(ಸಾಂದರ್ಭಿಕ ಚಿತ್ರ)

ಮಂಗಳೂರು,ಆ.19(ಕ.ವಾ):- ಮಾ ದುರ್ಗಾ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಹಾಗೂ ನವದುರ್ಗಾ ಮೋಟರ್ಸ್ ಎಲ್.ಎಲ್.ಪಿ ಕಂಪೆನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿ ಇರುವ ಮೆಕ್ಯಾನಿಕ್, ಮೆಕ್ಯಾನಿಕ್ (ಹೆವೀ ವೆಹಿಕಲ್), ಟೆಕ್ನಿಶಿಯನ್(2 ವೀಲ್ಹರ್), ಅಸಿಸ್ಟೆಂಟ್/ಹೆಲ್ಪರ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಗಸ್ಟ್ 21 ರಂದು ಬೆಳಿಗ್ಗೆ 10 ರಿಂದ 1:30 ರವರೆಗೆ ಕೊಟ್ಟಾರ ಚೌಕಿ ಟಿ.ವಿ.ಎಸ್ ನವದುರ್ಗಾ ಮೋಟರ್ಸ್ ಎಲ್.ಎಲ್.ಪಿ.ನಲ್ಲಿ ಆಯೋಜಿಸಲಾಗಿದೆ.

ಸಂದರ್ಶನದಲ್ಲಿ ಐ.ಟಿ.ಐ/ಡಿಪ್ಲೋಮ-ಎಂ.ಡಿ/ಎಂ.ಎಂ.ವಿ/ಮೆಕ್ಯಾನಿಕಲ್/ಅಟೋ ಮೊಬೈಲ್/ಅಟೋ ಇಲೆಕ್ಟ್ರಿಕಲ್ ಹೊಂದಿರುವ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಸಂಪರ್ಕಿಸ ಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಪ್ರಕಟಣೆ ತಿಳಿಸಿದೆ.

_Sathish Kapikad

Share.
Leave A Reply

Exit mobile version