
ಮಿಜಾರು(ಮೂಡುಬಿದಿರೆ): ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಮಹತ್ವಾಕಾಂಕ್ಷಿ ಹೆಜ್ಜೆಯಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ (ಆಳ್ವಾಸ್ ಮೆಡಿಕಲ್ ಕಾಲೇಜು) ಸೋಮವಾರ ( ಸೆ. 21) ಮಿಜಾರಿನ ಶ್ರೀಮತಿ ಶೋಭಾ ಮೋಹನ ಆಳ್ವ ಆವರಣದಲ್ಲಿ ಉದ್ಘಾಟನೆಗೊಂಡಿತು
ಕಾಲೇಜಿನ ಆವರಣದಲ್ಲಿ ಮಿಜಾರುಗುತ್ತು ಶ್ರೀಮತಿ ಸುಂದರಿ ಆನಂದ ಆಳ್ವ ವೇದಿಕೆಯಲ್ಲಿ ಕೇಂದ್ರದ ಶಿಕ್ಷಣ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು ನೂತನ ಕಾಲೇಜು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡಿ, ಆಳ್ವಾಸ್ ಮೆಡಿಕಲ್ ಕಾಲೇಜು ಮೂಲಕ ಶಿಕ್ಷಣ ಪ್ರೇಮಿಗಳ ಬೇಡಿಕೆ, ಆಳ್ವರ ಕನಸು, ಜನರ ಅಪೇಕ್ಷೆ ಈಡೇರಿದೆ.ಆಳ್ವರ ಸಾಧನೆಗೆ ಅವರೇ ಸಾಟಿ ಎಂದರು.
ಆರ್ಥಿಕವಾಗಿ ಕೈಗೆಟಕುವ, ಗುಣಮಟ್ಟದ, ಸುಲಭವಾಗಿ ದೊರೆಯುವ ಆರೋಗ್ಯ ಸೇವೆ ನಮ್ಮದಾಗಬೇಕು ಎಂಬುದು ಕೇಂದ್ರ ಸರ್ಕಾರದ ಕನಸು. ಕೇಂದ್ರದ ಈ ನೀತಿಯ ಕಾರಣ ಇಂದು ವೇಗವಾಗಿ ಆರೋಗ್ಯ ಕ್ಷೇತ್ರ ಅಭಿವೃದ್ಧಿ ಕಾಣುತ್ತಿದೆ ಎಂದ ಅವರು, ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಕೈಜೋಡಿಸಿ ಎಂದು ವಿನಂತಿಸಿದರು.
ಆರೋಗ್ಯ ಮತ್ತು ಅಧ್ಯಾತ್ಮಿಕ ಗುಣಮುಖ ರಾಜಧಾನಿ ದಕ್ಷಿಣ ಕನ್ನಡ ಆಗಲಿ. ಆರೋಗ್ಯ ದೇವಾಲಯ ಹೆಚ್ಚಾಗಲಿ. ವೈದ್ಯಕೀಯ ಪ್ರವಾಸಿತಾಣವಾಗಲಿ ಎಂದ ಅವರು, ಆಳ್ವಾಸ್ ಪರಿಗಣಿತ ವಿಶ್ವವಿದ್ಯಾನಿಲಯ ಬೇಗನೇ ನನಸಾಗಲಿ ಎಂದರು.
ಕಾರ್ಯಕ್ರಮದಲ್ಲಿ ಉಮಾನಾಥ ಎ. ಕೋಟ್ಯಾನ್, ಶಾಸಕರು, ಮೂಡುಬಿದಿರೆ, ಡಾ. ಎಸ್. ಕಾಂತಾ, ಮೊದಲ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ., ಡಾ. ಎಸ್. ಚಂದ್ರಶೇಖರ್ ಶೆಟ್ಟಿ, ವಿಶ್ರಾಂತ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ., ಡಾ. ಎಚ್.ಎಸ್. ಬಲ್ಲಾಳ್, ಕುಲಾಧಿಪತಿಗಳು, ಮಾಹೆ, ಡಾ. ರಮಾನಂದ ಶೆಟ್ಟಿ, ವಿಶ್ರಾಂತ ಕುಲಪತಿಗಳು, ಡಾ. ಎಸ್. ಸಚ್ಚಿದಾನಂದ, ವಿಶ್ರಾಂತ ಕುಲಪತಿಗಳು, ಡಾ. ಜಯಕರ್ ಶೆಟ್ಟಿ, ವಿಶ್ರಾಂತ ಕುಲಪತಿಗಳು, ಡಾ. ಪಿ.ಎಲ್. ಧರ್ಮ, ಕುಲಪತಿಗಳು, ಮಂಗಳೂರು ವಿ.ವಿ., ಡಿ. ಸುರೇಂದ್ರ ಕುಮಾರ್, ಧರ್ಮಸ್ಥಳ, ಡಿ. ಹರ್ಷೇಂದ್ರ ಕುಮಾರ್, ಧರ್ಮಸ್ಥಳ, ಡಾ. ಎ.ಜೆ. ಶೆಟ್ಟಿ, ಅಧ್ಯಕ್ಷರು, ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ವಿಶಾಲ್ ಹೆಗ್ಡೆ, ಕುಲಾಧಿಪತಿಗಳು, ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ, ಡಾ. ಅಬ್ದುಲ್ ಕುಂಞ್ಞಿ, ಕುಲಾಧಿಪತಿಗಳು, ಯೆನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯ, ಮಂಗಳೂರು, ಫೌಸ್ಟಿನ್ ಲ್ಯೂಕಸ್ ಲೋಬೋ, ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೆಬಲ್ ಇನ್ಸ್ಟಿಟ್ಯೂಷನ್ಸ್, ಮಂಗಳೂರು, ಡಾ. ಹಾಜಿ ಯು.ಕೆ. ಮೋನು, ಅಧ್ಯಕ್ಷರು, ಕಣಚೂರು ಸಮೂಹ ಸಂಸ್ಥೆಗಳು, ಮಂಗಳೂರು, ಚಿದಾನಂದ ಗೌಡ, ಅಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್, ಸುಳ್ಯ, ಡಾ. ಎ. ಶ್ರೀನಿವಾಸ್ ರಾವ್, ಕುಲಾಧಿಪತಿಗಳು, ಶ್ರೀನಿವಾಸ ವಿಶ್ವವಿದ್ಯಾಲಯ, ಮಂಗಳೂರು, ಎಸ್. ಗಣೇಶ್ ರಾವ್, ಸ್ಥಾಪಕಾಧ್ಯಕ್ಷರು, ಕರಾವಳಿ ಗ್ರೂಪ್ ಆಫ್ ಕಾಲೇಜಸ್, ಮಂಗಳೂರು, ಡಾ. ರಾಜೇಶ್ ಶೆಟ್ಟಿ, ವೈದ್ಯಕೀಯ ನಿರ್ದೇಶಕರು, ಫಸ್ಟ್ ನ್ಯೂರೋ ಹಾಸ್ಪಿಟಲ್ಸ್, ಡಾ. ಪ್ರಕಾಶ್ ಶೆಟ್ಟಿ, ಪ್ರವರ್ತಕರು ಮತ್ತು ಅಧ್ಯಕ್ಷರು, ಎಂಆರ್ಜಿ ಗ್ರೂಪ್, ರವೀಂದ್ರನಾಥ ಆಳ್ವ, ಪಾಲುದಾರರು, ಕುಮಾರಸ್ವಾಮಿ ಮಿನರಲ್ಸ್, ಬಳ್ಳಾರಿ, ಕಿಶೋರ್ ಆಳ್ವ, ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಅಧ್ಯಕ್ಷರು, ಅದಾನಿ ಸಮೂಹ, ಕರ್ನಾಟಕ, ರೆ. ಫಾ. ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಧರ್ಮಗುರುಗಳು, ಮಂಗಳೂರು ಧರ್ಮಪ್ರಾಂತ್ಯ, ಡಾ. ಎಂ.ಎಸ್. ಆಳ್ವ, ಮುಂಬೈ, ರಾಮಚಂದ್ರ ಶೆಟ್ಟಿ, ಕೊಡ್ಡಣ್ಗುತ್ತು, ಶ್ರೀನಿವಾಸ ಆಳ್ವ, ಮಿಜಾರುಗುತ್ತು, ಶ್ರೀಪತಿ ಭಟ್, ಉದ್ಯಮಿಗಳು, ಮೂಡುಬಿದಿರೆ, ಕುಲದೀಪ ಎಂ., ಚೌಟರ ಅರಮನೆ, ಮೂಡುಬಿದಿರೆ, ಡಾ. ಪಿ.ಜಿ.ಆರ್. ಸಿಂಧ್ಯಾ, ರಾಜ್ಯ ಪ್ರಧಾನ ಆಯುಕ್ತರು, ಭಾರತ್ ಸೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಕೆ. ಅಭಯಚಂದ್ರ ಜೈನ್, ಮಾಜಿ ಸಚಿವರು, ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ವಿಧಾನಪರಿಷತ್ ಸದಸ್ಯರು, ಡಾ. ಶಾಂತಾರಾಮ್ ಶೆಟ್ಟಿ, ಸ್ಥಾಪಕ ಅಧ್ಯಕ್ಷರು, ತೇಜಸ್ವಿನಿ ಆಸ್ಪತ್ರೆ, ಮಂಗಳೂರು, ಡಾ. ಕಿರಣ್ ಕೆ.ವಿ. ಆಚಾರ್ಯ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮೂಳೆಚಿಕಿತ್ಸಾ ವಿಭಾಗ, ಕೆಎಂಸಿ, ಮಣಿಪಾಲ, ಜಯಶ್ರೀ ಅಮರನಾಥ ಶೆಟ್ಟಿ,
ಆಡಳಿತ ಮಂಡಳಿ ಸದಸ್ಯರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ,
ಡಾ. ಅಮರಶ್ರೀ, ಅಧ್ಯಕ್ಷರು, ಅಮರನಾಥ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, , ಡಾ. ಶಿವಶರಣ್ ಶೆಟ್ಟಿ, ನಿಕಟಪೂರ್ವ ಸಿಂಡಿಕೇಟ್, ಡಾ. ವೈಶಾಲಿ ಶ್ರೀಜಿತ್, ಸೆನೆಟ್ ಸದಸ್ಯರು, ಪ್ರವೀಣ್ ಕುಮಾರ್, ಆಡಳಿತ ನಿರ್ದೇಶಕರು, ಬಿಮಾಲ್ ಬಿಲ್ಡ್ಕಾನ್ ಪ್ರೈ.ಲಿ., ಪಂಕಜಾ ಶಂಕರ ನಾಯಕ್, ಸ್ಥಾಪಕಾಧ್ಯಕ್ಷರು, ಡಾ. ಶಂಕರ್ ನಾಯಕ್ ಚಾರಿಟೆಬಲ್ ಟ್ರಸ್ಟ್, ಮಂಜರಿ ಪ್ರವೀಣ್ ಸಲ್ದಾನ, ಸಲ್ದಾನ ಮತ್ತು ಅಸೋಸಿಯೇಟ್ಸ್, ಎಂ.ಬಿ.ಪುರಾಣಿಕ್, ಕಿಶೋರ್ ಆಳ್ವ,
ಡಾ.ಎಂ.ಎಸ್.ಆಳ್ವ , ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮುಸ್ತಫಾ ಎಸ್.ಎಂ., ವ್ಯವಸ್ಥಾಪಕ ನಿರ್ದೇಶಕರು, ಭಾರತ್ ಇನ್ಫ್ರಾಟೆಕ್ ಪ್ರೈ., ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮತ್ತು ಡಾ.ವಿನಯ್ ಆಳ್ವ ಹಾಗೂ ಗ್ರೀಷ್ಮಾ ವಿವೇಕ್ ಆಳ್ವ, ಹನ್ನಾ ವಿನಯ್ ಆಳ್ವ , ಉದ್ಯಮಿ ಶ್ರೀಪತಿ ಭಟ್ ಮತ್ತಿತರ ಗಣ್ಯರು ಇದ್ದರು.
_Sathish Kapikad