
ಮಂಗಳೂರು: ದೈವಜ್ಞ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್ ಮಂಗಳೂರು ಇದರ 2025-2026ನೇ ಸಾಲಿನ 34ನೇ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 06-09-2026ರಂದು ಶ್ರೀ ಎಸ್. ರಮಾನಂದ್ ಶೇಟ್ ಇವರ ಅಧ್ಯಕ್ಷತೆಯಲ್ಲಿ ದೈವಜ್ಞ ಕಲ್ಯಾಣ ಮಂಟಪ, ಅಶೋಕ ನಗರ, ಮಂಗಳೂರಿನಲ್ಲಿ ನೆರವೇರಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಸಂತೋಷ್ ಶೇಟ್
ರವರು ವಾರ್ಷಿಕ ವರದಿ ಮಂಡಿಸಿದರು.
2025-2026 ನೇ ಸಾಲಿನಲ್ಲಿ ಸಂಘವು 77.05 ಲಕ್ಷ ರೂಪಾಯಿ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇಕಡ 10 ಡಿವಿಡೆಂಟ್ ಘೋಷಿಸಲಾಯಿತು.
ಸಂಘವು 64.94 ಲಕ್ಷ ರೂಪಾಯಿ ಪಾಲು ಬಂಡವಾಳ, 28.83ಕೋಟಿ ರೂಪಾಯಿ ಠೇವಣಿ ಹೊಂದಿದ್ದು ಸದಸ್ಯರಿಗೆ 26.29 ಕೋಟಿ ರೂಪಾಯಿ ಸಾಲ ನೀಡಿದೆ. ಸಂಘವು 2025- 2026 ನೇ ಸಾಲಿನಲ್ಲಿ 200 ಕೋಟಿ ರೂಪಾಯಿ ವ್ಯವಹಾರ ನಡೆಸಿದೆ.
ಸಂಘವು ಸತತವಾಗಿ ‘ಎ’ ತರಗತಿಯ ಆಡಿಟ್ ವರ್ಗಿಕರಣ ಪಡೆಯುತ್ತ ಬಂದಿದೆ. ಸಭೆಯಲ್ಲಿ 2025- 2026ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಸದಸ್ಯರ ಮಕ್ಕಳನ್ನು ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕೆ. ಸುಧಾಕರ್ ಶೇಟ್ ನಿರ್ದೇಶಕರಾದ ಪ್ರಮೋದ್ ಕೆ. ಶೇಟ್, ಬಿ. ಗುರುಪ್ರಸಾದ್ ಶೇಟ್, ಶ್ರೀಪಾದ ಬಿ. ರಾಯ್ಕರ್, ಬಿ. ಗಜೇಂದ್ರ ಶೇಟ್, ರಾಜೇಶ್ ಎಲ್. ವಿ, ಜಯ ಪಿ. ಶೇಟ್, ನೂತನ್ ಜಿ. ಶೇಟ್ ಉಪಸ್ಥಿತರಿದ್ದರು.
_Sathish Kapikad


