
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆ.14ರಂದು ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಬೆಳಗ್ಗೆ 8ಕ್ಕೆ ಗುರು ಪ್ರಾರ್ಥನೆ, ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಸ್ವಸ್ತಿ ಪುಣ್ಯವಾಚನ, 108 ತೆಂಗಿನಕಾಯಿಗಳ ಮಹಾಗಣಪತಿ ಹೋಮ, ಮಹಾಗಣಪತಿ ದೇವರಿಗೆ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಹಾಗೂ 1008 ತೆಂಗಿನಕಾಯಿಯ ಪಲ್ಲಪೂಜೆ, ಅನಂತರ ಭಕ್ತರಿಗೆ ತೆನೆ ವಿತರಿಸಲಾಗುವುದು.
ರಾತ್ರಿ 8 ಗಂಟೆಗೆ ಮಹಾಗಣಪತಿಗೆ ರಂಗಪೂಜೆ ಜರುಗಲಿದೆ. ಬೆಳಗ್ಗೆ 10.30ಕ್ಕೆ ನವರಾತ್ರಿ ಉತ್ಸವಕ್ಕೆ ಶಾರದಾ ಮಾತೆಯ ಮೂರ್ತಿ ರಚನೆಗೆ ಮುಹೂರ್ತ ನೆರವೇರಲಿದೆ ಎಂದು ಶ್ರೀಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
_Sathish Kapikad


