
ಮಂಗಳೂರು, ಜುಲೈ.01: ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರಿನ ಕಂಕನಾಡಿ ಸಮೀಪದ ನಾಗೋರಿ ಸಮೀಪ ತಡೆಗೋಡೆ ಕುಸಿದು ಮನೆ ಮೇಲ್ಛಾವಣಿಗೆ ಬಿದ್ದ ಪರಿಣಾಮ ಓರ್ವ ಮಹಿಳೆ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ ಘಟನೆ ನಡೆದ ಹಿನ್ನಲೆಯಲ್ಲಿ ದೆಹಲಿ ಪ್ರವಾಸದಲ್ಲಿರುವ ಆರೋಗ್ಯ ಸಚಿವ ಯು ಟಿ ಖಾದರ್ ಅವರು ತಮ್ಮ ದೆಹಲಿ ಭೇಟಿಯನ್ನು ಮೊಟಕುಗೊಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಸಚಿವರು, ತ್ವರಿತ ಪರಿಹಾರ ಕ್ರಮಗಳಿಗೆ ಸೂಚಿಸಿದರು.
ಗಾಯಾಳುಗಳಿಗೆ ಸರಕಾರದ ವತಿಯಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ಹಾಗೂ ಮೃತರ ಕುಟುಂಬದವರಿಗೆ ಇಂದೇ ಪರಿಹಾರ ಮೊತ್ತ ನೀಡಲು ಅವರು ನಿರ್ದೇಶಿಸಿದ್ದಾರೆ.
ಸಚಿವರು ಇಂದು ಮಧ್ಯಾಹ್ನ ಮಂಗಳೂರು ತಲುಪಲಿದ್ದಾರೆ.
ಮೃತ ಪಟ್ಟವರ ವಿವರ:
1)ಹೆಸರು :ಅನಾಮಿಕ ಚೌರಾಸಿಯ
ಹೆಣ್ಣು
ಪ್ರಾಯ :8 ವರ್ಷ
2)ಹೆಸರು :ಪರಿ
ಹೆಣ್ಣು
ಪ್ರಾಯ :04 ವರ್ಷ
3) ಶಾಂತ
ಹೆಂಗಸು
ಪ್ರಾಯ :46 ವರ್ಷ
ರಕ್ಷಣಾ ಕಾರ್ಯದಲ್ಲಿ ಬದುಕಿ ಉಳಿದವರು
1)ಹೆಸರು : ಅಲ್ಕಾ
ಪ್ರಾಯ :14 ವರ್ಷ
ಹೆಣ್ಣು
2)ಅನುಷಾ
ಪ್ರಾಯ 11 ವರ್ಷ
ಹೆಣ್ಣು
3)ಬಾಲಕೃಷ್ಣ
ಪ್ರಾಯ :48
ಗಂಡು
ವಾಸ: ಮೂಲತ ಬಿಹಾರ ರಾಜ್ಯದವರಾಗಿದ್ದು, ಪ್ರಸ್ತುತ ಕಂಕನಾಡಿ ಗ್ರಾಮದ, ಕಂಕನಾಡಿ ಪೊಲೀಸ್ ಠಾಣಾ ಹಿಂಬಾಗದಲ್ಲಿ ಕಳೆದ 20 ವರ್ಷಗಳಿಂದ ವಾಸ ಮಾಡಿಕೊಂಡಿರುತ್ತಾರೆ.
_Sathish Kapikad