Close Menu
SK Media NewsSK Media News
    What's Hot

    ವಾರ್ಡ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದ ಡಿಸಿಸಿ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ : ತಳಮಟ್ಟದ ಕಾರ್ಯಕರ್ತರಿಗೆ “ನಾನು ನಿಮ್ಮ ಜೊತೆ ಇದ್ದೇನೆ” ಎಂಬ ಭರವಸೆ 

    September 11, 2026

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸಂಭ್ರಮ : 108 ತೆಂಗಿನಕಾಯಿಗಳ ಮಹಾಗಣಪತಿ ಹೋಮ, ವೈಭವದ ಸಾಮೂಹಿಕ ರಂಗಪೂಜೆ

    September 11, 2026

    ಡಿ.ಫಾರ್ಮಾ, ಬಿ.ಫಾರ್ಮಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉದ್ಯೋಗಾವಕಾಶ : ಸೆ.15 ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    September 11, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » 7 ವರ್ಷಗಳ ಬಳಿಕ ಅಮ್ಮ ಮಂಗಳೂರಿಗೆ.. – ಮೇ 28 ಮತ್ತು29ರಂದು ಬೋಳೂರಿನಲ್ಲಿ ಜೀವನೋಲ್ಲಾಸದ ಸಂಭ್ರಮಾಚರಣೆ.
    ಅಂತಾರಾಷ್ಟ್ರೀಯ

    7 ವರ್ಷಗಳ ಬಳಿಕ ಅಮ್ಮ ಮಂಗಳೂರಿಗೆ.. – ಮೇ 28 ಮತ್ತು29ರಂದು ಬೋಳೂರಿನಲ್ಲಿ ಜೀವನೋಲ್ಲಾಸದ ಸಂಭ್ರಮಾಚರಣೆ.

    May 25, 20264 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು, ಮೇ.25 : ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ನಡೆಯಲಿರುವ “ಬ್ರಹ್ಮಸ್ಥಾನಂ ಮಹೋತ್ಸವ- ಅಮೃತಸಂಗಮ 2026” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ದರ್ಶನ ನೀಡಲು ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರೂ ಕೋಟ್ಯಾಂತರ ಭಕ್ತರ ಆರಾಧ್ಯಮಾತೆಯೂ ಆಗಿರುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ(ಅಮ್ಮ)ಯವರು ಇದೇ ಬರುವ ಮೇ. 28ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಮಂಗಳೂರ ಹಾಗೂ ಆಯೋಜನಾ ಸಮಿತಿ ಅಮೃತ ಸಂಗಮ 2026 ಇದರ ಅಧ್ಯಕ್ಷರಾದ ಸುರೇಶ್ ಅಮೀನ್ ತಿಳಿಸಿದರು.

    ಮಾತಾ ಅಮೃತಾನಂದಮಯಿ ಮಠದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಅಮ್ಮನ ಭಕ್ತರ ಬಗ್ಗೆ ಅಮ್ಮನವರಿಗೆ ಅತ್ಯಂತ ಮಮತೆ. ಬಹುಶಃ ಅದೇ ಕಾರಣದಿಂದ ಈ ಬಾರಿ ಕೇರಳದಿಂದ ಹೊರಗಿನ ಏಕೈಕ ಸ್ಥಳ ಕರ್ನಾಟಕದಲ್ಲಿ ಮಂಗಳೂರು ಮಾತ್ರ ಆಯ್ಕೆಯಾಗಿರುವುದು ವಿಶೇಷ, ಅಲ್ಲದೆ 7 ವರ್ಷಗಳ ನಂತರ ಆಗಮಿಸುತ್ತಿರುವ “ಅಮ್ಮ”ನವರಿಗೆ ಭವ್ಯವಾದ ಸ್ವಾಗತ ನೀಡಲು ಅಮ್ಮನ ಭಕ್ತರು ಸಕಲ ಪೂರ್ವಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂದರು.

    25 ನೆಯ ವರ್ಷದ ಸಂಭ್ರಮಾಚರಣೆ ಎಂಬ ವಿಶೇಷತೆ ಹೊಂದಿರುವುದರಿಂದಲೂ ಅಮ್ಮನವರಿಗೆ ಪ್ರಿಯವಾದ ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳಿಗೆ ಕೂಡಾ ಅಮ್ಮನವರಿಂದ ಚಾಲನೆ ದೊರಕಿಸುವಂತೆ ಪ್ರಯತ್ನಿಸಲಾಗುತ್ತದೆ. ತಮ್ಮ ಪ್ರೇಮಸ್ವರೂಪದಲ್ಲಿ ಜಾತಿ ಮತ ಧರ್ಮ ವರ್ಣ ಭೇದವಿಲ್ಲದೆ ಎಲ್ಲರ ಭಾವನೆಗಳಿಗೆ ಸ್ಪಂದಿಸುತ್ತಾ ಅವರ ಶ್ರೇಯೋಭಿವೃದ್ಧಿಗಾಗಿ ಸಂಕಲ್ಪದೊಂದಿಗೆ ಅನುಗ್ರಹಿಸುವ ಮೂಲಕ ಅಮ್ಮನವರು ವಿಶ್ವದಾದ್ಯಂತ ಜನರ ಆರಾಧ್ಯಮಾತೆಯಾಗಿದ್ದಾರೆ.

    ಆಧ್ಯಾತ್ಮಿಕ ಸಾಧಕರಿಗೆ ಸದ್ಗುರುವಾಗಿ ಮಾರ್ಗದರ್ಶನ ನೀಡುವ ಜೊತೆಗೆ ಸಾಮಾಜಿಕ ಮಾನವೀಯ ಸೇವಾಯೋಜನೆಗಳ ಮೂಲಕ ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಆದುದರಿಂದಲೇ ಅಮ್ಮನವರ ಕಾರ್ಯಕ್ರಮ ಹೆಚ್ಚು ಜನಾಕರ್ಷಣೆ ಪಡೆದಿದ್ದು ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಉತ್ಸುಕರಾಗಿದ್ದಾರೆ. ಅಮ್ಮನ ಭಕ್ತರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಮೇ 28 ಮತ್ತು29 ರಂದು ಎರಡು ದಿನಗಳ ಕಾಲ ಬೆಳಗ್ಗಿನಿಂದ ರಾತ್ರಿಯ ತನಕವೂ ವೈವಿದ್ಯಮಯ ಕಾರ್ಯಕ್ರಮಗಳು ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದವರು ವಿವರ ನೀಡಿದರು.

    ಕಾರ್ಯಕ್ರಮಗಳ ವಿವರ: ಮೇ 28 ಗುರುವಾರ ಅಮೃತಸಂಗಮ – ಯಜ್ಞಶಾಲೆಯಲ್ಲಿ

    5.45 am – ಲಲಿತಾ ಸಹಸ್ರನಾಮ ಅರ್ಚನೆ

    7.30 am – ರಾಹು ದೋಷ ನಿವಾರಣಾ ಪೂಜೆ

    10.30 am – ಅಮ್ಮನ ಸತ್ಸಂಗ, ಭಜನೆ, ಧ್ಯಾನ

    ವೈಯಕ್ತಿಕ ದರ್ಶನ – ಅಮೃತಾಲಿಂಗನ

    ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮ:

    5.30 am – ಮಹಾ ಗಣಪತಿ ಹೋಮ
    ನವಗ್ರಹ ಶಾಂತಿ ಹೋಮ
    9.30 am – ಮಹಾ ಮೃತ್ಯುಂಜಯ ಹೋಮ

    5.00 pm – ಮಹಾ ಸುದರ್ಶನ ಹೋಮ

    6.00 pm – ಅಲಂಕಾರ ಪೂಜೆ

    7.00 pm – ದೇವಿ ಪೂಜೆ (ಭಗವತಿ ಸೇವೆ)

    ಉದಯಾಸ್ತಮಾನ ಪೂಜೆ ಪ್ರಸಾದ ಸಂಜೆಯ ಆರತಿಯ ನಂತರ

    ಮೇ 29, 2026 ಶುಕ್ರವಾರ ಅಮೃತಸಂಗಮ -ಯಜ್ಞಶಾಲೆಯಲ್ಲಿ

    5.45 am – ಲಲಿತಾ ಸಹಸ್ರನಾಮ ಅರ್ಚನೆ

    7.30 am – ಶನಿ ದೋಷ ನಿವಾರಣ ಪೂಜೆ

    10.30 am – ಅಮ್ಮನ ಸತ್ಸಂಗ, ಭಜನೆ, ಧ್ಯಾನ

    ವೈಯಕ್ತಿಕ ದರ್ಶನ-ಅಮೃತಾಲಿಂಗನ

    ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ

    5.30 am – ಮಹಾ ಗಣಪತಿ ಹೋಮನವಗ್ರಹ ಶಾಂತಿ ಹೋಮ

    9.30 am – ಮಹಾ ಧನ್ವಂತರಿ ಹೋಮ

    5.00 pm – ಮಹಾ ಸುದರ್ಶನ ಹೋಮ

    6.00 pm – ಅಲಂಕಾರ ಪೂಜೆ

    7.00 pm – ದುರ್ಗಾ ಪೂಜೆ

    ಉದಯಾಸ್ತಮಾನ ಪೂಜೆ ಪ್ರಸಾದ – ಸಂಜೆ ಆರತಿಯ ನಂತರ ವಿಶೇಷ ಲೇಖನ ಯಜ್ಞ:

    ಅಮ್ಮನವರ ಮಂಗಳೂರು ಭೇಟಿ ಮತ್ತು ಬ್ರಹ್ಮಸ್ಥಾನಂ ಮಹೋತ್ಸವದ ಪ್ರಯುಕ್ತ ” ಓಂ ಶಿವ ಶಕ್ತ್ಯೈಕ್ಯ ರೂಪಿಣ್ಯೈ ನಮಃ ” ಎಂಬ ಮಂತ್ರದ ಲೇಖನ ಯಜ್ಞದೊಂದಿಗೆ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಹಾಗೂ ಅಮ್ಮನವರಿಗೆ ಭಕ್ತಿಭಾವದ ಕೃತಜ್ಞತೆ ಅರ್ಪಿಸಲಾಗುತ್ತದೆ. ಈ ವಿಶೇಷ ಲೇಖನ ಯಜ್ಞಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ದಿನಾಂಕ 28 ರಂದು ಬೆಳಗ್ಗೆ 10.30 ಕ್ಕೆ ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳ ಅನಾವರಣ.

    ಅಮ್ಮನವರ ದಿವ್ಯ ಉಪಸ್ಥಿತಿಯಲ್ಲಿ ಅಮೃತಸಂಗಮ 2026 ಸಭಾ ಕಾರ್ಯಕ್ರಮವು ಗಣ್ಯರ ಸಮಾಗಮದಲ್ಲಿ ಜರುಗಲಿರುವುದು. ಭಾರತ ಸರಕಾರದ ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀನ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿ ಹಾಗೂ ಭಾರತ ಸರಕಾರದ ವಿದ್ಯುತ್ ಸಚಿವಾಲಯದ ರಾಜ್ಯ ಸಚಿವರು ಮತ್ತು ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

    ಕರ್ನಾಟಕ ಸರಕಾರದ ವಿಧಾನ ಸಭಾ ಸಭಾಪತಿ ಶ್ರೀ ಯು. ಟಿ.ಖಾದರ್ ಫರೀದ್, ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬೃಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನ ಸಭಾ ಸದಸ್ಯ ಶ್ರೀ ಡಿ.ವೇದವ್ಯಾಸ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಕರ್ನಾಟಕ ಸರಕಾರದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಿತೇಶ್ ಕುಮಾರ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿರುವರು.

    ಗಣ್ಯರ ಉಪಸ್ಥಿತಿಯಲ್ಲಿ ಅಮ್ಮನವರ ಮಾನವೀಯ ಸೇವಾ ಉಪಕ್ರಮಗಳ ಅನಾವರಣ ಹಾಗೂ ವಿತರಣೆ ನಡೆಯಲಿರುವುದು.

    🔳ಅಮ್ಮನ ದರ್ಶನ ಪಡೆಯುವ ವಿಧಾನ ಹೇಗೆ❓

    🔳ಅಮ್ಮನ ದರ್ಶನಕ್ಕೆ ಯಾವುದೇ ಶುಲ್ಕವಿರುವುದಿಲ್ಲ,

    🔳ಎಲ್ಲರಿಗೂ ಉಚಿತ ದರ್ಶನ:
    ಅಮ್ಮನವರು ಭಕ್ತರ ಶ್ರೇಯೋಭಿವೃದ್ಧಿಗಾಗಿ ಸಂಕಲ್ಪಮಾಡುವಾಗ ಯಜ್ಞ ಶಾಲೆಯಲ್ಲಿ ಆಸೀನರಾಗಿರುವುದು ಶ್ರೇಯಸ್ಕರ ಎಂಬುದು ಭಕ್ತರ ಅನುಭವದ ಮಾತಾಗಿದೆ.

    🔳ದರ್ಶನ ಟೋಕನ್ ವ್ಯವಸ್ಥೆ:
    ಅಮ್ಮನವರ ದರ್ಶನವನ್ನು ಪಡೆಯಲು ಬಯಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಟೋಕನ್ ವ್ಯವಸ್ಥೆ ಇರುತ್ತದೆ. ಬೆಳಗ್ಗೆ 9.30 ರ ಒಳಗೆ ಬಂದು ಕುಳಿತವರಿಗೆ ಟೈಮ್ ಕಾರ್ಡ್ ನೀಡಲಾಗುತ್ತದೆ. ಜನರು ಬಂದ ಸಮಯಕ್ಕೆ ಅನುಗುಣವಾಗಿ ಟೈಮ್ ಕಾರ್ಡ್ ಸಂಖ್ಯೆಗಳಿದ್ದು ಅದಕ್ಕೆ ತಕ್ಕಂತೆ ಆನಂತರ ದರ್ಶನ ಟೋಕನ್ ನೀಡಲಾಗುತ್ತದೆ.
    ಅಮ್ಮನವರ ಸತ್ಸಂಗ, ಧ್ಯಾನ, ಭಜನೆಯ ನಂತರ ಅಮ್ಮನವರು ದರ್ಶನ ಟೋಕನ್ ನ ಸರದಿಯಂತೆ ಟೋಕನ್ ಹೊಂದಿರುವ ಪ್ರತಿಯೊಬ್ಬರಿಗೂ ಅಮ್ಮನವರು ಅಪ್ಪುಗೆಯ ಅಮೃತಾಲಿಂಗನದ ಅನುಗ್ರಹ ದರ್ಶನ ನೀಡಲಿರುವರು.

    🔳ದರ್ಶನಕ್ಕೆ ಪುಟ್ಟ ಮಗುವಿಗೂ ಟೋಕನ್ ಪಡೆಯುವುದು ಅವಶ್ಯಕ

    🔳ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ

    ಅಮ್ಮನವರು ಮಾತೃವಾತ್ಸಲ್ಯದಿಂದ ಬಳಿಬರುವ ಎಲ್ಲಾ ಭಕ್ತರನ್ನು
    ತಮ್ಮ ಮಮತೆಯ ಮಡಿಲಲ್ಲಿ ಅಪ್ಪಿಕೊಂಡು ಅವರ ಸಂಕಷ್ಟಗಳ ನಿವಾರಣೆಗೆ ಸಂಕಲ್ಪ ಮಾಡಿ ಅನುಗ್ರಹಿಸುವ “ಅಮೃತಾಲಿಂಗನ”ದ ಮಹತ್ವ ಅರಿತ ಅಮ್ಮನ ಭಕ್ತರು ದೇಶ ವಿದೇಶಗಳಿಂದ ಬರುತ್ತಿದ್ದಾರೆ.

    🔳ಪರವೂರಿನ ಭಕ್ತರಿಗೆ ವಸತಿ ಸೌಲಭ್ಯ:
    ವಿದೇಶೀ ಭಕ್ತರ ಸಹಿತ ಆಶ್ರಮವಾಸಿಗಳು, ಸೇವಾರ್ಥಿಗಳಿಗಾಗಿ
    ಮಂಚಿತವಾಗಿ ನೊಂದಣಿ ಮಾಡಿದವರಿಗೆ ಸಾಕಷ್ಟು ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

    🔳ಮಹಾ ಅನ್ನ ಸಂತರ್ಪಣೆ:
    ದಿನಾಂಕ 28 ಮತ್ತು 29 ಮೇ 2026 ರಂದು ಎರಡು ದಿನಗಳ ಕಾಲ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಅದಕ್ಕೆ ವಿಶಾಲವಾದ ಅನ್ನಕ್ಷೇತ್ರ ಸಿದ್ಧಗೊಂಡಿದೆ.

    🔳ಭಕ್ತರ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಮಜ್ಜಿಗೆ ಮತ್ತು ಬಿಸ್ಕೆಟ್ ಸೌಲಭ್ಯ ಕಲ್ಪಿಸಲಾಗುತ್ತದೆ.
    🔳ಕಾರ್ಯಕ್ರಮದ ನಂತರ ಮತ್ತು ಅಮ್ಮನ ದರ್ಶನ ಪಡೆದ ನಂತರ ವಿವಿಧ ಸ್ಥಳಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಇರುತ್ತದೆ.
    ಕರ್ನಾಟಕ ರಸ್ತೆ ಸಾರಿಗೆಯವರ ಸೇವೆಯೂ ಲಭ್ಯವಿರುತ್ತದೆ.

    ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷರುಗಳಾದ ಡಾ ಜೀವರಾಜ್ ಸೊರಕೆ, ಸಿ ಎ ವಾಮನ್ ಕಾಮತ್ , ಡಾ. ವಸಂತಕುಮಾರ ಪೆರ್ಲ ಮುಂತಾದವರು ಕಾರ್ಯಕ್ರಮದ ಕುರಿತು ಪೂರಕ ಮಾಹಿತಿಗಳನ್ನು ನೀಡಿದರು.

    ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ವೈದ್ಯಕೀಯ ಪ್ರಕೋಷ್ಠದ ಮುಖ್ಯಸ್ಥರಾದ ಡಾ.ದೇವದಾಸ್ ಪುತ್ರನ್ ಸ್ವಾಗತಿಸಿದರು. ಅಮೃತಸಂಗಮ ಆಯೋಜನಾ ಸಮಿತಿಯ ಕಾರ್ಯದರ್ಶಿ C A ರಾಮನಾಥ್ ವಂದಿಸಿದರು.

    _Sathish Kapikad

    Share. Facebook Twitter Pinterest LinkedIn Email WhatsApp
    Previous Articleತಲಪಾಡಿ ಶ್ರೀ ಕೃಷ್ಣ ಭಜನಾ ಮಂದಿರ ವತಿಯಿಂದ ಬಡ ಮಕ್ಕಳಿಗೆ ಪುಸ್ತಕ ಮತ್ತು ಬ್ಯಾಗು ವಿತರಣೆ
    Next Article ಮಂಗಳೂರಿನಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿ ಬ್ರಹ್ಮಸ್ಥಾನ ಮಹೋತ್ಸವಕ್ಕೆ ಭವ್ಯ ಚಾಲನೆ : ಅಮೃತ ಸಂಗಮಕ್ಕೆ ಹರಿದು ಬಂದ ಜನ ಸಾಗರ

    Related Posts

    ಅಂತಾರಾಷ್ಟ್ರೀಯ

    Gulf Medical University Commences 2026–2027 Academic Year, Reinforcing Its Commitment to Excellence in Health Professions Education

    September 7, 2026
    ಅಂತಾರಾಷ್ಟ್ರೀಯ

    Thumbay Media launches Gulf Education, strengthening its growing five-title publishing portfolio

    August 28, 2026
    ಅಂತಾರಾಷ್ಟ್ರೀಯ

    Dr. Thumbay Moideen Wins Global Leadership Award 2026, Gives Away ₹1.5 Crore Thumbay International Pathway Program  a 6-year MD pathway where students complete 3 years at Gulf Medical University in Ajman, followed by 3 years at a partner medical university in Uzbekistan, graduating with a full MD degree.

    August 17, 2026
    Add A Comment
    Leave A Reply Cancel Reply

    Top Posts

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.