
ಮಂಗಳೂರು: ಪುರಾತನ ದೇವಾಲಯಗಳಲ್ಲಿ ಒಂದಾದ ಕುದ್ರೋಳಿ ದಳವಾಯಿ ದೋಟ ಶ್ರೀ ಭದ್ರಕಾಳಿ ಧೂಮಾವತಿ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ವಿವಿಧ ಪೂಜಾಧಿ ಸೇವೆಗಳು ಸಲ್ಲಿಕೆಯಾಗುತ್ತಿದೆ. ಪ್ರತಿನಿತ್ಯ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಿದ್ದಾರೆ.
ಮಂಗಳವಾರದoದು ಕ್ಷೇತ್ರದಲ್ಲಿ ದುರ್ಗಾ ನಮಸ್ಕಾರ ಪೂಜೆ ವೈಭವಯುತವಾಗಿ ನಡೆಯಿತು.

ಕ್ಷೇತ್ರದ ಕೋಶಾಧ್ಯಕ್ಷ ಸೂರಜ್ ಕುಮಾರ್ ಕಲ್ಯ, ಗೌರವಾಧ್ಯಕ್ಷ ಕೆ.ನರೇಂದ್ರಕುಮಾರ್, ಕಾರ್ಯಾಧ್ಯಕ್ಷ ಕೆ.ಪ್ರವೀಣ್ ಕುಮಾರ್, ಉಪಾಧ್ಯಕ್ಷರಾದ ಮನೀಷ್ ಸುವರ್ಣ, ಶರ್ಮಿಳಾ ವಿದ್ಯಾಸಾಗರ್, ಮೋನಿಕ, ಅಪರ್ಣ ಸುವರ್ಣ, ಕೋಶಾಧಿಕಾರಿಗಳಾದ ಮಧು, ರಾಧಿಕಾ, ದೀಪಕ್, ಜತೆ ಕಾರ್ಯದರ್ಶಿಗಳಾದ ಜಯೇಶ್ ಪಿ.ಕುಮಾರ್, ರೋಶನ್, ಅಭಿವೃದ್ಧಿ ಸಮಿತಿಯ ಮೇಘನಾ, ಸೋಹನ್ ಕುಮಾರ್, ಸೋನಾ, ರೋಹಿತ್, ಮನೋಜ್ ಕುಮಾರ್ ಕಲ್ಯ ಉಪಸ್ಥಿತರಿದ್ದರು.
ದುರ್ಗಾ ನಮಸ್ಕಾರ ಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು.
_Sathish Kapikad


