
ಮಂಗಳೂರು/ ಬಜ್ಪೆ: ಎಂ ಆರ್ ಪಿ ಎಲ್ ಹೋರಾಟ ಸಮಿತಿಯ ಪ್ರಮುಖರ ಪೂರ್ವಭಾವಿ ಸಭೆ ಬಜ್ಪೆ ಶ್ರೀ ನಾರಾಯಣ ಗುರು ಭವನದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷ ಸತ್ಯಜಿತ್ ಮಾತನಾಡಿ, ಮುಂದಿನ ಹೋರಾಟ ಜಿಲ್ಲಾ ಆಡಳಿತ ಮತ್ತು ಜನ ಪ್ರತಿನಿಧಿಗಳ ಮೂಲಕ ಮನವರಿಕೆ ಮಾಡಲು ಮುಂದಿನ ರೂಪುರೇಷೆ ಮಾಡಲಾಗುವು ಎಂದು ತಿಳಿಸಿದರು.
ಪ್ರತಿಭಾ ಕುಳಾಯಿ ಮಾತನಾಡಿ ಎಂ ಆರ್ ಪಿ ಎಲ್ ಹಿಂದೆ ನೀಡಿದ ಭರವಸೆಗಳನ್ನು ಪಾಲಿಸದೇ ಜನರಿಗೆ ಮಾಡಿದ ಅನ್ಯಾಯ ನೆನಪಿಸಿದರು. ಮುಂದಿನ ಹೋರಾಟದಲ್ಲಿ ತಾನು ಸಕ್ರಿಯವಾಗಿ ಭಾಗವಹಿಸುವೆ ಎಂದು ತಿಳಿಸಿದರು.
ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ ಕೊಳಂಬೆ, ಪ್ರಮುಖರಾದ ಪ್ರಸನ್ನ ರವಿ,ಹಾಗೂ ಹೋರಾಟ ಸಮಿತಿಯ ಮತ್ತು ಎಂ.ಎಸ್.ಇ.ಝಡ್ ಗುತ್ತಿಗೆ ಕಾರ್ಮಿಕರ , ಭೂ ನಿರ್ವಸಿತರ ಹಾಗೂ ಸಂತ್ರಸ್ತರ ಹೋರಾಟ ಸಮಿತಿ, ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.
Sathish Kapikad