
ಮಂಗಳೂರು : ಕ್ರೀಡಾ ಅಂಕಣಕಾರ ಬರವಣಿಗೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಹಾಗೂ ಇತ್ತೀಚೆಗೆ ಬಸವಶ್ರೀ ಮತ್ತು ‘ಸಾಧಕ ರತ್ನ’ ಪ್ರಶಸ್ತಿಗಳಿಗೆ ಭಾಜನರಾಗಿರುವ ಎಸ್.ಜಗದೀಶ್ಚಂದ್ರ ಅಂಚನ್ ಅವರನ್ನು ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಶನಿವಾರ ನಡೆದ ಸಂಕ್ರಮಣ ಪೂಜೆಯ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ದೈವಸ್ಥಾನದ ಗುರಿಕಾರ ಎಸ್. ರಾಘವೇಂದ್ರ ಅವರು, ದೈವಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿರುವ ಜಗದೀಶ್ಚಂದ್ರ ಅಂಚನ್ ಅವರು ಕ್ರೀಡಾ ಅಂಕಣಕಾರರಾಗಿ ಮಾಡಿರುವ ಸಾಧನೆ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ, ಕ್ರೀಡಾ ಬರವಣಿಗೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿರುವ ಅಂಚನ್ ಅವರ ಪರಿಶ್ರಮ, ಸೇವೆ ಮತ್ತು ಕೊಡುಗೆಗಳು ಪ್ರಶಂಸನೀಯವಾಗಿವೆ. ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜಕ್ಕೆ ಪ್ರೇರಣೆ ನೀಡುವುದರ ಜತೆಗೆ, ಇತರರೂ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಉತ್ತೇಜನ ನೀಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಅಪ್ಪಿ ಎಸ್. ದೈವಸ್ಥಾನದ ಗೌರವ ಸಲಹೆಗಾರರಾದ ಕೆ.ಪಾಂಡುರಂಗ , ಎಸ್.ಬಾಬು , ಪ್ರಧಾನ ಅರ್ಚಕ ಎಸ್. ಗಣೇಶ ಪಾತ್ರಿ, ಕೋಶಾಧಿಕಾರಿ ಎಸ್. ನವೀನ್ , ಪದಾಧಿಕಾರಿಗಳಾದ ಎಸ್. ಮೋಹನ್, ಬಿ. ವಿಶ್ವನಾಥ್, ಎಸ್. ಜನಾರ್ಧನ, ಬಿ.ಗಣೇಶ್, ಎಸ್. ಸುರೇಶ್, ಎಸ್.ಪ್ರವೀಣ್. ರಂಜಿತ್, ಉಮಾಪ್ರಸಾದ್ ಎಂ., ಸುನಿಲ್ ರಾಜ್ ಪದಕಣ್ಣಾಯ, ಕಿರಣ್ ರಾಜ್ ಪದಕಣ್ಣಾಯ, ಸುದೇಶ್ ಕುಮಾರ್, ತಿಲಕ್ ರಾಜ್, ರಾಹುಲ್ ಎಸ್., ಸಂತೋಷಕುಮಾರಿ, ಕಿಶೋರ್, ರಕ್ಷಿತ್, ಪ್ರಶಾಂತ್ ಪಿ.ಎಸ್ ,ಸೂರಜ್ ಸಾಗರ್, ರಕ್ಷಿತ್ ಬಿ.ಎಸ್, ನಳಿನಿ ಗೋಪಾಲ್, ಶ್ರೀಮತಿ ಇಂದಿರಾ ಮೋಹನ್ದಾಸ್, ಹಾಗೂ ಪ್ರೋ. ಸುಚಿತ್ರಾ ಉಮಾಪ್ರಸಾದ್ ಉಪಸ್ಥಿತರಿದ್ದರು.
_Sathish Kapikad


