Close Menu
SK Media NewsSK Media News
    What's Hot

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ವಿಧಿವಶ

    July 18, 2026

    ಹೈ ಕೋರ್ಟ್ ಸರಕಾರಿ ವಕೀಲರಾಗಿ “ಚಿದಾನಂದ ಬಂಟ್ವಾಳ್ ” ನೇಮಕ

    July 18, 2026

    ದ.ಕ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರೀ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ 

    July 17, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಇಂದು ಕೂಡ ಅಮ್ಮನ ದರ್ಶನಕ್ಕಾಗಿ ಬೋಳೂರಿಗೆ ಹರಿದು ಬಂದ ಸಾವಿರಾರು ಭಕ್ತರು : ವಿನಯವೇ ಯಶಸ್ಸಿನ ಅಡಿಪಾಯ – ಅಮ್ಮ
    ಅಂತಾರಾಷ್ಟ್ರೀಯ

    ಇಂದು ಕೂಡ ಅಮ್ಮನ ದರ್ಶನಕ್ಕಾಗಿ ಬೋಳೂರಿಗೆ ಹರಿದು ಬಂದ ಸಾವಿರಾರು ಭಕ್ತರು : ವಿನಯವೇ ಯಶಸ್ಸಿನ ಅಡಿಪಾಯ – ಅಮ್ಮ

    May 29, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು, ಮೇ.29 : ವಿನಯವೇ ಯಶಸ್ಸಿನ ಅಡಿಪಾಯ ಮತ್ತು ವಿನಯವಿರುವೆಡೆಯಲ್ಲಿ ಮಾತ್ರ ಜೀವನದ ನಿಜವಾದ ಸಾಫಲ್ಯ ಇದೆ ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ನುಡಿದರು.

    ಬೋಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಂಗಳೂರು ಬ್ರಹ್ಮಸ್ಥಾನ ಮಹೋತ್ಸವ’ದ ಎರಡನೇ ದಿನದಂದು ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, “ಜೀವನವು ನದಿಯ ಹರಿವಿನಂತಿದ್ದು, ತನ್ನದೇ ಆದ ಏರಿಳಿತಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಅನುಭವಕ್ಕೂ ಒಂದು ಉದ್ದೇಶವಿರುತ್ತದೆ ಎಂಬುದನ್ನು ಒಪ್ಪಿಕೊಂಡು, ಶರಣಾಗತಿ ಭಾವನೆಯೊಂದಿಗೆ ನಾವೆಲ್ಲರೂ ಮುನ್ನಡೆಯಬೇಕು” ಎಂದು ಕರೆ ನೀಡಿದರು.

    “ಮಣ್ಣಿನ ಅಡಿಯಲ್ಲಿ ಹೂತ ಬೀಜ ಮಾತ್ರವೇ ಮುಂದೆ ಹಣ್ಣು ಕೊಡುವ ಮರವಾಗಿ ಬೆಳೆಯಲು ಸಾಧ್ಯ. ಅದೇ ರೀತಿ, ವಿನಯವಿರುವೆಡೆಯಲ್ಲಿ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ” ಎಂದು ಅಮ್ಮ ಮಾರ್ಮಿಕವಾಗಿ ಹೇಳಿದರು.

    ಬೆಳಗ್ಗೆ 11 ಗಂಟೆಯ ಸುಮಾರಿಗೆ ಅಮ್ಮನವರು ವೇದಿಕೆಗೆ ಆಗಮಿಸಿದಾಗ, ಗಣ್ಯರು ಮಾಲೆಗಳನ್ನು ಅರ್ಪಿಸಿ ಅವರನ್ನು ಸ್ವಾಗತಿಸಿದರು. ಮಂಗಳೂರು ಚಿನ್ಮಯ ಮಿಷನ್‌ನ ಸ್ವಾಮಿ ಗಹನಾನಂದ, ಇಸ್ಕಾನ್ ಮುಖ್ಯಸ್ಥ ಪ್ರಭು ಗುಣಾಕರ ದಾಸ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಬಿ. ರವೀಂದ್ರ ಶೆಟ್ಟಿ, ಇಂದುಮತಿ ಮಲ್ಯ, ಎ.ಸಿ. ಕುಂದರ್, ಸಾಧು ಸಾಲ್ಯಾನ್, ವಿ.ಎಲ್. ರೇಗೋ ಮತ್ತು ಆತ್ಮಾರಾಮ್ ರೇವಣಕರ್ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಅಮ್ಮನವರಿಗೆ ಮಾಲಾರ್ಪಣೆ ಮಾಡಿದರು.

    ವೇದಿಕೆಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್, ಸೇವಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಡಾ.ವೈ.ಸನತ್ ಹೆಗಡೆ, ಸಿ ಎ ವಾಮನ್ ಕಾಮತ್, ಶ್ರುತಿ ಹೆಗಡೆ,ಡಾ ವಸಂತ್ ಕುಮಾರ್ ಪೆರ್ಲ, ದಿಲೀಪ್ ಕುಮಾರ್,ರಾಜನ್, ರೋಜಾ ರಾಜನ್,ಗಿರೀಶ್ ರೇವಣಕರ್ ಮೊದಲಾದವರು ಉಪಸ್ಥಿತರಿದ್ದರು ಡಾ ದೇವದಾಸ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಚಾರಿ ಡಾ. ಗಣೇಶ್ ಉಡುಪ ಇವರು ಪ್ರವಚನ ನೀಡಿದರು,

    ಸಭಾ ಕಾರ್ಯಕ್ರಮದ ನಂತರ ಅಮ್ಮನವರ ನೇತೃತ್ವದಲ್ಲಿ ಭಜನೆ ಮತ್ತು ಧ್ಯಾನ ನೆರವೇರಿತು. ವಿಶೇಷ ಪೂಜೆಗಳನ್ನೊಳಗೊಂಡ ಈ ಎರಡು ದಿನಗಳ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ‘ಅಮಲ ಭಾರತಂ’ ಅಭಿಯಾನದ ಅಂಗವಾಗಿ ಯಜ್ಞದ ವೇದಿಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಯಿತು.

    ಮೇ 31 ಮತ್ತು ಜೂನ್ 1 ರಂದು ಕೇರಳದ (ಕೋಝಿಕೋಡ್) ನಲ್ಲಿ ನಡೆಯಲಿರುವ ಎರಡು ದಿನಗಳ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಮ್ಮನವರು ಅಲ್ಲಿಗೆ ಪ್ರಯಾಣಿಸಲಿದ್ದಾರೆ.

    _Sathish Kapikad.

    Share. Facebook Twitter Pinterest LinkedIn Email WhatsApp
    Previous Articleಮಂಗಳೂರಿನಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಭವ್ಯ ಚಾಲನೆ : ಅಮೃತ ಸಂಗಮಕ್ಕೆ ಹರಿದು ಬಂದ ಜನ ಸಾಗರ
    Next Article ಕುಂಟಿಕಾನ್ ಸರ್ವೀಸ್ ರಸ್ತೆ ಮಧ್ಯೆ ಕಾಂಕ್ರೀಟ್ ಸ್ಲಾಬ್ ಕುಸಿದು ಕಂದಕ ನಿರ್ಮಾಣ : ವಾಹನ ಸವಾರರ ಪರದಾಟ – (video)

    Related Posts

    ಅಂತಾರಾಷ್ಟ್ರೀಯ

    Thumbay to Launch UAE’s First-of-Its-Kind Academic Programs in Longevity Medicine in Partnership with Switzerland’s Geneva College of Longevity Science

    July 13, 2026
    ಅಂತಾರಾಷ್ಟ್ರೀಯ

    ಮಂಗಳೂರಿನ ಯಶೋಧಾ ರಾಜೇಶ್ ಅವರಿಗೆ ಥೈಲ್ಯಾಂಡ್‌ನಲ್ಲಿ “ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ವಿನ್ನರ್ 2026” ಕಿರೀಟ

    June 19, 2026
    ಅಂತಾರಾಷ್ಟ್ರೀಯ

    ಇನ್-ಲ್ಯಾಂಡ್ ಗ್ರೂಪ್‌ನ ನೂತನ ಐಷಾರಾಮಿ ಜೀವನಶೈಲಿಯ “ಇನ್ಲ್ಯಾಂಡ್ ಆಸ್ಕಾಟ್”ನ ಮಾಡೆಲ್ ಫ್ಲಾಟ್ ಉದ್ಘಾಟನೆ

    June 13, 2026
    Add A Comment
    Leave A Reply Cancel Reply

    Top Posts

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    114 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್, ರೂ.1,535 ಕೋಟಿ ವ್ಯವಹಾರ : 22ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    June 24, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    114 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್, ರೂ.1,535 ಕೋಟಿ ವ್ಯವಹಾರ : 22ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    June 24, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.