Close Menu
SK Media NewsSK Media News
    What's Hot

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ವಿಧಿವಶ

    July 18, 2026

    ಹೈ ಕೋರ್ಟ್ ಸರಕಾರಿ ವಕೀಲರಾಗಿ “ಚಿದಾನಂದ ಬಂಟ್ವಾಳ್ ” ನೇಮಕ

    July 18, 2026

    ದ.ಕ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರೀ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ 

    July 17, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಬೃಹಶ್ರೀ ನಾರಾಯಣ ಗುರುಗಳ ತತ್ವಗಳು ಸಮಾಜವನ್ನು ಒಟ್ಟುಗೂಡಿಸಿದೆ: ವಿಧಾನಸಭಾಧ್ಯಕ್ಷ ಯು. ಟಿ ಖಾದರ್.
    ಕರಾವಳಿ

    ಬೃಹಶ್ರೀ ನಾರಾಯಣ ಗುರುಗಳ ತತ್ವಗಳು ಸಮಾಜವನ್ನು ಒಟ್ಟುಗೂಡಿಸಿದೆ: ವಿಧಾನಸಭಾಧ್ಯಕ್ಷ ಯು. ಟಿ ಖಾದರ್.

    May 15, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಬೆಂಗಳೂರು ಮೇ 15 ; ಬೃಹಶ್ರೀ ನಾರಾಯಣ ಗುರುಗಳು ಮಹಾಪುರುಷರುಗಳ ಸಾಲಿನಲ್ಲಿ ಮುಂಚೂಣಿಯ ವ್ಯಕ್ತಿತ್ವದವರಾಗಿದ್ದರು. ಇವರುಗಳ ತತ್ವಗಳು ಮತ್ತು ಆದರ್ಶಗಳು ಇಡೀ ಸಮಾಜವನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಯಾವ ಜಾತಿ, ಧರ್ಮ, ಪಂಥ ದೊಡ್ಡದಲ್ಲ ಚಿಕ್ಕದೂ ಅಲ್ಲ ಎನ್ನುವ ಉದ್ಘೋಷವನ್ನು ಅವರು ನೀಡಿದ್ದು ಅದು ಇಂದಿಗೂ ಪ್ರಸ್ತುತವಾಗಿದೆ ಎಂದು ವಿಧಾನಸಭಾಧ್ಯಕ್ಷ ಯು. ಟಿ ಖಾದರ್ ಹೇಳಿದರು.

    ಮೈಸೂರು ಬ್ಯಾಂಕ್ ವೃತ್ತದ ಕರ್ನಾಟಕ ಗೃಹ ಮಂಡಳಿಯ ಕಟ್ಟಡದಲ್ಲಿ ಅಸ್ತಿತ್ವಕ್ಕೆ ಬಂದಿರುವ ನಾರಾಯಣ ಗುರು ನಿಗಮದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಅತ್ಯಂತ ಸಭ್ಯ ವ್ಯಕ್ತಿಯಾಗಿದ್ದು, ಅವರು ತಮಗೆ ನೀಡಿರುವ ಜವಾಬ್ದಾರಿಯ ಮೂಲಕ ನಾರಾಯಣ ಗುರುಗಳ ಆದರ್ಶವನ್ನು ಸರ್ವ ಸಮಾಜಕ್ಕೆ ತಗೆದುಕೊಂಡು ಹೋಗುವ ಕೆಲಸವನ್ನು ಮಾಡಲಿದ್ದಾರೆ. ಕೊಟ್ಟಿರುವ ಅನುದಾನವನ್ನು ಬಳಸಿಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮೇಲೆತ್ತುವ ಕಾರ್ಯಕ್ಕೆ ಮುನ್ನುಡಿ ಬರೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಪಕ್ಷ ನಾರಾಯಣ ಗುರುಗಳ ನಿಗಮ ಸ್ಥಾಪಿಸುವ ವಾಗ್ದಾನ ಪೂರೈಸಿದೆ; ಸಚಿವ ಮಧು ಬಂಗಾರಪ್ಪ.

    ನಮ್ಮ ಕಾಂಗ್ರೆಸ್ ಪಕ್ಷ ವಿಶೇಷವಾಗಿ ನಾರಾಯಣ ಗುರುಗಳ ನಿಗಮವನ್ನು ಸ್ಥಾಪಿಸುವ ವಾಗ್ದಾನವನ್ನು ಪೂರೈಸಿದೆ. ಜನಾನುರಾಗಿಯಾದ ಮಂಜುನಾಥ್ ಪೂಜಾರಿ ಅವರನ್ನು ಮೊಟ್ಟ ಮೊದಲ ಅಧ್ಯಕ್ಷರನ್ನಾಗಿ ಸರ್ವರನ್ನೂ ಮೇಲೆತ್ತುವ ಕೆಲಸಕ್ಕೆ ಅತಿ ದೊಡ್ಡ ಮುನ್ನುಡಿಯನ್ನು ಬರೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ನುಡಿದರು.

    ನಾರಾಯಣ ಗುರು ನಿಗಮ ಅತ್ಯಂತ ಪ್ರಮುಖವಾದ ನಿಗಮವಾಗಿದೆ. ಮಹಾತ್ಮಾ ಗಾಂಧಿ ಅವರು ಅತ್ಯಂತ ಗೌರವದಿಂದ ನಾರಾಯಣ ಗುರುಗಳನ್ನು ಕಂಡಿದ್ದು, ಇಂದಿಗೂ ನಿದರ್ಶನವಾಗಿರುವ ಸಂದರ್ಭದಲ್ಲಿ ನೂತನ ಕಛೇರಿ ಅಸ್ಥಿತ್ವಕ್ಕೆ ಬಂದಿರುವುದು ಸಮಸ್ತ ಜಾತಿ, ವರ್ಗ ಮತ್ತು ಪಂಥ ಒಂದುಗೂಡಿಸುವ ಕಾರ್ಯಕ್ಕೆ ಮುನ್ನುಡಿಯಾಗಿದೆ ಎಂದು ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಭಿಪ್ರಾಯಿಸಿದರು.

    ಈ ಸಂದರ್ಭದಲ್ಲಿ ಮಾಜಿ ಸಚಿವ ರಾಮನಾಥ್ ರೈ, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ, ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ರಕ್ಷಿತ್ ಶಿವರಾಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಳಸೀ ಮುದ್ದನೇನಿ, ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕೂಲೆರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಗಪೂರ್ ಸೇರಿದಂತೆ ಸಮಾಜದ ವಿವಿಧ ಹಿರಿಯ ಮುಖಂಡರು ಹಾಜರಿದ್ದರು.

    ಫಲಾನುಭವಿಗಳಿಗೆ 5 ಲಕ್ಷ ರೂ :

    ಮೂರ್ತೇದಾರರ ಪುನರ್ವಸತಿಗಾಗಿ ನಾರಾಯಣ ಗುರು ಅಭಿವೃದ್ಧಿ ನಿಗಮದಿಂದ ಪೈಲೆಟ್ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಇದರ ಅನ್ವಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೊದಲ ಹಂತವಾಗಿ ಪೈಲೆಟ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರ ಯಶಸ್ಸಿನ ಬಳಿಕ ರಾಜ್ಯದ ಇನ್ನೂ ಕೆಲವು ಜಿಲ್ಲೆಗಳಲ್ಲಿ ಜಾರಿಗೆ ತರಲಾಗುವುದು. ಒಟ್ಟು ಈ ಯೋಜನೆಗಾಗಿ 1.50 ಕೋಟಿ ರೂ ಗಳನ್ನು ತೆಗೆದಿರಿಸಲಾಗಿದ್ದು, ಸ್ವಂತ ಉದ್ಯೋಗಕ್ಕಾಗಿ ಫಲಾನುಭವಿಗಳಿಗೆ 5 ಲಕ್ಷ ರೂ ನೀಡಲಾಗುತ್ತಿದೆ.

    ರಾಜ್ಯಸರ್ಕಾರ 10 ಕೋಟಿ ರೂ ವಾರ್ಷಿಕ ಅನುದಾನ ನೀಡಿದೆ. ಇದರಲ್ಲಿ ಪ್ರಮುಖವಾಗಿ ಅರಿವು ಶಿಕ್ಷಣ ಕಾರ್ಯಕ್ರಮಕ್ಕೆ 4 ಕೋಟಿ ರೂ ಮತ್ತು ಗಂಗಾ ಕಲ್ಯಾಣ ಯೋಜನೆಗೆ 2.5 ಕೋಟಿ ರೂ ಗಳನ್ನು ತಗೆದಿರಿಸಲಾಗಿದೆ.

    –ಮಂಜುನಾಥ್ ಪೂಜಾರಿ, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ

    _Sathish Kapikad 

    Share. Facebook Twitter Pinterest LinkedIn Email WhatsApp
    Previous Articleಕುಮಾರಿ ನಿಮಿಷ ಶೆಣೈ ಇವರ ಭರತನಾಟ್ಯ ರಂಗಪ್ರವೇಶ : ವಿಶೇಷ ಚಿತ್ರಗಳು ( Photo Album)
    Next Article ಕದ್ರಿ ಉದ್ಯಾನವನದಲ್ಲಿ ರಾಜ್ಯ ಮಟ್ಟದ ಗೇರು ಮೇಳಕ್ಕೆ ಸಿದ್ಧತೆ -ಸಾರ್ವಜನಿಕರಿಗೆ ಉಚಿತ ಗೇರು ಗಿಡ ವಿತರಣೆ : ಮಮತಾ ಡಿ.ಗಟ್ಟಿ

    Related Posts

    ಕರಾವಳಿ

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ವಿಧಿವಶ

    July 18, 2026
    ಕರಾವಳಿ

    ಹೈ ಕೋರ್ಟ್ ಸರಕಾರಿ ವಕೀಲರಾಗಿ “ಚಿದಾನಂದ ಬಂಟ್ವಾಳ್ ” ನೇಮಕ

    July 18, 2026
    ಕರಾವಳಿ

    ದ.ಕ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರೀ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ 

    July 17, 2026
    Add A Comment
    Leave A Reply Cancel Reply

    Top Posts

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    114 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್, ರೂ.1,535 ಕೋಟಿ ವ್ಯವಹಾರ : 22ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    June 24, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    114 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್, ರೂ.1,535 ಕೋಟಿ ವ್ಯವಹಾರ : 22ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    June 24, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.