ಮಂಗಳೂರು: ಬಹುಜನ ಸಮಾಜ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪುನರ್ ರಚನೆ ಮಾಡಲಾಗಿದ್ದು,ಹೊಸ ಅಧ್ಯಕ್ಷರಾಗಿ ಸೋಮಪ್ಪ ಅಲಂಗಾರು ಅವರನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆ ಸಮಿತಿ ಸಭೆಯನ್ನು ಬಿಎಸ್ ಪಿ ರಾಜ್ಯ ಸಂಯೋಜಕರಾದ ಗಂಗಾಧರ್ ಬಹುಜನ್ ರವರ ಅಧ್ಯಕ್ಷೆತೆಯಲ್ಲಿ ಮೂಡುಬಿದ್ರಿ ಕೋ-ಆಪರೇಟಿ ವ್ ಬ್ಯಾಂಕ್ ನ ಸಭಾ ಭವನದಲ್ಲಿ ನಡೆಯಿತು.

ಬಿ.ಎಸ್. ಪಿ. ದ. ಕ. ಜಿಲ್ಲಾ ಸಮಿತಿಯ ಸಭೆಯಲ್ಲಿ ಈ ಕೆಳಕಂಡಂತೆ ಸರ್ವನುಮತದಿಂದ ಬಿ.ಎಸ್. ಪಿ. ದ. ಕ. ಜಿಲ್ಲಾ ಸಮಿತಿಯ ಆಯ್ಕೆ ಆದ ಪದಾಧಿಕಾರಿ ಗಳನ್ನು ಬಿಎಸ್ ಪಿ- ಕರ್ನಾಟಕ, ರಾಜ್ಯ ಅಧ್ಯಕ್ಷರಾದ ಎಂ. ಕೃಷ್ಣಮೂರ್ತಿ ರವರ ಅನುಮತಿ ಮೇರೆಗೆ ನೇಮಕ ಮಾಡಲಾಗಿದೆ.

ಸೋಮಪ್ಪ ಅಲಂಗಾರ್ – ಜಿಲ್ಲಾ ಅಧ್ಯಕ್ಷರು,
ಶಿವಪ್ಪ ಗಾರ್ಡಡಿ – ಉಪಾಧ್ಯಕ್ಷರು,
ಪಿ. ಎಸ್. ಶ್ರೀನಿವಾಸ್ – ಜಿಲ್ಲಾ ಪ್ರಧಾನ ಕಾರ್ಯದರ್ಶಿ,
ನಾರಾಯಣ ಬೋಧ್ – ಜಿಲ್ಲಾ ಕಾರ್ಯದರ್ಶಿ,
ಶ್ರೀಮತಿ ಶಶಿಕಲಾ ಎಂ. – ಜಿಲ್ಲಾ ಖಜಾಂಚಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ :
ಗೋಪಾಲ ಮುತ್ತೂರು ಮತ್ತು ಶಿವರಾಮ್ ಕೆ. ಇವರುಗಳನ್ನು ನೇಮಕ ಮಾಡಲಾಗಿದೆ.

_Sathish Kapikad

Share.
Leave A Reply

Exit mobile version