ಮಂಗಳೂರು, ಜುಲೈ.28: ಕರ್ನಾಟಕದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ *ಡಾ ಯು ಟಿ ಖಾದರ್* ಅವರು ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಆಹಾರ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ, *ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿರುವ ವಿಶ್ವಪ್ರಸಿದ್ಧ ಪರ್ಡ್ಯೂ (Purdue) ಯೂನಿವರ್ಸಿಟಿಯ Department of Food Scienceಗೆ* ಭೇಟಿ ನೀಡಿ ತಜ್ಞರೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಾಯಿತು.

ಇತ್ತೀಚಿನ ದಿನಗಳಲ್ಲಿ ಅಸುರಕ್ಷಿತ ಹಾಗೂ ಅಸಮರ್ಪಕ ಆಹಾರ ತಯಾರಿಕೆಯಿಂದ ಉಂಟಾಗುವ ಅನಾರೋಗ್ಯದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ತಯಾರಿಕೆಗೆ ಅನುಸರಿಸಬೇಕಾದ *ವೈಜ್ಞಾನಿಕ ವಿಧಾನಗಳು, ಆಧುನಿಕ ತಂತ್ರಜ್ಞಾನಗಳು ಹಾಗೂ ಕಟ್ಟುನಿಟ್ಟಿನ ಆಹಾರ ಸುರಕ್ಷತಾ ಮಾನದಂಡಗಳ ಕುರಿತು* ಸಮಗ್ರವಾಗಿ ಚರ್ಚಿಸಿದರು.

ಈ ಭೇಟಿಯು ಕರ್ನಾಟಕದ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ *ಆಹಾರ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಅಂತರರಾಷ್ಟ್ರೀಯ ಮಟ್ಟದ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಲು* ಮಹತ್ವದ ಹೆಜ್ಜೆಯಾಗಿದೆ.

_Sathish Kapikad

Share.
Leave A Reply

Exit mobile version