
ಮಂಗಳೂರಿನ ಹೃದಯಭಾಗ ಕರಂಗಲಪಾಡಿ ಶ್ರೀ ಚಂದಮೌಳೀಶ್ವರ ಮಹಾಸತಿ ಶ್ರೀ ಭಗವತಿ ಅಮ್ಮನ ಸಾನಿಧ್ಯದಲ್ಲಿ 12 ತೆಂಗಿನಕಾಯಿಯ ಗಣ ಹೋಮ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಕೃಷ್ಣ ಅಡಿಗರಿಂದ ನಡೆಯಿತು.
ನಂತರ ಬೆಳಗ್ಗಿನಿಂದ ರಾತ್ರಿಯವರೆಗೆ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಿ ಕಾಯಿ ಒಡೆಯಲು ಕಲ್ಪಿಸಲಾಗಿದ್ದು ಸಹಸ್ರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ಬಂದು ತಮ್ಮ ಇಷ್ಟಾರ್ಥ ಬೇಡಿ ತೆಂಗಿಕಾಯಿ ಹೊಡೆದರು.

ಸಂಜೆ ಅಮ್ಮನವರಿಗೆ ಅಭಿಷೇಕ ನಡೆದು ಪುಷ್ಪಾಲಂಕಾರ ಹಾಗೂ ದೀಪಾಲಂಕಾರ ಸೇವೆ ಬಳಿಕ ಮಹಾಪೂಜೆ ಸುಧನ್ ಜೀ ಯವರಿಂದ ನೆರವೇರಿತು.
ಶ್ರೀ ಮಹಾಸತಿ ಶ್ರೀ ಭಗವತಿ ಅಮ್ಮನವರಿಗೆ ಭಕ್ತರು ಹರಕೆ ರೂಪದಲ್ಲಿ ಹೂವು, ಸೀರೆ, ಬಳೆ, ದೂಪದ ಕಡ್ಡಿ, ದೀಪದ ಎಣ್ಣೆ, ಕರ್ಪೂರ, ಆರತಿ ಬತ್ತಿ, ಸೀಯಾಳ ಅಪಾರ ಸಂಖ್ಯೆ ಯಲ್ಲಿ ಭಕ್ತಾಧಿಗಳು ಆಗಮಿಸಿ ಸಮರ್ಪಿಸಿದರು
ರೋಷನ್ ಜೀ, ನವೀನ್ ಜೀ , ಶ್ರೀ ಮಹಾಸತಿ ಶ್ರೀ ಭಗವತಿ ಅಮ್ಮನ ಭಕ್ತ ಸಮೂಹ ಕರಂಗಲಪಾಡಿ ಮಂಗಳೂರು ಉಪಸ್ಥಿತರಿದ್ದರು.
_Sathisj Kapikad

