ಮಂಗಳೂರು: ಶ್ರೀ ಕೃಷ್ಣ ಭಜನಾ ಮಂದಿರ ಕೆ ಸಿ ರೋಡ್ ತಲಪಾಡಿ ಇದರ ವತಿಯಿಂದ 2026 ನೇ ಸಾಲಿನಲ್ಲಿ ಕಲಿಯುತ್ತಿರುವ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಬಡ ಮಕ್ಕಳಿಗೆ ದಿನಾಂಕ 24-05-2026 ರಂದು ಪುಸ್ತಕ ಮತ್ತು ಬ್ಯಾಗು ವಿತರಣೆಯನ್ನು ಗಣ್ಯರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಒಟ್ಟು 65 ಮಂದಿ ವಿದ್ಯಾರ್ಥಿಗಳಿಗೆ ಅವರ ಅವಶ್ಯಕತೆ ಅನುಗುಣವಾಗಿ ಸಂಪೂರ್ಣ ಪುಸ್ತಕ ನೀಡಲಾಯಿತು ಅಲ್ಲದೆ 2026 ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ವಿಶೇಷ ಸಾಧನೆಗೈದ ಎರಡು ಬಡ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕಾರ ನೀಡಲಾಯಿತು.

ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾ ಮಹನೀಯರಿಗೆ ಮಂದಿರದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

_Sathish Kapikad 

Share.
Leave A Reply

Exit mobile version