Close Menu
SK Media NewsSK Media News
    What's Hot

    ಪಿಲಿಕುಳದ ಕೆರೆಯಲ್ಲಿ ಬೆಳಸಿದ ಬಲಿಷ್ಠ ಮೀನುಗಳ ಪ್ರದರ್ಶನ ಹಾಗೂ ಮಾರಾಟ: ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ಯಶಸ್ವಿ 

    October 26, 2026

    ಮಂಗಳ ಕ್ರೀಡಾಂಗಣಕ್ಕೆ 20 ಕೋಟಿ ಅನುದಾನ : ಅಭಿವೃದ್ಧಿ ಯೋಜನೆ ಅನುಷ್ಠಾನದ ಬಗ್ಗೆ ಮೂಡಾ ಅಧ್ಯಕ್ಷರ ನೇತೃತ್ವದಲ್ಲಿ ಸಭೆ 

    October 25, 2026

    ಪೋಲಿಯೋ ಮುಕ್ತ ಸಮಾಜ ನಿರ್ಮಾಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅನನ್ಯ: ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್

    October 25, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ಎನ್‌ಐಟಿಕೆ ಸುರತ್ಕಲ್‌ನಲ್ಲಿ 3 ಕೋಟಿ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹ ವ್ಯವಸ್ಥೆ ಕಾರ್ಯಾರಂಭ : ಸಂಗ್ರಹಿತ ಮಳೆನೀರು ಶುದ್ಧೀಕರಣ ಘಟಕಕ್ಕೆ, ಅಲ್ಲಿಂದ ಕ್ಯಾಂಪಸ್ ಜಲಜಾಲಕ್ಕೆ ಸಂಪರ್ಕ
    ಕರಾವಳಿ

    ಎನ್‌ಐಟಿಕೆ ಸುರತ್ಕಲ್‌ನಲ್ಲಿ 3 ಕೋಟಿ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹ ವ್ಯವಸ್ಥೆ ಕಾರ್ಯಾರಂಭ : ಸಂಗ್ರಹಿತ ಮಳೆನೀರು ಶುದ್ಧೀಕರಣ ಘಟಕಕ್ಕೆ, ಅಲ್ಲಿಂದ ಕ್ಯಾಂಪಸ್ ಜಲಜಾಲಕ್ಕೆ ಸಂಪರ್ಕ

    October 8, 20262 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ತೇಲುವ ಪಂಪಿಂಗ್ ಕೇಂದ್ರ ಮತ್ತು ಪೈಪ್‌ಲೈನ್ ಮೂಲಕ ಸಂಗ್ರಹಿತ ಮಳೆನೀರು ಶುದ್ಧೀಕರಣ ಘಟಕಕ್ಕೆ, ಅಲ್ಲಿಂದ ಕ್ಯಾಂಪಸ್ ಜಲಜಾಲಕ್ಕೆ ಸಂಪರ್ಕ

    ಸುರತ್ಕಲ್, ಅಕ್ಟೋಬರ್ 8, 2026: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ), ಸುರತ್ಕಲ್‌ನಲ್ಲಿ 3 ಕೋಟಿ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹ ಜಲಾಶಯವನ್ನು 1 ಎಂಎಲ್‌ಡಿ (ಪ್ರತಿದಿನ 10 ಲಕ್ಷ ಲೀಟರ್ ಸಾಮರ್ಥ್ಯ) ನೀರು ಶುದ್ಧೀಕರಣ ಘಟಕದೊಂದಿಗೆ 850 ಮೀಟರ್ ಉದ್ದದ ಪೈಪ್‌ಲೈನ್ ಮೂಲಕ ಸಂಪರ್ಕಿಸುವ ಮೂಲಕ “ಎನ್‌ಐಟಿಕೆರೆ” ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಎನ್‌ಐಟಿಕೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎಂ.ಎಂ. ಮುರುಗಪ್ಪನ್ ಹಾಗೂ ಎನ್‌ಐಟಿಕೆ ನಿರ್ದೇಶಕರಾದ ಪ್ರೊ. ಬಿ. ರವಿ ಅವರು ಈ ಸೌಲಭ್ಯವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಏರ್ ಮಾರ್ಷಲ್ ಬಿ.ಯು. ಚೆಂಗಪ್ಪ, ಎನ್‌ಐಟಿಕೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀ ನಿರಂಜನ್ ಮಹಾಬಳಪ್ಪ, ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಕ್ಯಾಂಪಸ್‌ನ ಈಶಾನ್ಯ ಭಾಗದಲ್ಲಿರುವ ತಗ್ಗು ಪ್ರದೇಶದಲ್ಲಿ 110 ಮೀಟರ್ ಉದ್ದ ಮತ್ತು 50 ಮೀಟರ್ ಅಗಲದಲ್ಲಿ ಸುಮಾರು 5 ಮೀಟರ್ ಆಳದವರೆಗೆ ಅಗೆದು 2025ರಲ್ಲಿ ಮಳೆನೀರು ಸಂಗ್ರಹ ಜಲಾಶಯವನ್ನು ನಿರ್ಮಿಸಲಾಯಿತು.

    ಈ ಕಾಮಗಾರಿಗೆ 1974, 1983 ಮತ್ತು 1999ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಂಘವು ಬೆಂಬಲ ನೀಡಿದೆ. 2026ರ ಫೆಬ್ರವರಿಯಲ್ಲಿ ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ನ ಸಹಕಾರದಿಂದ ಪ್ರತಿದಿನ 10 ಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಿ ಕಾರ್ಯಾರಂಭ ಮಾಡಲಾಯಿತು. ಜಲಾಶಯದಿಂದ ಶುದ್ಧೀಕರಣ ಘಟಕದವರೆಗೆ ತೇಲುವ ಪಂಪಿಂಗ್ ಕೇಂದ್ರ ಹಾಗೂ 850 ಮೀಟರ್ ಉದ್ದದ ಭೂಗತ ಪೈಪ್‌ಲೈನ್ ನಿರ್ಮಾಣಕ್ಕೆ ಫಿನ್ನೋವೇಷನ್ ಟೆಕ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಸಹಕಾರ ನೀಡಿದೆ. ಶುದ್ಧೀಕರಿಸಿದ ನೀರನ್ನು ಕ್ಯಾಂಪಸ್‌ನ ನೀರು ಸರಬರಾಜು ಜಾಲಕ್ಕೆ ಸಂಪರ್ಕಗೊಂಡಿರುವ ಸಂಪ್ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ.

    ಈ ಪಂಪಿಂಗ್ ಕೇಂದ್ರವು ಫೈಬರ್ ಬಲವರ್ಧಿತ ಪ್ಲಾಸ್ಟಿಕ್ (FRP) ತೇಲುವ ತಟ್ಟೆಗಳ ಮೇಲೆ ಸ್ಥಾಪಿಸಲ್ಪಟ್ಟಿರುವುದರಿಂದ ಜಲಾಶಯದ ಜಿಯೋಮೆಂಬ್ರೇನ್ ಅಸ್ತರ ಹೊಂದಿದ ತಳಭಾಗದಲ್ಲಿ ಪ್ರತ್ಯೇಕ ನೀರು ಸೆಳೆಯುವ ರಚನೆಯನ್ನು ನಿರ್ಮಿಸುವ ಅಗತ್ಯ ಉಂಟಾಗಿಲ್ಲ. ಇದರಿಂದ ಜಲಾಶಯದ ತಳಭಾಗದಲ್ಲಿ ಉಪಯೋಗಕ್ಕೆ ಬಾರದ ನೀರಿನ ಮಟ್ಟವು ಸುಮಾರು 1.5 ಮೀಟರ್‌ನಿಂದ ಅರ್ಧ ಮೀಟರ್‌ಗಿಂತ ಕಡಿಮೆಯಾಗುತ್ತದೆ. ಪ್ರತಿ ಗಂಟೆಗೆ 25,200 ಲೀಟರ್ ನೀರನ್ನು ಪಂಪ್ ಮಾಡುವ ಸಾಮರ್ಥ್ಯದ ಎರಡು 15 ಎಚ್‌ಪಿ ತೆರೆದ ಬಾವಿ ಮಾದರಿಯ ಸಬ್‌ಮರ್ಸಿಬಲ್ ಪಂಪ್‌ಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಒಂದು ಕಾರ್ಯಾಚರಣೆಗೆ ಹಾಗೂ ಇನ್ನೊಂದು ಮೀಸಲು ಬಳಕೆಗೆ ವ್ಯವಸ್ಥೆ ಮಾಡಲಾಗಿದೆ.

    ಎಚ್‌ಡಿಪಿಇ ಪೈಪ್‌ಲೈನ್‌ನ್ನು ಸಾಧ್ಯವಾದ ಎಲ್ಲೆಡೆ ಮಳೆನೀರು ಹರಿವು ಕಾಲುವೆಗಳ ಒಳಗೆ ಅಳವಡಿಸಲಾಗಿದ್ದು, ರಸ್ತೆ ದಾಟುವ ಭಾಗಗಳಲ್ಲಿ ರಕ್ಷಣಾತ್ಮಕ ಹೊದಿಕೆಯನ್ನು ಒದಗಿಸಲಾಗಿದೆ. ಇದರ ಎತ್ತರ ಮತ್ತು ತಗ್ಗು ಭಾಗಗಳಲ್ಲಿ ಗಾಳಿಯ ನಿರ್ಗಮನ ಹಾಗೂ ನೀರು ಹೊರಹರಿವಿನ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಯೋಜನೆಯ ಅನುಷ್ಠಾನ ಕಾರ್ಯವನ್ನು ಹಳೆಯ ವಿದ್ಯಾರ್ಥಿಗಳು ಸ್ವತಃ ಮೇಲ್ವಿಚಾರಣೆ ಮಾಡಿದ್ದಾರೆ.

    ಬೇಸಿಗೆ ಅವಧಿಯಲ್ಲಿ ನೀರಿನ ಕೊರತೆ ಪ್ರತಿವರ್ಷ ಉಂಟಾಗುತ್ತಿದ್ದು, ಹಿಂದೆ ಕ್ಯಾಂಪಸ್ ತಾತ್ಕಾಲಿಕವಾಗಿ ಮುಚ್ಚುವ ಪರಿಸ್ಥಿತಿಯೂ ಎದುರಾಗಿತ್ತು. ಈ ವರ್ಷ ರಾಜ್ಯಾದ್ಯಂತ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿರುವುದರಿಂದ ಬರದ ಆತಂಕವೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಳೆನೀರನ್ನು ಸಂಗ್ರಹಿಸಿ, ಶುದ್ಧೀಕರಣ ಘಟಕದ ಮೂಲಕ ಕ್ಯಾಂಪಸ್ ನೀರು ಸರಬರಾಜು ಜಾಲಕ್ಕೆ ಸಂಪರ್ಕಿಸಿರುವ ಈ ಯೋಜನೆಯು ಬೇಸಿಗೆ ಕಾಲದಲ್ಲಿ ಇಂತಹ ಸಮಸ್ಯೆಗಳನ್ನು ತಪ್ಪಿಸಲು ನೆರವಾಗಲಿದೆ.

    ಎನ್‌ಐಟಿಕೆ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಎಂ.ಎಂ. ಮುರುಗಪ್ಪನ್ ಅವರು ಯೋಜನೆ ಹಾಗೂ ಅದರಲ್ಲಿ ವಿವಿಧ ಭಾಗೀದಾರರು, ತಜ್ಞರು, ಹಳೆಯ ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

    ಅವರು ಮಾತನಾಡಿ, “ಎನ್‌ಐಟಿಕೆರೆ ಯೋಜನೆಯು ಸ್ಥಳೀಯ ಸಮಸ್ಯೆಗಳಿಗೆ ಸಮೂಹಿಕ ಸಂಕಲ್ಪ ಮತ್ತು ಸಹಭಾಗಿತ್ವದ ಮೂಲಕ ಹೇಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಯೋಜನೆಯಲ್ಲಿ ಬಳಸಿರುವ ತಂತ್ರಜ್ಞಾನ ಹಾಗೂ ಅದರ ಅನುಷ್ಠಾನ ಮಾದರಿಯು ಮಳೆಗಾಲದಲ್ಲಿ ಉತ್ತಮ ಮಳೆಯಾಗಿದ್ದರೂ ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ಎದುರಿಸುವ ಇತರ ಪ್ರದೇಶಗಳಿಗೆ ಮಾದರಿಯಾಗಬಲ್ಲದು,” ಎಂದು ಹೇಳಿದರು.

    _Sathish Kapikad 

    Share. Facebook Twitter Pinterest LinkedIn Email WhatsApp
    Previous Articleಮೂಡುಬಿದಿರೆ: 31ನೇ ಆಳ್ವಾಸ್ ವಿರಾಸತ್ ಹಾಗೂ 17ನೇ ಆಳ್ವಾಸ್ ನುಡಿಸಿರಿಯನ್ನು ಒಗ್ಗೂಡಿಸಿ ಐದು ದಿನಗಳ “ಆಳ್ವಾಸ್ ನುಡಿಸಿರಿ-ವಿರಾಸತ್” ಕಾರ್ಯಕ್ರಮಕ್ಕೆ ಜ.6ರಿಂದ ಚಾಲನೆ
    Next Article ಪ್ರಸ್ತುತ ಸನ್ನಿವೇಶದಲ್ಲಿ ಜನರಲ್ಲಿ ಪುಸ್ತಕ, ಪತ್ರಿಕೆ ಓದುವ ಅಭ್ಯಾಸ ಕ್ಷೀಣಿಸುತ್ತಿದ್ದು, ಮೊಬೈಲ್ ವೀಕ್ಷಣೆ ಹೆಚ್ಚುತ್ತಿದೆ : “ಮ್ಯಾನುವಲ್ ಆಫ್ ಸರ್ಜರಿ” ವೈದ್ಯಕೀಯ ಪಠ್ಯಪುಸ್ತಕ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಡಾ. ಶಿವಕುಮಾರ್ ಮಗದ

    Related Posts

    ಕರಾವಳಿ

    ಪಿಲಿಕುಳದ ಕೆರೆಯಲ್ಲಿ ಬೆಳಸಿದ ಬಲಿಷ್ಠ ಮೀನುಗಳ ಪ್ರದರ್ಶನ ಹಾಗೂ ಮಾರಾಟ: ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ಯಶಸ್ವಿ 

    October 26, 2026
    ಕರಾವಳಿ

    ಮಂಗಳ ಕ್ರೀಡಾಂಗಣಕ್ಕೆ 20 ಕೋಟಿ ಅನುದಾನ : ಅಭಿವೃದ್ಧಿ ಯೋಜನೆ ಅನುಷ್ಠಾನದ ಬಗ್ಗೆ ಮೂಡಾ ಅಧ್ಯಕ್ಷರ ನೇತೃತ್ವದಲ್ಲಿ ಸಭೆ 

    October 25, 2026
    ಕರಾವಳಿ

    ಪೋಲಿಯೋ ಮುಕ್ತ ಸಮಾಜ ನಿರ್ಮಾಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅನನ್ಯ: ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್

    October 25, 2026
    Add A Comment
    Leave A Reply Cancel Reply

    Top Posts

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.