Close Menu
SK Media NewsSK Media News
    What's Hot

    ನಡೆದಾಡುವ, ಮಾತನಾಡುವ ದೇವರು ಅಮ್ಮ :ಅಮ್ಮ ಮಂಗಳೂರಿಗೆ ಆಗಮನ ಹಿನ್ನೆಲೆ ಚಪ್ಪರ ಮುಹೂರ್ತ ನೆರವೇರಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

    May 6, 2026

    ಕೀರ್ತನ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ `ಗಜಾನನ ಕ್ರಿಕೆಟರ್ಸ್” ತುಳು ಚಿತ್ರ ಮೇ 22ರಂದು ತೆರೆಗೆ

    May 5, 2026

    ಪಂಚರಾಜ್ಯ ಚುನಾವಣೆಯಲ್ಲಿ ಹಿಂದೂ ವಿರೋಧಿಗಳಿಗೆ ತಕ್ಕ ಪಾಠ : ಸತೀಶ್ ಕುಂಪಲ

    May 4, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರಾವಳಿ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ನಾಲ್ಕನೇ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ : ಬ್ರಹ್ಮಕಲಶಾಭಿಷೇಕಕ್ಕೆ ಕ್ಷಣಗಣನೆ
    ಕರಾವಳಿ

    ನಾಲ್ಕನೇ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ : ಬ್ರಹ್ಮಕಲಶಾಭಿಷೇಕಕ್ಕೆ ಕ್ಷಣಗಣನೆ

    March 11, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಂಗಳೂರು : ಅದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.15ರಿಂದ 20ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಾ.18ಕ್ಕೆ ರುದ್ರಯಾಗ, 19ರಂದು ಸಹಸ್ರ ನಾಳಿಕೇರ ಮಹಾಗಣಪತಿ ಹೋಮ, 20ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ನಾಗರಾಜ ಶೆಟ್ಟಿ ತಿಳಿಸಿದರು.

    ಅವರು ದೇವಾಲಯದ ಪ್ರಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 2 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಆಡಳಿತ ಮೊಕ್ತೇಸರ ಎ.ಮಂಜುನಾಥ ಭಂಡಾರಿ ಶೆಡ್ಡೆ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಗಳು ವಿಧಿವತ್ತಾಗಿ ನಡೆಯುತ್ತಿದೆ ಎಂದರು.

    ಕ್ಷೇತ್ರದ ಆಡಳಿತ ಮೊಕ್ತೇಸರ ಎ. ಮಂಜುನಾಥ ಭಂಡಾರಿ ಶೆಡ್ಡೆ ಅವರ ನೇತೃತ್ವದಲ್ಲಿ ನಾಲ್ಕನೇ ಬಾರಿ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಮಾರ್ಚ್ 15 ರಂದು ಹೊರೆಕಾಣಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

    ದೈವ ದೇವರು ನೆಲೆವೀಡು ಬೈಲುಮಾಗಣೆ ಅದ್ಯಪಾಡಿ ಪುಣ್ಯ ಕ್ಷೇತ್ರಗಳಲ್ಲಿ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಕೂಡ ಭಕ್ತರ ಮನೋಭೀಷ್ಟವನ್ನು ಅನುಗ್ರಹಿಸುವ ಮಹಾಗಣಪತಿ ದೇವರು, ಈಶ್ವರ ದೇವರು ಮತ್ತು ನಾಗದೇವರ ಜತೆಗೆ ದೈವಂಗಳಗುಡ್ಡೆಯ ದೈವಗಳ ಸಾನಿಧ್ಯ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಈ ದೇವಾಲಯಕ್ಕೆ ವಿಶಿಷ್ಟ ಶಕ್ತಿ ಇದೆ ಎಂದು ತಿಳಿಸಿದರು.

    ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ದೇವಸ್ಥಾನದ ಮೊಕ್ತೇಸರರಾದ ಮಂಜುನಾಥ ಭಂಡಾರಿ ಶೆಡ್ಡೆ ಅವರ ನೇತೃತ್ವದಲ್ಲಿ ನಾಲ್ಕನೇ ಸಲದ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ನಾಲ್ಕು ಬಾರಿಯೂ ನಡೆದ ಬ್ರಹ್ಮಕಲಶೋತ್ಸವ ಸನಾತನ ಧರ್ಮದ ಸೂತ್ರಕ್ಕೆ ಅನುಗುಣವಾಗಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತಿದೆ ಎಂದರು.

    ಸಾಮಾಜಿಕ ಬದ್ಧತೆ ಹೊಂದಿರುವ ದೇವಳದಲ್ಲಿ ಮದುವೆ, ಉಪನಯನ ಮುಂತಾದ ಕಾರ್ಯಕ್ರಮಗಳಿಗೆ 18,000 ಚದರ ಅಡಿಗೂ ಮಿಕ್ಕಿದ ವಿಸ್ತೀರ್ಣದ ಸಭಾಂಗಣದ ಜತೆಗೆ ಆಸನಗಳು, ಪಾಕಶಾಲೆಯಲ್ಲದೆ ವಿದ್ಯುತ್ ಅನ್ನು ಇಪ್ಪತ್ತೈದು ವರ್ಷಗಳಿಂದಲೂ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ದೇವಳಕ್ಕೆ ಪೂರಕವಾಗಿ ಭಕ್ತರ ಅನುಕೂಲಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಸಮಾಜದ ಬಂಧುಗಳ ಸಹೃದಯಿ ಸಹಕಾರದಿಂದ ನಡೆಸಿಕೊಂಡು ಬರುತ್ತಿದ್ದು, ಪ್ರಸಕ್ತ ಸಾಲಿನ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸುಮಾರು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು ದಾನಿಗಳ ಸಹಕಾರದಿಂದ ಅವೆಲ್ಲವೂ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.

    ಆರು ದಿನಗಳ ಕಾಲ ನಡೆವ ಈ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಬರುವ ಎಲ್ಲ ಭಕ್ತರಿಗೆ ಬೆಳಗ್ಗೆ ಹಾಗೂ ಸಂಜೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ಬ್ರಹ್ಮಕಲಶೋತ್ಸವದ ಈ ಆರೂ ದಿನಗಳ ಕಾಲ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಊರ ಪರವೂರಿನ ಸಮಸ್ತ ಭಕ್ತ ಬಂಧುಗಳು ಸಕುಟುಂಬಿಕರಾಗಿ ಪಾಲ್ಗೊಂಡು ದೇವರ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.

    ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಎ. ಮಂಜುನಾಥ ಭಂಡಾರಿ ಶೆಡ್ಡೆ , ಕಾರ್ಯಾಧ್ಯಕ್ಷ ಹರೀಶ್ ಶೆಟ್ಟ ಏತಮೊಗರು ದೊಡ್ಡಮನೆ ಬೈಲುಮೂಡುಕರೆ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಭುಜಂಗ ಶೆಟ್ಟಿ ಚೆಪುಗುಡ್ಡೆ ಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಅಡ್ಯಾರ್ ಕಟ್ಟೆ , ದಿವಾಕರ ಸಾಮಾನಿ ಚೇಳಾರು ಗುತ್ತು, ಸತೀಶ್ ಆಳ್ವ ಬೈಲುಮೂಡುಕರೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಶೆಡ್ಡೆ, ಜಯರಾಮ ಕೊಟ್ಟಾರಿ ಶೆಡ್ಡೆ, ಹೊರೆಕಾಣಿಕೆ ಸಮಿತಿಯ ಅಧ್ಯಕ್ಷರಾದ ರಮಾನಾಥ , ಡಾ.ಆಶಾಜ್ಯೋತಿ ರೈ, ದೇವದಾಸ್ ನಾಯಕ್, ಅದ್ಯಪಾಡಿ ಗುತ್ತು ರಾಜೀವ್ ಆಳ್ವ, ಬಾಲಕೃಷ್ಣ.ರೈ ಕೊಳಂಬೆಗುತ್ತು, ಅಶ್ವಿನ್ ಬಳ್ಳಾಲ್‌ ಉಪಸ್ಥಿತರಿದ್ದರು.

    __Sathish Kapikad

    Share. Facebook Twitter Pinterest LinkedIn Email WhatsApp
    Previous Articleನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ನಂದನ್ ಮಲ್ಯ ಮರು ಆಯ್ಕೆ
    Next Article ಮಂಗಳೂರು : ಪಿಲಿಕುಳದ ಗುತ್ತು ಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ

    Related Posts

    ಕರಾವಳಿ

    ನಡೆದಾಡುವ, ಮಾತನಾಡುವ ದೇವರು ಅಮ್ಮ :ಅಮ್ಮ ಮಂಗಳೂರಿಗೆ ಆಗಮನ ಹಿನ್ನೆಲೆ ಚಪ್ಪರ ಮುಹೂರ್ತ ನೆರವೇರಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

    May 6, 2026
    ಕರಾವಳಿ

    ಕೀರ್ತನ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ `ಗಜಾನನ ಕ್ರಿಕೆಟರ್ಸ್” ತುಳು ಚಿತ್ರ ಮೇ 22ರಂದು ತೆರೆಗೆ

    May 5, 2026
    ಕರಾವಳಿ

    ಪಂಚರಾಜ್ಯ ಚುನಾವಣೆಯಲ್ಲಿ ಹಿಂದೂ ವಿರೋಧಿಗಳಿಗೆ ತಕ್ಕ ಪಾಠ : ಸತೀಶ್ ಕುಂಪಲ

    May 4, 2026
    Add A Comment
    Leave A Reply Cancel Reply

    Top Posts

    ನಾಲ್ಕನೇ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ : ಬ್ರಹ್ಮಕಲಶಾಭಿಷೇಕಕ್ಕೆ ಕ್ಷಣಗಣನೆ

    March 11, 2026

    ನಡೆದಾಡುವ, ಮಾತನಾಡುವ ದೇವರು ಅಮ್ಮ :ಅಮ್ಮ ಮಂಗಳೂರಿಗೆ ಆಗಮನ ಹಿನ್ನೆಲೆ ಚಪ್ಪರ ಮುಹೂರ್ತ ನೆರವೇರಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

    May 6, 2026

    “ಬಿರ್ದ್ ದ ಕಂಬುಲ” ತುಳು ಹಾಗೂ “ವೀರಕಂಬಳ” ಕನ್ನಡ ಸಿನಿಮಾ ಫೆ.27ರಂದು ರಾಜ್ಯಾದ್ಯಂತ ಬಿಡುಗಡೆ

    February 22, 2026
    About Us
    About Us

    Lorem Ipsum is simply dummy text of the printing and typesetting industry. Lorem Ipsum has been the industry's standard dummy text ever since the 1500s,

    Email : skmedianews@gmail.com
    Phone : +91 95914 89084

    Most Popular

    ನಾಲ್ಕನೇ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ : ಬ್ರಹ್ಮಕಲಶಾಭಿಷೇಕಕ್ಕೆ ಕ್ಷಣಗಣನೆ

    March 11, 2026

    ನಡೆದಾಡುವ, ಮಾತನಾಡುವ ದೇವರು ಅಮ್ಮ :ಅಮ್ಮ ಮಂಗಳೂರಿಗೆ ಆಗಮನ ಹಿನ್ನೆಲೆ ಚಪ್ಪರ ಮುಹೂರ್ತ ನೆರವೇರಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

    May 6, 2026

    “ಬಿರ್ದ್ ದ ಕಂಬುಲ” ತುಳು ಹಾಗೂ “ವೀರಕಂಬಳ” ಕನ್ನಡ ಸಿನಿಮಾ ಫೆ.27ರಂದು ರಾಜ್ಯಾದ್ಯಂತ ಬಿಡುಗಡೆ

    February 22, 2026
    Our Picks

    ನಡೆದಾಡುವ, ಮಾತನಾಡುವ ದೇವರು ಅಮ್ಮ :ಅಮ್ಮ ಮಂಗಳೂರಿಗೆ ಆಗಮನ ಹಿನ್ನೆಲೆ ಚಪ್ಪರ ಮುಹೂರ್ತ ನೆರವೇರಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

    May 6, 2026

    ಕೀರ್ತನ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ `ಗಜಾನನ ಕ್ರಿಕೆಟರ್ಸ್” ತುಳು ಚಿತ್ರ ಮೇ 22ರಂದು ತೆರೆಗೆ

    May 5, 2026

    ಪಂಚರಾಜ್ಯ ಚುನಾವಣೆಯಲ್ಲಿ ಹಿಂದೂ ವಿರೋಧಿಗಳಿಗೆ ತಕ್ಕ ಪಾಠ : ಸತೀಶ್ ಕುಂಪಲ

    May 4, 2026
    Facebook X (Twitter) Instagram Pinterest
    • ಮುಖಪುಟ
    • ಕರಾವಳಿ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.