Close Menu
SK Media NewsSK Media News
    What's Hot

    ಗಣೇಶೋತ್ಸವ ಉದ್ಘಾಟನೆ ಮಾಡುವ ಯೋಗ ಸತತ 2ನೇ ಬಾರಿ ತನಗೆ ಒದಗಿ ಬಂದಿರುವುದು ತನ್ನ ಸುದೈವ :ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವ ಉದ್ಘಾಟಿಸಿ ದ. ಕ. ಜಿಲ್ಲಾಧಿಕಾರಿ ದರ್ಶನ್ ಎಚ್. ವಿ 

    September 14, 2026

    ಬಂಟ್ಸ್ ಹಾಸ್ಟೇಲ್ ಸಿದ್ದಿವಿನಾಯಕ ಪ್ರತಿಷ್ಠಾನದ ಸಾರ್ವಜನಿಕ ಶ್ರೀ ಗಣೇಶೋತ್ಸವ: ವಿಶೇಷ ಮೆರವಣಿಗೆಯೊಂದಿಗೆ ಶ್ರೀ ಸಿದ್ದಿವಿನಾಯಕ ದೇವರ ವಿಗ್ರಹ ಆಗಮನ

    September 13, 2026

    ತುಳು ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ನಿರ್ಮಾಣಗೊಂಡಿರುವ, ಅರ್ಜುನ್ ದೇವ್ ನಿರ್ದೇಶನದ “ಟಾಸ್” ಸಿನಿಮಾ ಸೆಪ್ಟಂಬರ್ 18 ರಂದು ರಾಜ್ಯಾದ್ಯಂತ ತೆರೆಗೆ

    September 13, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ತಣ್ಣಿರುಬಾವಿ ಬೀಚ್ ಗ್ಯಾಂಗ್ ರೇಪ್ ಪ್ರಕರಣ : 7 ಆರೋಪಿಗಳಲ್ಲಿ ನಾಲ್ವರಿಗೆ 20 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ ದಂಡ
    ಕರಾವಳಿ

    ತಣ್ಣಿರುಬಾವಿ ಬೀಚ್ ಗ್ಯಾಂಗ್ ರೇಪ್ ಪ್ರಕರಣ : 7 ಆರೋಪಿಗಳಲ್ಲಿ ನಾಲ್ವರಿಗೆ 20 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ ದಂಡ

    July 31, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು : ಮಂಗಳೂರಿನ ತಣ್ಣಿರುಬಾವಿ ಬೀಚ್ ನಲ್ಲಿ ಯುವತಿಯೊಬ್ಬರ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಮಂದಿ ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು 20 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 74 ಸಾವಿರ ರೂಪಾಯಿ ದಂಡ ವಿಧಿಸಿದೆ.

    ಪ್ರಜ್ವಲ್ (33), ಆದಿತ್ಯ ಸಾಲ್ಯಾನ್ (28), ಅರುಣ್ ಅಮೀನ್ (34) ಹಾಗೂ ಅಬ್ದುಲ್ ರಿಯಾಜ್ (40) ಶಿಕ್ಷೆಗೊಳಗಾದ ಅಪರಾಧಿಗಳು.

    2018ರ ನವೆಂಬರ್ 18ರಂದು ಮಧ್ಯಾಹ್ನ ಸುಮಾರು 12;15ರ ವೇಳೆ ಮಂಗಳೂರಿನ ತಣ್ಣೀರುಬಾವಿ ಬಳಿಯ ತೋಟ ಬೆಂಗ್ರೆ ಬೀಚ್ ನಲ್ಲಿ ತನ್ನ ಗೆಳೆಯನ ಜೊತೆ ಬಂದಿದ್ದ ಯುವತಿಯ ಮೇಲೆ ಮೂವರು ಅಪ್ರಾಪ್ತ ವಯಸ್ಸಿನ ಬಾಲಕರು ಸೇರಿದಂತೆ ಒಟ್ಟು ಏಳು ಮಂದಿ ಆರೋಪಿಗಳು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

    ಇದೇ ವೇಳೆ ಯುವಕನಿಗೆ ಹಲ್ಲೆ ನಡೆಸಿರುವ ಅರೋಪಿಗಳು ಘಟನೆ ನಡೆದ ಬಳಿಕ ಇಬ್ಬರಿಗೂ ಈ ಪ್ರಕರಣದ ಬಗ್ಗೆ ಯಾರಿಗೂ ತಿಳಿಸದಂತೆ ಹೆದರಿಸಿ ಪ್ರಾಣ ಬೆದರಿಕೆ ಹಾಕಿದ್ದರು. ಜೊತೆಗೆ ಆರೋಪಿಗಳು ಸಂತೃಸ್ತೆಯ ಮೊಬೈಲ್ ಅನ್ನು ಕೂಡ ವಶಪಡಿಸಿಕೊಂಡಿದ್ದರು.

    ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಅಂದಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಕಲಾವತಿ ಕೆ. ಮತ್ತು ಸಹಾಯಕ ಪೊಲೀಸ್ ಅಯುಕ್ತರಾದ ಮಂಜುನಾಥ ಶೆಟ್ಟಿ ತನಿಖೆ ನಡೆಸಿದ್ದರು. ಬಳಿಕ ಅಂದಿನ ಸಹಾಯಕ ಪೊಲೀಸ್ ಅಯುಕ್ತರಾದ ಶ್ರೀನಿವಾಸ ಗೌಡ ಆರ್. ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

    ಪ್ರಕರಣದಲ್ಲಿ ಒಟ್ಟು 65 ಸಾಕ್ಷಿದಾರರ ಪೈಕಿ 40 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದ್ದು, ತಾರೀಕು 09-01-2020 ರಂದು ಆರಂಭವಾದ ವಿಚಾರಣೆಯು ತಾರೀಕು 09-04-2024ರಂದು ಪೂರ್ಣಗೊಂಡಿರುತ್ತದೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ ನಾಯಕರವರು ವಾದ ಮಂಡಿಸಿರುತ್ತಾರೆ. ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಜಗದೀಶ ವಿ.ಎನ್. ಆರೋಪಿತರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ.

    ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ, ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಪ್ರಜ್ವಲ್ (33), ಅರುಣ್ ಅಮೀನ್ (34), ಆದಿತ್ಯ ಸಾಲ್ಯಾನ್ (28) ಹಾಗೂ ಅಬ್ದುಲ್ ರಿಯಾಜ್ (40) ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ, ಪ್ರತಿಯೊಬ್ಬರಿಗೂ 20 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 74 ಸಾವಿರ ರೂಪಾಯಿ ದಂಡ ವಿಧಿಸಿದೆ.

    ಈ ದಂಡದ ಮೊತ್ತದಲ್ಲಿ 60 ಸಾವಿರ ರೂಪಾಯಿಯನ್ನು ಸಂತ್ರಸ್ತೆಗೆ ನೀಡಲು ಹಾಗೂ ಉಳಿದ 14 ಸಾವಿರ ರೂಪಾಯಿಯನ್ನು ಸರಕಾರಕ್ಕೆ ಪಾವತಿಸಲು ಅದೇಶಿಸಕಾಗಿದೆ. ಜೊತೆಗೆ ಸಂತ್ರಸ್ತೆಯ ಮೊಬೈಲ್ ಅನ್ನು ಹಿಂತಿರುಗಿಸುವಂತೆ ಮತ್ತು ಆರೋಪಿಗಳ ಮೊಬೈಲ್ ಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಲಯವು ಅದೇಶ ಹೊರಡಿಸಿದೆ.

    _Sathish Kapikad

    Share. Facebook Twitter Pinterest LinkedIn Email WhatsApp
    Previous Articleಕುಂದಾಪುರ : ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಬರ್ಬರ ಹತ್ಯೆ – ಆರೋಪಿ ಪರಾರಿ
    Next Article ಕುಂದಾಪುರ ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಬರ್ಬರ ಹತ್ಯೆ ಹಿಂದೆ ಹಣಕಾಸು ವ್ಯವಹಾರ ? – ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆಗೆ ವಿಶೇಷ ತಂಡ

    Related Posts

    ಕರಾವಳಿ

    ಗಣೇಶೋತ್ಸವ ಉದ್ಘಾಟನೆ ಮಾಡುವ ಯೋಗ ಸತತ 2ನೇ ಬಾರಿ ತನಗೆ ಒದಗಿ ಬಂದಿರುವುದು ತನ್ನ ಸುದೈವ :ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವ ಉದ್ಘಾಟಿಸಿ ದ. ಕ. ಜಿಲ್ಲಾಧಿಕಾರಿ ದರ್ಶನ್ ಎಚ್. ವಿ 

    September 14, 2026
    ಕರಾವಳಿ

    ಬಂಟ್ಸ್ ಹಾಸ್ಟೇಲ್ ಸಿದ್ದಿವಿನಾಯಕ ಪ್ರತಿಷ್ಠಾನದ ಸಾರ್ವಜನಿಕ ಶ್ರೀ ಗಣೇಶೋತ್ಸವ: ವಿಶೇಷ ಮೆರವಣಿಗೆಯೊಂದಿಗೆ ಶ್ರೀ ಸಿದ್ದಿವಿನಾಯಕ ದೇವರ ವಿಗ್ರಹ ಆಗಮನ

    September 13, 2026
    ಕರಾವಳಿ

    ತುಳು ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ನಿರ್ಮಾಣಗೊಂಡಿರುವ, ಅರ್ಜುನ್ ದೇವ್ ನಿರ್ದೇಶನದ “ಟಾಸ್” ಸಿನಿಮಾ ಸೆಪ್ಟಂಬರ್ 18 ರಂದು ರಾಜ್ಯಾದ್ಯಂತ ತೆರೆಗೆ

    September 13, 2026
    Add A Comment
    Leave A Reply Cancel Reply

    Top Posts

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.