Close Menu
SK Media NewsSK Media News
    What's Hot

    ವಾರ್ಡ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದ ಡಿಸಿಸಿ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ : ತಳಮಟ್ಟದ ಕಾರ್ಯಕರ್ತರಿಗೆ “ನಾನು ನಿಮ್ಮ ಜೊತೆ ಇದ್ದೇನೆ” ಎಂಬ ಭರವಸೆ 

    September 11, 2026

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸಂಭ್ರಮ : 108 ತೆಂಗಿನಕಾಯಿಗಳ ಮಹಾಗಣಪತಿ ಹೋಮ, ವೈಭವದ ಸಾಮೂಹಿಕ ರಂಗಪೂಜೆ

    September 11, 2026

    ಡಿ.ಫಾರ್ಮಾ, ಬಿ.ಫಾರ್ಮಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉದ್ಯೋಗಾವಕಾಶ : ಸೆ.15 ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    September 11, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಡಾ.ಎಂ.ಎನ್ ಆರ್ ಅವರ ಬ್ಯಾಂಕಿಂಗ್ ಕ್ಷೇತ್ರದ ಸಾಧನೆ ಶ್ಲಾಘನೀಯ : ಸ್ಪೀಕರ್ ಯು.ಟಿ.ಖಾದರ್
    ಕರಾವಳಿ

    ಡಾ.ಎಂ.ಎನ್ ಆರ್ ಅವರ ಬ್ಯಾಂಕಿಂಗ್ ಕ್ಷೇತ್ರದ ಸಾಧನೆ ಶ್ಲಾಘನೀಯ : ಸ್ಪೀಕರ್ ಯು.ಟಿ.ಖಾದರ್

    February 24, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಡಾ.ಎಂ.ಎನ್.ರಾಜೇಂದ್ರ ಕುಮಾರ್ 77ನೇ ಹುಟ್ಟುಹಬ್ಬ ಸಂಭ್ರಮ : 77 ಮಂದಿ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ

    ಮಂಗಳೂರು, ಫೆಬ್ರವರಿ. 24: “ಸಹಕಾರಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಶ್ಲಾಘನೀಯವಾದುದು” ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

    ಅವರು ಎಸ್ ಸಿ ಡಿ ಸಿ ಸಿ ಬ್ಯಾಂಕ್‌ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಇಂದು ಸಹಕಾರ ಕ್ಷೇತ್ರದ ಭೀಷ್ಮ , ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ ಹಾಗೂ 77 ಮಂದಿ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದರು.

    ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಈ ವೇಳೆಯಲ್ಲೂ ಅದನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿರುವುದು ಅವರ ಸಮಾಜದ ಮೇಲಿನ ಕಾಳಜಿ ಮತ್ತು ಪ್ರೀತಿಗೆ ಸಾಕ್ಷಿಯಾಗಿದೆ. ಇಂತಹ ರಾಜೇಂದ್ರ ಕುಮಾರ್ ಅವರು ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಿಗೆ ಸರಿಸಮವಾಗಿ ಬೆಳೆಯಬೇಕು” ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಶುಭ ಹಾರೈಸಿದರು.

    ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ಡಾ। ಎಂ. ವೀರಪ್ಪ ಮೊಯಿಲಿ ಅಭಿವಂದನಾ ಭಾಷಣವನ್ನು ಮಾಡಿ , “ಡಾ.ಎಂ.ಎನ್.ರಾಜೇಂದ್ರ ಕುಮಾ‌ರ್ ಅವರನ್ನು ಭಾರತ ಕಂಡ ಸಮರ್ಥ ಸಹಕಾರಿ ರತ್ನ ಎಂದರೆ ತಪ್ಪಾಗಲಾರದು. ಅವರು ಸಹಕಾರಿ ಕ್ಷೇತ್ರದ ಧ್ರುವ ನಕ್ಷತ್ರವಾಗಿದ್ದಾರೆ. ಕೃಷಿ ಬದುಕಿನ ರೈತರ ಸಾಮಾಜಿಕ ನ್ಯಾಯದ ರೂವಾರಿ ಅವರಾಗಿದ್ದಾರೆ. ನೂರು ವರ್ಷಗಳ ಕಾಲ ಅವರು ಹೀಗೆಯೇ ಬದುಕಲಿ. ನಮ್ಮ ಜಿಲ್ಲೆಯ ನಮ್ಮ ರಾಜ್ಯ ದೇಶದ ಹೆಸರನ್ನು ಇನ್ನಷ್ಟು ಉತ್ತುಂಗಕ್ಕೇರಿಸಲು ಅವರು ಅರ್ಹರಾಗಿದ್ದಾರೆ. ಬ್ಯಾಂಕ್ ಈ ಮಟ್ಟಕ್ಕೆ ಬೆಳೆದು ನಿಲ್ಲಲು ಅವರ ಪ್ರಾಮಾಣಿಕ ಪ್ರಯತ್ನ ಕಾರಣವಾಗಿದೆ. ಇಂದು ಹಿಮಾಲಯದ ಎತ್ತರಕ್ಕೆ ಬ್ಯಾಂಕ್ ಬೆಳೆದು ನಿಂತಿದೆ” ಎಂದರು.

    ಅಭಿವಂದನೆ ಸ್ವೀಕರಿಸಿ ಮಾತಾಡಿದ ಡಾ.ಎಂ.ಎನ್.ರಾಜೇಂದ್ರ ಕುಮಾ‌ರ್ ಅವರು, “33 ವರ್ಷಗಳ ಹಿಂದೆ ನಾನು ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟಾಗ ಪರಿಸ್ಥಿತಿ ತೀರಾ ಭಿನ್ನವಾಗಿತ್ತು. ಆದರೆ ಇಂದು ನಿಮ್ಮೆಲ್ಲರ ಸಹಕಾರದಿಂದ ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರ ಶ್ರೀಮಂತವಾಗಿದೆ. ಎಲ್ಲ ಸಹಕಾರಿ ಬ್ಯಾಂಕ್ ಗಳು ಇಂದು ಸ್ವಂತ ಕಟ್ಟಡ, ಗ್ರಾಹಕರಿಗೆ ಹವಾನಿಯಂತ್ರಿತ ವ್ಯವಸ್ಥೆ ಹೊಂದಿವೆ.

    ಅತೀ ಹೆಚ್ಚು ರೈತರಿಗೆ ಕೃಷಿ ಸಾಲ ಕೊಟ್ಟ ಜಿಲ್ಲೆ ನಮ್ಮದು. ನಮ್ಮ ಜಿಲ್ಲೆಯಲ್ಲಿ ಶೇ. 95ರಷ್ಟು ಸಂಘಗಳಲ್ಲಿ ಚುನಾವಣೆಯಿಲ್ಲದೆ ಅವಿರೋಧವಾಗಿ ಆಯ್ಕೆ ನಡೆಯುತ್ತಿದೆ. ಇದು ನನ್ನೊಬ್ಬನ ಸಾಧನೆಯಲ್ಲ ಎಲ್ಲ ಸಹಕಾರಿಗಳ ಒಗ್ಗಟ್ಟಿನಿಂದ ಇದು ಸಾಧ್ಯವಾಗಿದೆ. ನಾವು ನವೋದಯ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಅತೀ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುತ್ತೇವೆ. ಎಲ್ಲ ಸಾಲ ಮರುಪಾವತಿಯಾಗುತ್ತಿದೆ. ಇದರಿಂದಾಗಿ ರಾಜ್ಯದ ಹೆಚ್ಚಿನ ಸಕ್ಕರೆ ಕಾರ್ಖಾನೆಗಳಿಗೆ ನಾವು ಸಾಲ ಕೊಡಲು ಶಕ್ತರಾಗಿದ್ದೇವೆ. ಇಂದು ವೀರಪ್ಪ ಮೊಯಿಲಿಯವರು ನನಗೆ ಶುಭ ಹಾರೈಸಿದ್ದು ಅತೀವ ಖುಷಿ ತಂದಿದೆ. ಮುಂದೆಯೂ ನಿಮ್ಮವನಾಗಿ ಜನರ ಸೇವೆ ಮಾಡುತ್ತೇನೆ” ಎಂದರು.

    ಇದೇ ಸಂದರ್ಭದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬ ಸಂಭ್ರಮದ ಅಂಗವಾಗಿ ಅರ್ಹ 77 ಮಂದಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ನಡೆಯಿತು .

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ವೇದವ್ಯಾಸ ಕಾಮತ್ ವಹಿಸಿದರು ಈ ಸಂದರ್ಭದಲ್ಲಿ ನಬಾರ್ಡ್ ಡಿಜಿಎಂ ಕೆ.ಜಗದೀಶ್‌, ಸಹಕಾರ ಮಾರಾಟ ಮಂಡಲದ ಎಂ.ಡಿ.ಲಿಂಗರಾಜು, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಯಕರ ಶೆಟ್ಟಿ ಇಂದ್ರಾಳಿ, ಕಣಚೂರು ಮೋನು, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಮೇಘರಾಜ್ ಜೈನ್, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಎಂ. ವಾದಿರಾಜ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಗೊಟ್ಟು, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಮತ್ತಿತರರು ಉಪಸ್ಥಿತರಿದ್ದರು.

    ಅಭಿವಂದನಾ ಸಮಿತಿಯ ಅಧ್ಯಕ್ಷರಾದ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು ಅಥಿತಿಗಳನ್ನು ಸ್ವಾಗತಿಸಿದರು. ದೀಕ್ಷಿತಾ ಭಟ್ ದೇವರ ಪ್ರಾರ್ಥನೆ ಮಾಡಿದರು . ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

    __Sathish Kapikad

    Share. Facebook Twitter Pinterest LinkedIn Email WhatsApp
    Previous Article“ಬಿರ್ದ್ ದ ಕಂಬುಲ” ತುಳು ಹಾಗೂ “ವೀರಕಂಬಳ” ಕನ್ನಡ ಸಿನಿಮಾ ಫೆ.27ರಂದು ರಾಜ್ಯಾದ್ಯಂತ ಬಿಡುಗಡೆ
    Next Article ಮನನೊಂದು ಸಮಾಜ ಸೇವೆಗೆ ವಿಧಾಯ ಘೋಷಿಸಿದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಐಕಳ ಹರೀಶ್ ಶೆಟ್ಟಿಯವರ ಮನಸ್ತಾಪ ಸುಖಾಂತ್ಯ

    Related Posts

    ಕರಾವಳಿ

    ವಾರ್ಡ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದ ಡಿಸಿಸಿ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ : ತಳಮಟ್ಟದ ಕಾರ್ಯಕರ್ತರಿಗೆ “ನಾನು ನಿಮ್ಮ ಜೊತೆ ಇದ್ದೇನೆ” ಎಂಬ ಭರವಸೆ 

    September 11, 2026
    ಕರಾವಳಿ

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸಂಭ್ರಮ : 108 ತೆಂಗಿನಕಾಯಿಗಳ ಮಹಾಗಣಪತಿ ಹೋಮ, ವೈಭವದ ಸಾಮೂಹಿಕ ರಂಗಪೂಜೆ

    September 11, 2026
    ಕರಾವಳಿ

    ಡಿ.ಫಾರ್ಮಾ, ಬಿ.ಫಾರ್ಮಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉದ್ಯೋಗಾವಕಾಶ : ಸೆ.15 ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    September 11, 2026
    Add A Comment
    Leave A Reply Cancel Reply

    Top Posts

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026

    ಮಂಗಳೂರು,ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಜುಲೈ 14ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

    July 10, 2026

    ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರ ನೇಮಕ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ರಾಮಯ್ಯ ನೇಮಕ 

    September 10, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.