
ಕುದ್ರೋಳಿ : ಇಲ್ಲಿನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಶಿವ ಫ್ರೆಂಡ್ಸ್ ಆಶ್ರಯದಲ್ಲಿ ಕುದ್ರೋಳಿ ನಾರಾಯಣ ಗುರು ಶಾಲೆಯ ಮೈದಾನದಲ್ಲಿ 18ನೇ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭೆ ಜರುಗಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ವೇದಮೂರ್ತಿ ಶ್ರೀ ಹರಿನಾರಾಯಣದಾಸ ಅಸ್ರಣ್ಣ ಅವರು ಆಶೀರ್ವಚನ ನೀಡಿದರು.

ಉದ್ಯಮಿ ಸಂತೋಷ್ ಕುಮಾರ್ ಗಡಿಯಾರ್ , ಶಾಸಕ ಡಿ ವೇದವ್ಯಾಸ ಕಾಮತ್, ಉದ್ಯಮಿ ಬೋಳ ಪ್ರಶಾಂತ್ ಕಾಮತ್, ಹೇಮಂತ್ ಶೇಟ್ – ಪಾರ್ಟನರ್ ಎಸ್ ಎಲ್ . ಶೇಟ್ ಜ್ಯುವೆಲ್ಲರಿ & ಡೈಮಂಡ್ ಹೌಸ್ , ಉದ್ಯಮಿ ಕಾರ್ತಿಕ್ ಗಡಿಯಾರ್ , ಬಿ. ಪ್ರವೀಣ್ ಶೇಟ್ ನಗುವೇಕರ್ ಆಡಳಿತ ಮೊಕ್ತೆಸರರು ಶ್ರೀ ವೆಂಕಟರಮಣ ದೇವಸ್ಥಾನ, ಉಧ್ಯಮಿ ನಿತ್ಯಾನಂದ ಶೆಟ್ಟಿಗಾರ್, ಉದ್ಯಮಿ ಸಾಕ್ಷಾತ್ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೃತ್ಯ ಪಟು ರೆಮೋನಾ ಪಿರೇರಾ, ಸಿ.ಎ ಶ್ರವಣ್ ಕುಮಾರ್, ಮಂಗಳೂರು ಮೇರಿ ಜಾನ್ ನ ವಾಸೀಮ್ ರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಿವ ಫ್ರೆಂಡ್ಸ್ ತಂಡದ ಗೌರವ ಅಧ್ಯಕ್ಷರು ಶ್ರೀ ಉಮಾನಾಥ ಶೆಟ್ಟಿಗಾರ್, ಅಧ್ಯಕ್ಷರು ಶಿವಪ್ರಸಾದ್ ಕುಲಾಲ್, ಹಾಗೂ ತಂಡದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
__Sathish Kapikad

