ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಲೇಖಕಿ- ತುಳು ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ,  ಸಮಾಜ ಸೇವಾ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ -ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ , ಎ.ಸಿ ಭಂಡಾರಿ, ಮಾಧ್ಯಮ – ಛಾಯಾಗ್ರಹಣ ಕ್ಷೇತ್ರದಲ್ಲಿ ಆಯ್ಕೆಯಾದ ವಿಶ್ವನಾಥ ಸುವರ್ಣ

ಬೆಂಗಳೂರು: 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 71 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದ್ದು, ಸಾಹಿತ್ಯ, ಕಲೆ, ಸಂಗೀತ, ಜಾನಪದ, ರಂಗಭೂಮಿ, ಸಮಾಜಸೇವೆ, ಶಿಕ್ಷಣ, ವೈದ್ಯಕೀಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಬಾರಿ ರಾಜ್ಯ ಸರ್ಕಾರ ಗೌರವ ಸಲ್ಲಿಸಲಿದೆ.

ಈ ಬಾರಿ ಒಟ್ಟು 71 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ. ಆಯ್ಕೆಯಾದವರಲ್ಲಿ 12 ಮಂದಿ ಮಹಿಳಾ ಸಾಧಕರಿದ್ದು, ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂವರಿಗೆ ಪ್ರಶಸ್ತಿ

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಆಯ್ಕೆಯಾಗಿರುವುದು ವಿಶೇಷ. ಮಾಧ್ಯಮ ಮತ್ತು ಛಾಯಾಚಿತ್ರ ಕ್ಷೇತ್ರದಲ್ಲಿ ವಿಶ್ವನಾಥ್ ಸುವರ್ಣ, ಸಾಹಿತ್ಯ ಕ್ಷೇತ್ರದಲ್ಲಿ ಡಾ. ಇಂದಿರಾ ಹೆಗಡೆ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಎ.ಸಿ. ಭಂಡಾರಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರನಾಡು, ಹೊರದೇಶಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಾನಪದ ಕ್ಷೇತ್ರದಲ್ಲಿ ಆರು ಮಂದಿ, ರಂಗಭೂಮಿ ಕ್ಷೇತ್ರದಲ್ಲಿ ಆರು ಮಂದಿ, ಸಮಾಜಸೇವೆಯಲ್ಲಿ ಒಂಬತ್ತು ಮಂದಿ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರಿಗೆ ಮನ್ನಣೆ ನೀಡಲಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ‌ ಪಟ್ಟಿ

ಕ್ರ.ಸಂ. ಹೆಸರು ಕ್ಷೇತ್ರ ಜಿಲ್ಲೆ

1 ಶ್ರೀ ದಾವಲಸಾಬ ಅತ್ತಾರ ಜಾನಪದ , ಕೊಪ್ಪಳ

2 ಶ್ರೀಮತಿ ಗೌರಮ್ಮ ಜಾನಪದ , ಚಾಮರಾಜನಗರ

3 ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ ಜಾನಪದ,ಗದಗ

4 ಶ್ರೀ ಎ ಆರ್‌ ಸತ್ಯನಾರಾಯಣ ಜಾನಪದ,ಬೆಂಗಳೂರು ದಕ್ಷಿಣ

5 ಈರಣ್ಣ ರುದ್ರಾಕ್ಷಿ ಜಾನಪದ,ರಾಯಚೂರು

6 ಶಿವಲಿಂಗಪ್ಪ ತಂದೆ ರಾಮಣ್ಣ ಜಾನಪದ,ಕೊಪ್ಪಳ

7 ಸುರೇಶ್‌ ರಾಮಚಂದ್ರ ಜೋಶಿ ಜಾನಪದ ,ವಿಜಯಪುರ

8 ಡಾ. ಸಿ.ಎ ಶ್ರೀಧರ್‌ ಸಂಗೀತ, ಮೈಸೂರ

9 ಡಾ. ಎ ನಾರಾಯಣ ಸ್ವಾಮಿ ಸಂಗೀತ, ಹಾಸನ

10 ಶ್ರೀ ಬಿ ಮುರುಳಿ ಸಂಗೀತ, ಬೆಂಗಳೂರು ಗ್ರಾಮಾಂತರ

11 ಡಾ|| ಸತ್ಯನಾರಾಯಣ ರಾಜು ನೃತ್ಯ, ಬೆಂಗಳೂರು ನಗರ

12 ಶ್ರೀ ಬಾಬಜೀ ವೆಂಕಟರಮಣ ಚಲನಚಿತ್ರ, ಧಾರವಾಡ

13 ಶ್ರೀ ಅಶೋಕ್ ಚಲನಚಿತ್ರ, ಬೆಂಗಳೂರು ಗ್ರಾಮಾಂತರ

14 ಶ್ರೀ ಕೆ ಎಸ್ .ರವೀಂದ್ರ ನಾಥ್‌ ಕಿರುತೆರೆ, ಬೆಂಗಳೂರು ನಗರ

15 ಶ್ರೀ ಗೋಪಾಲ ಗಾಣಿಗ ಯಕ್ಷಗಾನ,ಉಡುಪಿ

16 ಶ್ರೀಮತಿ ಹುಲಿಗೆಮ್ಮ ಬಯಲಾಟ,ಬಳ್ಳಾರಿ

17 ಶ್ರೀ ಡಿ.ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ ರಂಗಭೂಮಿ,ಬೆಂಗಳೂರು ಗ್ರಾಮಾಂತರ

18 ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ ರಂಗಭೂಮಿ,ಧಾರವಾಡ

19 ಶ್ರೀ ಜಿ. ಡಿ ತಿಮ್ಮಯ್ಯ ರಂಗಭೂಮಿ,ಚಿತ್ರದುರ್ಗ

20 ಶ್ರೀಮತಿ ಕೆ.ಆರ್‌ ಸುಮತಿ ರಂಗಭೂಮಿ, ಮೈಸೂರು

21 ಶ್ರೀ ಹೆಚ್‌ ವಿ ಪುಟ್ಟವೀರಪ್ಪ ರಂಗಭೂಮಿ, ಬೆಂಗಳೂರು ದಕ್ಷಿಣ

22 ಶ್ರೀ ಹೊನ್ನ ನಾಯಕ್ ರಂಗಭೂಮಿ, ಮೈಸೂರು

23 ಶ್ರೀ ಜಿ.ವಿ. ಹಂಸಾನಂದ ಆಚಾರ್ಯ ಶಿಲ್ಪಕಲೆ, ವಿಜಯನಗರ

24 ಶ್ರೀ ಕಾಡಪ್ಪ ಶಿಲ್ಪಕಲೆ, ಬೆಳಗಾವಿ

25 ಶ್ರೀ ಸಿ ಬಿ ಸೋಮಶೆಟ್ಟಿ ಚಿತ್ರಕಲೆ, ಬೀದರ

26 ಶ್ರೀಮತಿ ಶಾಂತಾಬಾಯಿ ಮೋಹನ್ ಕಾಂಬಳೆ ಕರಕುಶಲ, ಬೀದರ

27 ಶ್ರೀ ಹೆಚ್‌ ಕೆ ಶ್ರೀಕಂಠು ಕೃಷಿ, ಬೆಂಗಳೂರು ದಕ್ಷಿಣ

28 ಶ್ರೀ ಬಿ ಎ ಚನ್ನಪ್ಪಗೌಡ ಕೃಷಿ, ಬೆಂಗಳೂರು ನಗರ

29 ಡಾ. ಸ್ವಾಮಿ ಆನಂದ್.‌ ಆರ್ ಪರಿಸರ, ಮೈಸೂರು

30 ಪ್ರೊ. ರಾಜಾಸಾಬ್‌ ಎ. ಎಚ್ ವಿಜ್ಞಾನ – ತಂತ್ರಜ್ಞಾನ, ಕಲಬುರಗಿ

31 ಡಾ. ರಾಜಶೇಖರ ಮೂರ್ತಿ ವಿಜ್ಞಾನ – ತಂತ್ರಜ್ಞಾನ, ಹೊರದೇಶ (ಕೆನಡಾ)

32 ಶ್ರೀ ಉಮಾಪತಿ ಮಾಧ್ಯಮ, ಚಿತ್ರದುರ್ಗ

33 ಶ್ರೀಮತಿ. ಎಂ.ಪಿ. ಸುಶೀಲ ಮಾಧ್ಯಮ,, ಬೆಂಗಳೂರು ನಗರ

34 ಶ್ರೀ ವಿಶ್ವನಾಥ್‌ ಸುವರ್ಣ ಮಾಧ್ಯಮ/ಛಾಯಾಚಿತ್ರ ದಕ್ಷಿಣ ಕನ್ನಡ

35 ಶ್ರೀಮತಿ ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ ಸಂಕೀರ್ಣ, ಬಾಗಲಕೋಟೆ

36 ಶ್ರೀ ಡಿ.ಎಸ್.‌ ಚೌಗಲೆ ಸಂಕೀರ್ಣ, ಬೆಳಗಾವಿ

37 ಬೆಳ್ಳೂರು ಶಂಕರ್‌ ನಾರಾಯಣ ದ್ವಾರಕನಾಥ್‌ ಸಂಕೀರ್ಣ, ಬೆಂಗಳೂರು ನಗರ

38 ಬಿ.ಪಿ ಆರಾಧ್ಯ ಸಂಕೀರ್ಣ/(ವಾಸ್ತುಶಾಸ್ತ್ರ), ಬೆಂಗಳೂರು ದಕ್ಷಿಣ

39 ಶ್ರೀ ರವಿ ಪ್ರವೀಣ್‌ ನೊರೋನಾ ಸಂಕೀರ್ಣ, ಬೆಂಗಳೂರು ನಗರ

40 ಶ್ರೀ ಎಂ ಆರ್‌ ಜೈಶಂಕರ್‌ ಸಂಕೀರ್ಣ, ಚಿಕ್ಕಮಗಳೂರು

41 ಶ್ರೀ ಪ್ರಸಾದ್‌ ಬಿಡ್ಡಪ್ಪ ಸಂಕೀರ್ಣ, ಕೊಡಗು

42 ಶ್ರೀ ವಾಸಪ್ಪ ಯಲ್ಲಪ್ಪ ಕುಸಗೂರ ಸಂಕೀರ್ಣ, ಹಾವೇರಿ

43 ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ ಸಮಾಜ ಸೇವೆ, ಗದಗ

44 ಶ್ರೀ ಬಸವರಾಜು ಸಮಾಜ ಸೇವೆ, ಮಂಡ್ಯ

45 ಕಾಗೋಡು ತಿಮ್ಮಪ್ಪ ಸಮಾಜ ಸೇವೆ, ಶಿವಮೊಗ್ಗ

46 ಡಾ. ಎಸ್‌ ಎಂ ಎಲಿ ಸಮಾಜ ಸೇವೆ, ದಾವಣಗೆರೆ

47 ಡಾ. ಜಿ ಎಸ್‌ ಚಂದ್ರ ಶೇಖರ್‌ (ಆದರ್ಶ ಚಾರಿಟಬಲ್‌ ಟ್ರಸ್ಟ್‌ ಸಮಾಜ ಸೇವೆ, ಉತ್ತರ ಕನ್ನಡ

48 ಡಾ. ಶಿವಾನಂದ ಮಹಾಸ್ವಾಮಿ ಸಮಾಜ ಸೇವೆ, ಕಲಬುರಗಿ

49 ಶ್ರೀ ಕೄಷ್ಣೇಗೌಡ ಬಿನ್ ವೆಂಕಟರಾಯಪ್ಪ ಸಮಾಜ ಸೇವೆ, ಚಿಕ್ಕಬಳ್ಳಾಪುರ

50 ಶ್ರೀ ಎ ಸಿ ಭಂಡಾರಿ, (ಅ.ಭಾ ತುಳು ಒಕ್ಕೂಟ) ಸಮಾಜ ಸೇವೆ, ದಕ್ಷಿಣ ಕನ್ನಡ

51 ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ ಸಮಾಜ ಸೇವೆ, ಬಾಗಲಕೋಟೆ

52 ಡಾ. ವಿಜಯೇಂದ್ರ ಹೊನ್ನೂರಪ್ಪ ವೈದ್ಯಕೀಯ, ಬೆಂಗಳೂರು ನಗರ

53 ಡಾ ಸುಜಾತ ಮಲ್ಲಿಕಾರ್ಜುನ ಜಾಲಿ ವೈದ್ಯಕೀಯ, ಬೆಳಗಾವಿ

54 ಶ್ರೀಮತಿ ತೆರೆಸಾ ಭಟ್ಟಾಚಾರ್ಯ ಆಡಳಿತ, ಬೆಂಗಳೂರು ನಗರ

55 ಡಾ. ಕೆ ಎಸ್‌ ಸೋಮಶೇಖರ್‌ ಆಡಳಿತ, ಹೊರನಾಡು

56 ಡಾ ಕೆ ಎನ್‌ ವೆಂಕಟ ಕೃಷ್ಣಾರಾವ್‌ ಇಂಜಿನಿಯರಿಂಗ್‌, ಚಿಕ್ಕಬಳ್ಳಾಪುರ

57 ಡಾ. ಇಂದಿರಾ ಹೆಗಡೆ ಸಾಹಿತ್ಯ, ದಕ್ಷಿಣ ಕನ್ನಡ

58 ಶ್ರೀ ವೀರಹನುಮಾನ್ ಸಾಹಿತ್ಯ, ರಾಯಚೂರು

59 ಪ್ರೋ. ನಾರಾಯಣಘಟ್ಟ ಸಾಹಿತ್ಯ, ತುಮಕೂರು

60 ಶ್ರೀ ಸಿ. ಮಹೇಶ್ವರಪ್ಪ ಚಟ್ನಳ್ಳಿ ಸಾಹಿತ್ಯ, ಚಿಕ್ಕಮಗಳೂರು

61 ಡಾ. ಕರೀಗೌಡ ಬೀಚನಹಳ್ಳಿ ಸಾಹಿತ್ಯ, ತುಮಕೂರು

62 ಡಾ ಸಿದ್ಧರಾಮ ಹೊನ್ಕಲ್‌ ಸಾಹಿತ್ಯ, ಯಾದಗಿರಿ

63 ಶ್ರೀ ಫಾ|| ಜೊಸೆಫ್(ಕ್ರೈಸ್ಟ್‌ ವಿಶ್ವವಿದ್ಯಾಲಯ, ಉಪ ಕುಲಪತಿಗಳು) ಶಿಕ್ಷಣ, ಬೆಂಗಳೂರು ನಗರ

64 ಶ್ರೀ ಶಾಂತಪ್ಪ ದಶವಂತ ಶಿಕ್ಷಣ, ವಿಜಯಪುರ

65 ಶ್ರೀಮತಿ ಸಂಗೀತಾ ಎನ್‌ ಕಟ್ಟಿಮನಿ ಶಿಕ್ಷಣ, ಕಲಬುರಗಿ

66 ಡಾ .ಎನ್ ಎಸ್ ರಂಗರಾಜು ಶಿಕ್ಷಣ, ಮೈಸೂರು

67 ಶ್ರೀ ಬಿ. ವಿ ಆಚಾರ್ಯ ನ್ಯಾಯಾಂಗ, ಉಡುಪಿ

68 ಶ್ರೀ ರಮೇಶ್‌ ಗೌಡ (ಮಾಜಿ ಅಧ್ಯಕ್ಷರು,ಅಕ್ಕ ಅಮೇರಿಕಾ), ಹೊರನಾಡು/ಹೊರದೇಶ

69 ಶ್ರೀ ಜಿಮ್‌ ರವಿ ಕ್ರೀಡೆ, ಕೋಲಾರ

70 ಡಾ|| ಎ.ಬಿ.ಸುಬ್ಬಯ್ಯ ಕ್ರೀಡೆ ಕೊಡಗು

71 ಶ್ರೀ ಎಂ ಗಿರೀಶ್‌ ಕ್ರೀಡೆ ಬೆಂಗಳೂರು ನಗರ

Sathish Kapikad

Share.
Leave A Reply

Exit mobile version