
ಮಂಗಳೂರು : ವಿಶ್ವಕರ್ಮರ ಕಲಾನೈಪುಣ್ಯತೆ ವಿಶ್ವಕ್ಕೇ ಮಾನ್ಯವಾದುದು, ಶ್ರೇಷ್ಠವಾದುದು – ವಿಶ್ವಕರ್ಮ ಸಮಾಜದವರಿಗೆ ಅವರ ಪಂಚ ಕಸುಬುಗಳಲ್ಲಿ ಯಾವುದೇ ಕೆಲಸಕೊಟ್ಟರೂ ಅದಕ್ಕೆ ಅತ್ಯಂತ ಸುಂದರರೂಪ ನೀಡುವುದು ಅವರಿಗೆ ರಕ್ತಗತ ವಾಗಿ ಬಂದಿದೆ ಎಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಮತ್ತು ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಇದರ ಸಹಯೋಗದಲ್ಲಿ ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶ್ರೀ ಕಾಳಿಕಾಂಬಾ ಕಲಾ ರಂಗ ಮಂಟಪದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಖ್ಯಾತ ಲೇಖಕರಾದ ಉದಯಭಾಸ್ಕರ್ ಆಚಾರ್ಯ, ಸುಳ್ಯ ಇವರು ಭಗವಾನ್ ಶ್ರೀ ವಿಶ್ವಕರ್ಮ ದೇವರ ಬಗ್ಗೆ, ವಿಶ್ವಬ್ರಾಹ್ಮಣ ಸಮಾಜದ ಪರಂಪರೆ ಬಗ್ಗೆ ಉಪನ್ಯಾಸ ನೀಡಿದರು.
ಇನ್ನೊರ್ವ ಮುಖ್ಯ ಅತಿಥಿ ಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಟಿ ಎಂ ಶಾಹಿದ್ ತೆಕ್ಕಿಲ್ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಶುಭಾಶಯಕೋರಿದರು. ದ ಕ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಪ್ರಾಧಿಕಾರದ ಅಧ್ಯಕ್ಷರಾದ ಭರತ್ ಮುಂಡೋಡಿ ಮುಖ್ಯ ಅತಿಥಿ ಯಾಗಿ ಆಗಮಿಸಿದ್ದರು.
ವಿಶೇಷ ಅತಿಥಿಯಾಗಿ ಆಗಮಿಸಿದ್ದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿಯಾದ ಕೆ ಉಮೇಶ್ ಆಚಾರ್ಯ ಪಾಂಡೇಶ್ವರರು ಕರ್ನಾಟಕ ಸರಕಾರ ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ದ ಬಗ್ಗೆ ಕರ್ನಾಟಕ ಸರಕಾರವನ್ನು ಪ್ರಶಂಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ ಸ್ವಾಗತಿಸಿದರು. ಸುಜ್ಞಾನ ಆಚಾರ್ಯ ನಾಡಗೀತೆ ಹಾಡಿದರು. ಚೇತನ್ ಕುಮಾರ್ ಮತ್ತು ಅಖಿಲೇಶ್ ಶರ್ಮಾ ವೇದಮಂತ್ರ ಪಟಿಸಿದರು. ಪಿ ರವೀಂದ್ರ ಮಂಗಳಾದೇವಿ ಕಾರ್ಯಕ್ರಮ ನಿರೂಪಣೆಗೈದರು.ಸಾಂಸ್ಕೃತಿಕ ಕಾರ್ಯಕ್ರಮ ವಿಶ್ವಬ್ರಾಹ್ಮಣ ಮಹಿಳಾ ಸಮಿತಿ ವತಿಯಿಂದ ನಡೆಯಿತು.
_Sathish Kapikad