್ ಹಾಗೂ ಕು| ಪ್ರೇರಣಾ ಎ ಕುಂದರ್ ಇವರಿಂದ ಮಂಗಳೂರು ಮಹಾನಗರಪಾಲಿಕೆ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Sathish Kapikad 

Share.
Leave A Reply

Exit mobile version