
ಮಂಗಳೂರು: ಕರ್ನಾಟಕ ಪಬ್ಲಿಕ್ ಸ್ಕೂಲ್, ಅತ್ತಾವರದ ಹೈಸ್ಕೂಲ್ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಯುನಿಫಾರ್ಮ್ ವಿತರಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕುಡ್ಲಾ ಕುಂದಾಪುರ ಫೌಂಡೇಶನ್ (ರಿ.) – ಕುಡ್ಲಗಿಪ್ಪ ಕುಂದಾಪುರ ಬಳಗ ವತಿಯಿಂದ ಈ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಯುನಿಫಾರ್ಮ್‌ಗಳನ್ನು ಪ್ರಾಯೋಜಕರಾದ ಶ್ರೀ ಚಿನ್ಮಯ ಎಚ್. ಎನ್., (S/O ನರಸಿಂಹ ಭಟ್ ಹಾರ್ಯಾಡಿ), ವಿದ್ಯಾರ್ಥಿಗಳಿಗೆ ವಿತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಡಾ. ಅಣ್ಣಯ್ಯ ಕುಲಾಲ್, ಕುಡ್ಲಾ ಕುಂದಾಪುರ ಫೌಂಡೇಶನ್‌ನ ಅಧ್ಯಕ್ಷರಾದ ಶ್ರೀಮತಿ ಮಾಲತಿ ಸಂತೋಷ್ ಶೆಟ್ಟಿ, ಉಪಾಧ್ಯಕ್ಷರು ಶ್ರೀ ರಾಮಕೃಷ್ಣ ಮರಾಠಿ, ಕಾರ್ಯದರ್ಶಿ ಶ್ರೀ ಶರತ್ ಆಚಾರ್ಯ, ಕೋಶಾಧಿಕಾರಿ ಶ್ರೀ ನವೀನ್ ಶೆಟ್ಟಿ, ಶ್ರೀ ನರಸಿಂಹ ಭಟ್, ಸರ್ಕಾರಿ ಪಾಲಿಟೆಕ್ನಿಕ್ ಬಂಟ್ವಾಳದ ಪ್ರಾಂಶುಪಾಲರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರಾಘವೇಂದ್ರ ರಾವ್, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳಿಗೆ ಸ್ಪಂದಿಸಿ ಉಚಿತ ಯುನಿಫಾರ್ಮ್ ವಿತರಿಸಿದ ಕುಡ್ಲಾ ಕುಂದಾಪುರ ಫೌಂಡೇಶನ್ ಹಾಗೂ ಪ್ರಾಯೋಜಕರಾದ ಶ್ರೀ ಚಿನ್ಮಯ ಎಚ್. ಎನ್. ಅವರ ಸೇವಾ ಮನೋಭಾವವನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಲಾಯಿತು.
_Sathish Kapikad


