ಮಂಗಳೂರು: ಮಂಗಳೂರು ಏಳು ಪಟ್ನಾ ಮೊಗವೀರ ಸಂಯುಕ್ತ ಸಭಾ (ಕದ್ರಿ)ದ ವತಿಯಿಂದ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿಗೆ”ಮಲ್ಲಿಗೆ ಅಲಂಕಾರ ಸೇವೆ” ನೆರವೇರಿತು.

ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಡೆದ ಮಲ್ಲಿಗೆ ಅಲಂಕಾರ ಸೇವೆಯು ಅತ್ಯಂತ ಭಕ್ತಿಪೂರ್ವಕವಾಗಿ ಮತ್ತು ವೈಭವಯುತವಾಗಿ ಸಂಪನ್ನಗೊಂಡಿದೆ.

ಪರಿಮಳಭರಿತ ಮಲ್ಲಿಗೆ ಹೂವುಗಳಿಂದ ಅಲಂಕೃತವಾದ ಸ್ವಾಮಿಯ ದಿವ್ಯ ದರ್ಶನವು ಭಕ್ತರ ಮನಸ್ಸಿಗೆ ಅತೀವ ಸಂತೋಷ ಮತ್ತು ಶಾಂತಿಯನ್ನು ನೀಡಿದೆ.

ಈ ದೈವಿಕ ಕಾರ್ಯದಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟು, ಶ್ರದ್ಧೆಯಿಂದ ಮಲ್ಲಿಗೆ ಅಲಂಕಾರವನ್ನು ರೂಪಿಸಿದ ಹಾಗೂ ಈ ಸೇವೆಗೆ ಆರ್ಥಿಕವಾಗಿ ಮತ್ತು ತನು-ಮನದಿಂದ ಸಹಕರಿಸಿದ ಸಮಸ್ತ ಸಮಾಜ ಬಾಂಧವರಿಗೆ ಸಂಯುಕ್ತ ಸಭೆಯ ವತಿಯಿಂದ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಸ್ವಾಮಿಯ ಸನ್ನಿಧಿಯ ಶೋಭೆಯನ್ನು ಹೆಚ್ಚಿಸಿದ್ದು, ನಿಮ್ಮ ಈ ಭಕ್ತಿಯ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಸಕಲ ಐಶ್ವರ್ಯ ಮತ್ತು ಸುಖ-ಶಾಂತಿಗಳನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಮಂಗಳೂರು ಏಳು ಪಟ್ಟ ಸಂಯುಕ್ತ ಸಭಾ (ಕದ್ರಿ)ದ ಅಧ್ಯಕ್ಷ ರಾದ ಶ್ರೀ ಸುಭಾಸ್ ಚಂದ್ರ ಕಾಂಚನ್ ತಿಳಿಸಿದ್ದಾರೆ.

_Sathish Kapikad 

Share.
Leave A Reply

Exit mobile version