
ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ದೈವೀ ಸಂಭ್ರಮದಲ್ಲಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪವಿತ್ರ ಸನ್ನಿಧಿಯಲ್ಲಿ 2026ರ ಅಕ್ಟೋಬರ್ 15, ಗುರುವಾರ (ಬೆಳಿಗ್ಗೆ 9 ಗಂಟೆಯಿಂದ) ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಜರುಗಲಿದೆ.
ಒಂದು ಬಿಳಿ ಹಾಳೆ, ಕೈಯಲ್ಲಿ ಹಿಡಿದ ಕುಂಚ ಮತ್ತು ಮನಸ್ಸಿನಲ್ಲಿರುವ ನಿಷ್ಕಲ್ಮಶ ಕಲ್ಪನೆ… ಇವಿಷ್ಟಿದ್ದರೆ ಸಾಕು, ಅಲ್ಲಿ ಬಣ್ಣಗಳು ಜೀವಂತವಾಗುತ್ತವೆ. ಪುಟ್ಟ ಮಕ್ಕಳ ಮುಗ್ಧ ಗೆರೆಗಳಿಂದ ಹಿಡಿದು ಹಿರಿಯರ ಅನುಭವಿ ಕೈಚಳಕದವರೆಗೆ, ಪ್ರತಿಯೊಂದು ಬಣ್ಣದ ಹನಿಯೂ ಜಗನ್ಮಾತೆಯ ಸನ್ನಿಧಿಯಲ್ಲಿ ಸಮರ್ಪಿತವಾಗುವ ಭಕ್ತಿಯ ಕಾವ್ಯ. ಕಲೆ ಎಂಬುದು ಕೇವಲ ಸ್ಪರ್ಧೆಯಲ್ಲ, ಅದು ಅಂತರಂಗದ ಧ್ಯಾನ.
ಸ್ಪರ್ಧಿಗಳ ಕನಸುಗಳಿಗೆ ಬಣ್ಣಗಳ ರೆಕ್ಕೆ ಕಟ್ಟಿ, ಕುದ್ರೋಳಿ ಅಮ್ಮನ ಸಮ್ಮುಖದಲ್ಲಿ ಮನಸ್ಸಿನ ಭಾವನೆಗಳನ್ನು ಸುಂದರ ಚಿತ್ತಾರವಾಗಿಸಲು ಪ್ರತಿಯೊಬ್ಬರು ಆಗಮಿಸುವಂತೆ ಕ್ಷೇತ್ರದ ವತಿಯಿಂದ ಅಹೌನಿಸಲಾಗಿದೆ.
_Sathish Kapikad