ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಮಾರ್ಚ್ 19 ರಿಂದ ಪ್ರಾರಂಭಗೊಳ್ಳಲಿರುವ ಯುಗಾದಿ ಮಹೋತ್ಸವದ ಆಮಂತ್ರಣವನ್ನು ಶ್ರೀ ವಿಘ್ನೇಶ್ ಪುರೋಹಿತರು ಫೆಬ್ರವರಿ 6 ರಂದು ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆಗೈದು ದೇವರಿಗೆ ಅರ್ಪಿಸಿದರು.

ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಕೆ ಉಮೇಶ್ ಆಚಾರ್ಯ ಪಾಂಡೇಶ್ವರ ಇವರು ಆಮಂತ್ರಣ ವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಮಾಜಿ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ, ಮಾಜಿ ಮೂರನೇ ಮೊಕ್ತೇಸರ ಎ. ಲೋಕೇಶ್ ಆಚಾರ್ಯ ಚಿಲಿಂಬಿ, ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಸಿದ್ದಕ್ಕಟ್ಟೆ ಮತ್ತು ಸದಸ್ಯರು, ಮಾಜಿ ಸೇವಾ ಸಮಿತಿಯ ಅಧ್ಯಕ್ಷರು, ಕ್ಷೇತ್ರದ ಮಾಜಿ ಆಡಳಿತ ಮಂಡಳಿ ಸದಸ್ಯರಾದ ಕೆ. ಕೆ.ವಿಠ್ಠಲ್, ಹರೀಶ್ ಬೋಳೂರು, ಪುರುಷೋತ್ತಮ ಪುತ್ತೂರು ಆಡಳಿತ ಮಂಡಳಿಯ ಮಾಜಿ ವಿಶೇಷ ಆಹ್ವಾನಿತರಾದ ಪಿ ರವೀಂದ್ರ ಮಂಗಳಾದೇವಿ ಮತ್ತು ಶಾಮ ಡಿ ಆಚಾರ್ಯ, ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ದಾರಕ ಸಭಾದ ಕಾರ್ಯದರ್ಶಿ ಸುಜೀರ್ ವಿನೋದ್ ಮತ್ತಿತರರು ಉಪಸ್ಥಿತರಿದ್ದರು.

Share.
Leave A Reply

Exit mobile version