ಮಂಗಳೂರಿನಲ್ಲಿ ಓರ್ವ ವಿಶಿಷ್ಠ ಕಲಾವಿದನ ಯಶೋಗಾಥೆ

ವಿಶೇಷ ಸಂದರ್ಶನ : ಸತೀಶ್ ಕಾಪಿಕಾಡ್
ಮಂಗಳೂರು, ಅಕ್ಟೋಬರ್ 10 : ಸಮುದ್ರದ ಕಿನಾರೆಯ ಬಳಿ ಮರಳಿನಲ್ಲಿ ವಿಶೇಷ ಶೈಲಿಯ ಹಾಗೂ ಅದ್ಭುತವಾದ ಶಿಲ್ಪ ಕಲಾಕೃತಿಗಳನ್ನು ರಚಿಸುತ್ತಿದ್ದ ಓರ್ವ ಕಲಾವಿದ ಕ್ರಮೇಣ ನಾಟಕ ಹಾಗೂ ಸಿನಿಮಾಗಳಿಗೆ ಕಲಾ ನಿರ್ದೇಶಕನಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಮೆರವಣಿಗೆಯ ಸ್ತಬ್ಧ ಚಿತ್ರ ( ಟ್ಯಾಬ್ಲೋ) ಗಳಿಗೆ ಹಲವಾರು ಶೈಲಿಯ ಕಲಾಕೃತಿಗಳನ್ನು ನಿರ್ಮಿಸುವ ಮೂಲಕ ಕಳೆದ 15 ವರ್ಷಗಳಿಂದ ಮಂಗಳೂರಿನಲ್ಲಿ ಓರ್ವ ಅದ್ಭುತ ಪ್ರತಿಭೆಯಾಗಿ ರೂಪುಗೊಳ್ಳುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಪ್ರಯಾಣವೇ ಬಂಟ್ವಾಳ ಮೂಲದ ಸದ್ಯಕ್ಕೆ ಮಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಹರೀಶ್ ಆಚಾರ್ಯ ಯಶೋಗಾಥೆ.

ಹರೀಶ್ ಆಚಾರ್ಯ ಅವರ ಸಾಧನೆಗಳು :
ಹರೀಶ್ ಆಚಾರ್ಯ ಇವರು ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಡಿಜಿಟಲ್ (3D) ಕಲಾಕೃತಿಯನ್ನು ರಚಿಸುವ ಮೂಲಕ ಹೊಸ ರೀತಿಯ ಪಬ್ಲಿಕ್ ಫಲಕಕ್ಕೆ ನಾಂದಿ ಹಾಡಿದರು. ಕಳೆದ ವರ್ಷ ಉರ್ವಾ ಸರ್ಕಲ್ ನಲ್ಲಿ ಹರೀಶ್ ಆಚಾರ್ಯ ಅವರು ಪ್ರಥಮ ಬಾರಿಗೆ ನಿರ್ಮಿಸಿದ ಬೃಹತ್ ಗಾತ್ರದ ಶ್ರೀ ರಾಮ ದೇವರ 3D ಕಲಾಕೃತಿಯನ್ನು ಸ್ಥಾಪಿಸಲಾಯಿತು. ಅದೇ ರೀತಿ ಕೊಟ್ಟಾರದಲ್ಲಿ ಬೃಹತ್ ಶಾರಾದ ಮಾತೆಯ 3D ಕಲಾಕೃತಿಯನ್ನು ಸ್ಥಾಪಿಸಲಾಯಿತು.
ಮಾತ್ರವಲ್ಲದೇ ಹರೀಶ್ ಆಚಾರ್ಯ.ಅವರು, 2026 ಅಕ್ಟೋಬರ್ 9ರಂದು ತುಳುನಾಡು ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಕೂಡ ಲಕ್ಷಾಂತರ ಭಕ್ತರನ್ನು ಹೊಂದಿರುವ ಕಟೀಲು ಶ್ರೀ ಕ್ಷೇತ್ರದ ತಾಯಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಅತೀ ಎತ್ತರದ 3D ಕಲಾಕೃತಿಯನ್ನು ನಿರ್ಮಿಸುವ ಮೂಲಕ ತಮ್ಮ ಕಾರ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ.


ಈ ಬಾರಿಯ ಅಷ್ಟಮಿ ಹಾಗೂ ಗಣೇಶ ಚತುರ್ಥಿ ಸಂದರ್ಭ ಹುಲಿಯನ್ನು ಹೋಲುವ ರೀತಿಯ ಬೃಹದ್ ಆಕಾರದ ಹುಲಿಯ ಕಲಾಕೃತಿಯನ್ನು ನಿರ್ಮಿಸಿ ಚಿತ್ರೀಕರಣ ನಡೆಯುತ್ತಿದ್ದ ಸಿನಿಮಾ ತಂಡಕ್ಕೆ ನೀಡಿದ್ದಾರೆ. ಇದೀಗ ದಸಾರ ಹಬ್ಬ ಆರಂಭವಾಗುತ್ತಿದ್ದು, ಈಗಾಗಲೇ ವಿನೂತನ ಶೈಲಿಯ ಹಲವಾರು ಶಾರಾದೆ ಮಾತೆಯ ಕಲಾಕೃತಿಗಳನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ.

ಮಂಗಳೂರಿನ ತಣೀರುಬಾವಿಯಲ್ಲಿ ನಡೆದ “ಕಾಂತರ” ಸಿನಿಮಾದ ನೂರನೇ ಸಂಭ್ರಮಕ್ಕೆ ವಿಶಾಲವಾದ (ಸುಮಾರು 15ರಿಂದ 20 ಅಡಿ) ವಿಶೇಷ ಪಂಜುರ್ಲಿ ಮುಖವಾಡದ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಒಂದು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೃಹತ್ ಗಾತ್ರದ ರಥ ನಿರ್ಮಾಣ ಮಾಡಿ ಕೊಟ್ಟಿದ್ದಾರೆ.

ಈಗಾಗಲೇ ಬರ್ಕೆ ಫ್ರೆಂಡ್ಸ್, ಬಿರುವೆರ್ ಕುಡ್ಲ, ಬಳ್ಳಾಲ್ ಭಾಗ್ ಫ್ರೆಂಡ್ಸ್ ಸೇರಿದಂತೆ ಹಲಾವಾರು ತಂಡಗಳಿಗೆ ಹಲವು ರಿತೀಯ ಕಲಾಕೃತಿಗಳನ್ನು ನಿರ್ಮಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದ,ಕ ಜಿಲ್ಲೆ ಮಾತ್ರವಲ್ಲದೇ ಕುಂದಾಪುರ, ಬೈಂದೂರು ಮುಂತಾದೆಡೆಗಳಿಗೆ ಕೂಡ ಕಲಾಕೃತಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ.
ಈಗಾಗಲೇ ಅದ್ಭುತ ಪ್ರದರ್ಶನ ಕಾಣುತ್ತಿರುವ ಶ್ರೀ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ “ಶಿವದೂತ ಗುಳಿಗ” ನಾಟಕ ಸೇರಿದಂತೆ ತುಳು, ಕನ್ನಡ, ತಮಿಳು, ಹಿಂದಿ ಸಿನಿಮಾಗಳಿಗೆ ಕೂಡ ಹರೀಶ್ ಅಚಾರ್ಯ ಅವರು ಕಲಾ ನಿರ್ದೇಶನ ಮಾಡಿದ್ದಾರೆ.



ಅಷ್ಟಮಿ, ಗಣೇಶ ಹಬ್ಬ, ನವರಾತ್ರಿ ಮಾತ್ರವಲ್ಲದೆ ಶಾಲಾ ಮಕ್ಕಳ ಫ್ಯಾನ್ಸಿ ಡ್ರೆಸ್ ಇತ್ಯಾದಿಗಳಿಗೆ ವಿಶೇಷ ಶೈಲಿಯ ಉಡುಪು ಮತ್ತು ವಿವಿಧ ಶೈಲಿಯ ಆಕೃತಿಗಳನ್ನು ನಿರ್ಮಿಸುವುದರಲ್ಲಿ ಕುಡ ನಿಸ್ಸಿಮರು ಇವರು. ಜೊತೆಗೆ ಹುಲಿ ವೇಷದ ಟ್ಯಾಬ್ಲೋ ವೆ ಇರಲಿ, ಸಿನಿಮಾ ಪ್ರಮೋಷನ್ ಇರಲಿ.. ಮಕ್ಕಳ ಛದ್ಮವೇಷ ಸ್ಫರ್ಧೆಇರಲಿ ನೂರಾರು ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಭಂದ ಪಟ್ಟ ಕಲಾಕೃತಿಗಳನ್ನು ನಿರ್ಮಿಸುವಲ್ಲಿ ಹೆಸರುವಾಸಿಯಾಗಿದ್ದಾರೆ ವಿಶಿಷ್ಟ ಹಾಗೂ ಅದ್ಭುತ ಕಲಾವಿದ ಈ ಹರೀಶ್ ಆಚಾರ್ಯ ಅವರು.
ಭರತ್ ಪೂಜಾರಿ, ಕೃಷ್ಣ ಖಾರ್ವಿ, ಪ್ರಸಾದ್ ಮೂಲ್ಯ ಇವರು ಈ ಎಲ್ಲಾ ಕಲಾಕೃತಿಗಳನ್ನು ರಚಿಸುವಲ್ಲಿ ಹರೀಶ್ ಅಚಾರ್ಯ ಅವರಿಗೆ ಸಹಕರಿಸುವ ಸಹ ಕಲಾವಿದರು.

ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್



