
ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಗೆ ಐದು ಸಾವಿರ ಎಕರೆ ಜಮೀನು ಹಂಚಿಕೆ ಮಾಡುವಂತೆ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕ ಒತ್ತಾಯಿಸಿದೆ.
ನಗರದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ರಾಜ್ಯ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರು ಅವರು, ದ. ಕ. ಜಿಲ್ಲೆಯಲ್ಲಿ ಡಿ. ಸಿ. ಮನ್ನಾ ಭೂಮಿಯನ್ನು ರಾಜ್ಯ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಭೂರಹಿತ ದಲಿತರಿಗೆ ಡಿ. ಸಿ. ಮನ್ನಾ ಭೂಮಿ ನೀಡುವ ಭರವಸೆಯ ಘೋಷಣೆ ಮಾಡಿತ್ತು. ಆದರೆ ಚುನಾವಣೆ ಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಭೂರಹಿತ ದಲಿತರಿಗೆ ಡಿ. ಸಿ. ಮನ್ನಾ ಭೂಮಿಯನ್ನು ಹಂಚಲು ಘೋಷಣೆ ಮಾಡಿ 3 ವರ್ಷ ಕಳೆದರೂ, ಕಾಂಗ್ರೆಸ್ ಸರಕಾರವು ಇನ್ನೂ ಭೂರಹಿತ ದಲಿತರಿಗೆ ಡಿ. ಸಿ. ಮನ್ನಾ ಭೂಮಿಯನ್ನು ಹಂಚಿಕೆ ಮಾಡುವ ಇಚ್ಚಾಶಕ್ತಿ ಸರಕಾರಕ್ಕೆ ಇಲ್ಲವಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಮಂಗಳೂರಿನಲ್ಲಿ ಸಂಪುಟ ಸಭೆಯ ನಿರ್ಣಯದಲ್ಲಿ ದಲಿತರಿಗೆ ಡಿ. ಸಿ. ಮನ್ನಾ ಭೂಮಿ ದೊರಕುವ ಆಶಾಭಾವನೆ ಇತ್ತು. ಆದರೆ ಡಿ. ಸಿ. ಮನ್ನಾ ಭೂಮಿ ನೀಡದ ಕಾಂಗ್ರೆಸ್ ಸರಕಾರದ ಮೇಲೆ ದಲಿತರಿಗೆ ತೀವ್ರವಾದ ಅಸಮಾಧಾನ ಉಂಟಾಗಿ ಬೇಸತ್ತಿದ್ದಾರೆ ಎಂದು ಅವರು ಹೇಳಿದರು.
ಬಿಎಸ್ಪಿ ಜಿಲ್ಲಾ ಅಧ್ಯಕ್ಷರಾದ ಸೋಮಪ್ಪ ಅಲಂಗಾರು ಅವರು ಮಾತನಾಡಿ, ದ. ಕ. ಜಿಲ್ಲೆಯಲ್ಲಿ ಡಿ. ಸಿ. ಮನ್ನಾ ಭೂಮಿ ಸುಮಾರು 8552 ಎಕರೆ ಭೂಮಿ ಇದೆ. ಸುಮಾರು 5871 ಎಕರೆ ಡಿ. ಸಿ. ಮನ್ನಾ ಭೂಮಿ ಹಂಚಿಕೆ ಮಾಡಲಾಗಿದೆ. ಸುಮಾರು 806 ಎಕರೆ ಗಿಂತಲೂ ಹೆಚ್ಚು ಡಿ. ಸಿ. ಮನ್ನಾ ಭೂಮಿಯನ್ನು ಸಮಾಜದ ಇತರ ಬಲಡ್ಯ ವ್ಯಕಿಗಳು ಅತಿಕ್ರಮಾಣವಾಗಿ ಒತ್ತುವರಿ ಮಾಡಲಾಗಿದೆ. ಪ್ರಸ್ತುತ ಸುಮಾರು 229 ಎಕರೆ ಡಿ. ಸಿ. ಮನ್ನಾ ಭೂಮಿ ಖಾಲಿ ಇದೆ ಎಂದು ದ. ಕ. ಜಿಲ್ಲಾ ಆಡಳಿತವು ಹೇಳುತ್ತಿದೆ ಎಂದು ಮಾಹಿತಿ ನೀಡಿದರು.
ಡಿ. ಸಿ. ಮನ್ನಾ ಭೂಮಿ ಯನ್ನು ಭೂರಹಿತ ದಲಿತರಿಗೆ 03 ಹಂತಗಳಲ್ಲಿ ಸರಕಾರವು ಹಂಚುವ ಕ್ರಮಕೈಗೊಳ್ಳಲು ಬಿ.ಎಸ್. ಪಿ. ದ. ಕ. ಜಿಲ್ಲಾ. ಘಟಕವು ಆಗ್ರಹಿಸುತ್ತದೆ. 03 ಹಂತಗಳಲ್ಲಿ ಹಂಚುವ ಪ್ರಸ್ತಾ ವನೆ ಈ ಕೆಳಗಿನಂತಿವೆ.
1ನೇ ಹಂತ : ದ. ಕ. ಜಿಲ್ಲೆಯಲ್ಲಿ ಲಭ್ಯವಿರುವ ಸುಮಾರು 229 ಎಕರೆ ಭೂಮಿಯನ್ನು ಸರಕಾರವು ಕೂಡಲೇ ಪಾರದರ್ಶಕತೆ ರೀತಿಯಲ್ಲಿ ಭೂರಹಿತ ದಲಿತರಿಗೆ ಹಂಚಿಕೆ ಮಾಡುವ ಕ್ರಮವನ್ನು ಪ್ರಥಮ ಹಂತದಲ್ಲಿ ಕೈಗೊಳ್ಳಬೇಕು.
2ನೇ ಹಂತ : ಸರಕಾರದ ಇಲಾಖೆಗಳಾದ ಗೇರು ಅಭಿವೃದ್ಧಿ ನಿಗಮಗಳು, ಅರಣ್ಯ ಇಲಾಖೆಗಳು ಸುಮಾರು 608 ಎಕರೆ ಡಿ. ಸಿ. ಮನ್ನಾ ಭೂಮಿಯನ್ನು
ಒತ್ತುವರಿ ಮಾಡಿ ಅವುಗಳ ಸ್ವಾಧೀನದಲ್ಲಿದೆ. ಈ ಭೂಮಿಯನ್ನು ಸರಕಾರವು ಸರ್ವೆ ಮಾಡಿಸಬೇಕು. ತದನಂತರ ಆ ಭೂಮಿ ಯನ್ನು ಸರಕಾರವು ಸ್ವಾಧೀನ ಪಡಿಸಿ ಭೂರಹಿತ ದಲಿತರಿಗೆ ಹಂಚಿಕೆ ಮಾಡುವ ಕ್ರಮವನ್ನು ದ್ವಿತೀಯ ಹಂತದಲ್ಲಿ ಕೈಗೊಳ್ಳಬೇಕು.
3ನೇ ಹಂತ: ಇತರ ಬಲಡ್ಯ ವ್ಯಕ್ತಿಗಳು, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಅತಿಕ್ರಮಣವಾಗಿ ಒತ್ತುವರಿ ಮಾಡಿದ ಡಿ. ಸಿ. ಮನ್ನಾ ಭೂಮಿಯನ್ನು ಸರಕಾರ ಕೂಡಲೇ ಸರ್ವೆ ಮಾಡಿಸ ಬೇಕು. ತದನಂತರ ಆ ಭೂಮಿಯನ್ನು ಸರಕಾರವು ಸ್ವಾಧೀನಪಡಿಸಿ ಭೂರಹಿತ ದಲಿತರಿಗೆ ಹಂಚಿಕೆ ಮಾಡಲು ಕ್ರಮವನ್ನು ತೃತೀಯ ಹಂತದಲ್ಲಿ ಕೈಗೊಳ್ಳಬೇಕು.
ಡಿ. ಸಿ. ಮನ್ನಾ ಭೂಮಿಯನ್ನು ಮಂಜೂರಾತಿ ಮಾಡಲು ಕಾನೂನಿನಲ್ಲಿ ನಿಬಂಧನೆಗಳಿದ್ದಲ್ಲಿ ಡಿ. ಸಿ. ಮನ್ನಾ ಭೂಮಿಯ ಮಂಜೂರಾತಿಗೆ ವಿಶೇಷ ನಿಯಮಗಳನ್ನು ಸರಕಾರವು ರೂಪಿಸ ಬೇಕೆಂದು ಬಿ.ಎಸ್.ಪಿ ಯು ಆಗ್ರಹಿಸುತ್ತದೆ.
ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟ್ ಕಾಂಪ್ಲೆಕ್ಸ್ ನ ಮಳಿಗೆಯಲ್ಲಿ ಪ. ಜಾತಿ ಮತ್ತು ಪ. ಪಂಗಡಗಳಿಗೆ ಶೇ. 24.10
ಮೀಸಲಾತಿಯಲ್ಲಿ ಮಳಿಗೆಗಳನ್ನು ಹಂಚಿಕೆ ಮಾಡಬೇಕಾಗಿ ಮ.ನ.ಪಾಲಿಕೆಯ ಆಡಳಿತಾಧಿಕಾರಿಯವರಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಕೋರಲಾಗಿದೆ.
ನಗರದ ಅತ್ತವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಸ್ಮಾರಕದ ಚಾವಣಿಯ ಗೋಪುರವು ಮಳೆ ನೀರಿಗೆ ಹಾನಿ ಆಗಿರುತ್ತದೆ. ಇದನ್ನು ಕೂಡಲೇ ದುರಸ್ತಿ ಗೊಳಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
- _Sathish Kapikad


