ಮಂಗಳೂರು, ಸೆ. 18: “ನಮಗೆ ರಾಜಕೀಯಕ್ಕಿಂತ ಜನರ ಬದುಕು ಮುಖ್ಯ. ಯಾವುದೇ ಪಕ್ಷದ ನಾಯಕರು ಗಾಬರಿಯಾಗುವ ಅಗತ್ಯವಿಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

“ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಹೊರತು, ಜನರ ಭಾವನೆ ಮೇಲೆ ರಾಜಕೀಯ ಮಾಡಲ್ಲ. ಎಲ್ಲರ ಚಿಂತನೆಯಂತೆ ನಮ್ಮ ಸರ್ಕಾರ ಕೆಲಸ ಮಾಡಲಿದೆ” ಎಂದು ಭರವಸೆ ನೀಡಿದರು.

ಅವರು ಇಂದು ಬೆಳಿಗ್ಮ ಮಣ್ಣಗುಡ್ಡೆ ಗಾಂಧೀ ಪಾರ್ಕ್ ಬಳಿ ಇರುವ ಗಾಂಧಿ ಸ್ಕ್ವೇರ್ ರೆಸ್ಟೋರೆಂಟ್ ನಲ್ಲಿ ಉಪಹಾರ ಸೇವಿಸಿದರು.

“ಗಾಂಧಿ ಅವರು ಉಳಿದುಕೊಂಡಿದ್ದ ಮನೆಗೆ ಹೋಗಿ ಅಲ್ಲಿ ಉಪಹಾರ ಸೇವಿಸಿದೆ. ಮಂಗಳೂರು ಬನ್ಸ್, ದೋಸೆ ಸವಿದೆ. ಜಿಲ್ಲಾಮಂತ್ರಿಗಳು ಎಲ್ಲಿ ಕರೆದುಕೊಂಡು ಹೋಗುತ್ತಾರೊ ಅಲ್ಲಿಗೆ ಹೋಗುವೆ” ಎಂದು ಹೇಳಿದರು.

_Sathish Kapikad 

Share.
Leave A Reply

Exit mobile version