Close Menu
SK Media NewsSK Media News
    What's Hot

    ನವಂಬರ್ 1ರಂದು ಸುರತ್ಕಲ್ ಬಂಟರ ಭವನದಲ್ಲಿ ರಂಗುರಂಗಿನ ರಂಗೋತ್ಸವ – ಸಂಗೀತ ಗಾನಸುಧೆ – ಶ್ರೀಮತಿ ಸತ್ಯಭಾಮ ನಾಟಕ : ಲಕ್ಷ್ಮಣ್ ಕುಮಾರ್ ಮಲ್ಲೂರ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ

    October 27, 2026

    ಪಿಲಿಕುಳದ ಕೆರೆಯಲ್ಲಿ ಬೆಳಸಿದ ಬಲಿಷ್ಠ ಮೀನುಗಳ ಪ್ರದರ್ಶನ ಹಾಗೂ ಮಾರಾಟ: ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ಯಶಸ್ವಿ 

    October 26, 2026

    ಮಂಗಳ ಕ್ರೀಡಾಂಗಣಕ್ಕೆ 20 ಕೋಟಿ ಅನುದಾನ : ಅಭಿವೃದ್ಧಿ ಯೋಜನೆ ಅನುಷ್ಠಾನದ ಬಗ್ಗೆ ಮೂಡಾ ಅಧ್ಯಕ್ಷರ ನೇತೃತ್ವದಲ್ಲಿ ಸಭೆ 

    October 25, 2026
    Facebook X (Twitter) Instagram
    SK Media NewsSK Media News
    • ಮುಖಪುಟ
    • ಕರ್ನಾಟಕ
    • ಕರಾವಳಿ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    SK Media NewsSK Media News
    Home » ತಿಂಗಳಲ್ಲಿ ಆಳ್ವಾಸ್ ಪರಿಗಣಿತ ವಿಶ್ವವಿದ್ಯಾಲಯ : ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಮಹತ್ವಾಕಾಂಕ್ಷಿ ಹೆಜ್ಜೆಯಾದ “ಆಳ್ವಾಸ್ ಮೆಡಿಕಲ್ ಕಾಲೇಜು” ಉದ್ಘಾಟಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ
    ಕರಾವಳಿ

    ತಿಂಗಳಲ್ಲಿ ಆಳ್ವಾಸ್ ಪರಿಗಣಿತ ವಿಶ್ವವಿದ್ಯಾಲಯ : ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಮಹತ್ವಾಕಾಂಕ್ಷಿ ಹೆಜ್ಜೆಯಾದ “ಆಳ್ವಾಸ್ ಮೆಡಿಕಲ್ ಕಾಲೇಜು” ಉದ್ಘಾಟಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ

    September 22, 20264 Mins Read
    Share Facebook Twitter Pinterest LinkedIn Email WhatsApp
    Share
    Facebook Twitter LinkedIn Pinterest Email WhatsApp

    ಮಿಜಾರು(ಮೂಡುಬಿದಿರೆ): ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಮಹತ್ವಾಕಾಂಕ್ಷಿ ಹೆಜ್ಜೆಯಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ (ಆಳ್ವಾಸ್ ಮೆಡಿಕಲ್ ಕಾಲೇಜು) ಸೋಮವಾರ ( ಸೆ. 21) ಮಿಜಾರಿನ ಶ್ರೀಮತಿ ಶೋಭಾ ಮೋಹನ ಆಳ್ವ ಆವರಣದಲ್ಲಿ ಉದ್ಘಾಟನೆಗೊಂಡಿತು.

    ಆವರಣದ ಮಿಜಾರುಗುತ್ತು ಶ್ರೀಮತಿ ಸುಂದರಿ ಆನಂದ ಆಳ್ವ ವೇದಿಕೆಯಲ್ಲಿ ಕಾಲೇಜು ಉದ್ಘಾಟಿಸಿ ಮಾತನಾಡಿದ ಕೇಂದ್ರದ ಶಿಕ್ಷಣ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ‘ಆಳ್ವಾಸ್ ಪರಿಗಣಿತ ವಿಶ್ವವಿದ್ಯಾಲಯದ ಮಾನ್ಯತೆ ಇನ್ನೊಂದು ತಿಂಗಳಲ್ಲಿ ಸಿಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

    ‘ನಮ್ಮ ಮುಂಬೈ ಕರ್ನಾಟಕದ ಜನ ದೇವರ ಬಳಿ ಧರ್ಮಸ್ಥಳಕ್ಕೆ ಹಾಗೂ ಶಿಕ್ಷಣಕ್ಕೆ ಮೂಡುಬಿದಿರೆ ಆಳ್ವಾಸ್ ಗೆ ಬರುತ್ತಾರೆ. ಆಳ್ವರೇ ನಿಮಗೆ ದೇವರ ಆಶೀರ್ವಾದ ಇದೆ’ ಎಂದು ಸಂತಸ ಹಂಚಿಕೊಂಡರು.

    ‘ನೂರು ಕೈಯಿಂದ ಗಳಿಸಿ, ಸಾವಿರ ಕೈಗಳಿಂದ ಕೊಡುಬೇಕು’ ಎಂಬುದನ್ನು ನಮ್ಮ ಸಂಸ್ಕೃತಿ ಹೇಳುತ್ತದೆ. ಅದಕ್ಕೆ ನಿದರ್ಶನ ಆಳ್ವರು. ಅಶಕ್ತರಿಗೆ ಕೊಡುವ ಸಂಸ್ಥೆ ಆಳ್ವಾಸ್’ ಎಂದು ಬಣ್ಣಿಸಿದರು.

    ‘ಜಗತ್ತು ವೃದ್ಧ ಆಗುತ್ತಿದೆ. ಆದರೆ, ಭಾರತ ಯುವಜನರ ದೇಶ. ಭಾರತದ ವೈದ್ಯ ಹಾಗೂ ಶುಶ್ರೂಷಕರ ಮೇಲೆ ವಿಶ್ವಾಸ ಹೆಚ್ಚು ತ್ತಿದೆ. ದಕ್ಷಿಣ ಕನ್ನಡವು ಜಗತ್ತಿನ ವೈದ್ಯಕೀಯ ಕೇಂದ್ರ ಆಗಲಿ ಎಂದರು.

    ವೈದ್ಯಕೀಯ ಸಂಶೋಧನೆಯಲ್ಲಿ ಮಾನವೀಯತೆ ಅವಶ್ಯ ಎಂದ ಅವರು, ಕೌಶಲ ಮತ್ತು ಧೈರ್ಯ ವಿದ್ಯಾರ್ಥಿಗಳಿಗೆ ಬೇಕು. ಅಂತಹ ಸೇವಾ ಸಂಕಲ್ಪ ಭಾರತದಲ್ಲಿ ಇದೆ ಎಂದು ವಿವರಿಸಿದರು.

    ಯುವಜನತೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳ ಮೇಲೆ ಒತ್ತಡ ಹಾಕಬೇಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

    ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿರುವುದು ಇದಕ್ಕೊಂದು ನಿದರ್ಶನ ಎಂದರು.
    ಭಾರತವು ಇಂದು 863 ಬಿಲಿಯನ್ ಡಾಲರ್ ರಫ್ತು ಮಾಡುತ್ತಿದೆ. 300ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುತ್ತಿದೆ. ದೇಶದ ಆರ್ಥಿಕ ಸಾಧನೆ ಕಂಡು ಹಲವು ರಾಷ್ಟ್ರಗಳು ನಮ್ಮ ಜೊತೆ ಮುಕ್ತ ಒಪ್ಪಂದ ಮಾಡಿಕೊಳ್ಳುತ್ತಿವೆ ಎಂದರು.

    ಶೇ98ರಷ್ಟು ಮೊಬೈಲ್ ಉತ್ಪಾದನೆಯನ್ನು ಭಾರತವೇ ಇಂದು ಮಾಡುತ್ತಿದೆ. ಮುಂದಿನ 6ಜಿ ತಂತ್ರಜ್ಞಾನವನ್ನು ಭಾರತ ನೀಡಲಿದೆ ಎಂದು ಭವಿಷ್ಯ ನುಡಿದರು.

    ಭಾರತದಲ್ಲಿ ಪ್ರಸ್ತುತ 1.4ಲಕ್ಷ ವೈದ್ಯಕೀಯ ಸೀಟುಗಳಿವೆ.
    1.03 ಲಕ್ಷ ಪೇಟೆಂಟ್, 2.3 ಲಕ್ಷ ಸ್ಟಾರ್ಟ್ ಅಪ್ ಗಳು ಸೇರಿದಂತೆ ಭಾರತದ ಶೈಕ್ಷಣಿಕ ಸಾಧನೆ ಜಾಗತಿಕ ಗಮನ ಸೆಳೆಯುತ್ತಿದೆ ಎಂದರು.

    ‘ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಟಾರ್ಟ್ ಅಪ್ ಗಳು ರಾಜ್ಯ ಹಾಗೂ ದಕ್ಷಿಣ ಕನ್ನಡದಿಂದ ಬರಲಿ’ ಎಂದು ಆಶಿಸಿದ ಅವರು, ‘ಹೊಸ ಯೋಚನೆ -ಯೋಜನೆ ವೈದ್ಯಕೀಯ ಕ್ಷೇತ್ರದಿಂದ ಬರಲಿ’ ಎಂದರು.

    ಯುವ ಜನತೆಗೆ ಸಾಕಷ್ಟು ಅವಕಾಶಗಳಿವೆ. ಕೇಂದ್ರವು ಪ್ರಸ್ತುತ 2.5 ಲಕ್ಷ ಕೋಟಿ ರೂಪಾಯಿ ಸಂಶೋಧನೆಗೆ ಮೀಸಲು ಇಟ್ಟಿದೆ. 21ನೇ ಶತಮಾನ ಭಾರತದ್ದು, 2047 ಕ್ಕೆ ವಿಕಸಿತ ಭಾರತ ಆಗಲಿದೆ ಎಂದರು.

    ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಣದ ಜೊತೆ ಸಂಸ್ಕಾರ ಅವಶ್ಯ. ಇದಕ್ಕೆ ಅತ್ಯುತ್ತಮ ಸಂಸ್ಥೆ ಆಳ್ವಾಸ್. ಆಳ್ವಾಸ್ ಸಾಮಾಜಿಕ ಬದ್ಧತೆ ಶ್ಲಾಘನೀಯ ಎಂದರು.

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ ಮಾತನಾಡಿ, ಆಳ್ವಾಸ್ ನಮ್ಮ ವಿ.ವಿ.ಯ ಭಾಗವಾಗಿರುವುದು ನಮ್ಮೆಲ್ಲರ ಹೆಮ್ಮೆ. ಶಿಕ್ಷಣ ಮಿದುಳಿನ ಜೊತೆ ಹೃದಯಕ್ಕೂ ಸಿಗಬೇಕು ಎಂಬ ಸಾಕ್ರೆಟಿಸ್ ಮಾತಿಗೆ ಡಾ. ಎಂ ಮೋಹನ ಆಳ್ವರ ಮಾದರಿ ಅತ್ಯುತ್ತಮ ನಿದರ್ಶನ ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ ಆಳ್ವ, ಆಳ್ವಾಸ್ ಮೆಡಿಕಲ್ ಕಾಲೇಜು ನಿರ್ಮಾಣದ ಹಿಂದೆ ಶ್ರಮಿಸಿದ, ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.

    ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಹಿರಿಯ ವೈದ್ಯರು ಹಾಗೂ ವೈದ್ಯಕೀಯ ದಿಗ್ಗಜರ ಸ್ಮರಣೆಯನ್ನು ಗೌರವಿಸುವ ಉದ್ದೇಶದಿಂದ ಕಾಲೇಜಿನ ವಿವಿಧ ಚಿಕಿತ್ಸಾ ಕೇಂದ್ರಗಳು ಮತ್ತು ವಿಭಾಗಗಳಿಗೆ ಟಿ.ಎಂ.ಎ. ಪೈ, ಡಾ. ಎಸ್. ಕಾಂತ, ಡಾ. ಶಂಕರ್ ನಾಯಕ್, ಡಾ. ವಿ.ಎಸ್. ಆಚಾರ್ಯ, ಡಾ. ಶಾಂತರಾಮ್ ಶೆಟ್ಟಿ, ವಿನಯ್ ಹೆಗ್ಡೆ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ. ವಿ.ಎಸ್. ಕಾಮತ್, ಡಾ. ಮನೋರಮಾ, ಡಾ. ಕೃಷ್ಣಮೂರ್ತಿ ಹಾಗೂ ಡಾ. ಅಮರನಾಥ ಹೆಗ್ಡೆ ಅವರ ಹೆಸರುಗಳನ್ನು ಇಡಲಾಗಿದೆ ಎಂದು ಅವರು ತಿಳಿಸಿದರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮನ ಸೆಳೆಯಿತು.

    ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಮಾನಾಥ ಎ. ಕೋಟ್ಯಾನ್, ಶಾಸಕರು, ಮೂಡುಬಿದಿರೆ, ಡಾ. ಎಸ್. ಕಾಂತಾ, ಮೊದಲ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ., ಡಾ. ಎಸ್. ಚಂದ್ರಶೇಖರ್ ಶೆಟ್ಟಿ, ವಿಶ್ರಾಂತ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ., ಡಾ. ಎಚ್.ಎಸ್. ಬಲ್ಲಾಳ್, ಕುಲಾಧಿಪತಿಗಳು, ಮಾಹೆ, ಡಾ. ರಮಾನಂದ ಶೆಟ್ಟಿ, ವಿಶ್ರಾಂತ ಕುಲಪತಿಗಳು, ಡಾ. ಎಸ್. ಸಚ್ಚಿದಾನಂದ, ವಿಶ್ರಾಂತ ಕುಲಪತಿಗಳು, ಡಾ. ಜಯಕ‌ರ್ ಶೆಟ್ಟಿ, ವಿಶ್ರಾಂತ ಕುಲಪತಿಗಳು, ಡಾ. ಪಿ.ಎಲ್. ಧರ್ಮ, ಕುಲಪತಿಗಳು, ಮಂಗಳೂರು ವಿ.ವಿ., ಡಿ. ಸುರೇಂದ್ರ ಕುಮಾರ್, ಧರ್ಮಸ್ಥಳ, ಡಿ. ಹರ್ಷೇಂದ್ರ ಕುಮಾರ್, ಧರ್ಮಸ್ಥಳ, ಡಾ. ಎ.ಜೆ. ಶೆಟ್ಟಿ, ಅಧ್ಯಕ್ಷರು, ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ವಿಶಾಲ್ ಹೆಗ್ಡೆ, ಕುಲಾಧಿಪತಿಗಳು, ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ, ಡಾ. ಅಬ್ದುಲ್ ಕುಂಞ್ಞಿ, ಕುಲಾಧಿಪತಿಗಳು, ಯೆನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯ, ಮಂಗಳೂರು, ಫೌಸ್ಟಿನ್ ಲ್ಯೂಕಸ್ ಲೋಬೋ, ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಷನ್ಸ್, ಮಂಗಳೂರು, ಡಾ. ಹಾಜಿ ಯು.ಕೆ. ಮೋನು, ಅಧ್ಯಕ್ಷರು, ಕಣಚೂರು ಸಮೂಹ ಸಂಸ್ಥೆಗಳು, ಮಂಗಳೂರು, ಚಿದಾನಂದ ಗೌಡ, ಅಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್, ಸುಳ್ಯ, ಡಾ. ಎ. ಶ್ರೀನಿವಾಸ್ ರಾವ್, ಕುಲಾಧಿಪತಿಗಳು, ಶ್ರೀನಿವಾಸ ವಿಶ್ವವಿದ್ಯಾಲಯ, ಮಂಗಳೂರು, ಎಸ್. ಗಣೇಶ್ ರಾವ್, ಸ್ಥಾಪಕಾಧ್ಯಕ್ಷರು, ಕರಾವಳಿ ಗ್ರೂಪ್ ಆಫ್ ಕಾಲೇಜಸ್, ಮಂಗಳೂರು, ಡಾ. ರಾಜೇಶ್ ಶೆಟ್ಟಿ, ವೈದ್ಯಕೀಯ ನಿರ್ದೇಶಕರು, ಫಸ್ಟ್ ನ್ಯೂರೋ ಹಾಸ್ಪಿಟಲ್ಸ್, ಡಾ. ಪ್ರಕಾಶ್ ಶೆಟ್ಟಿ, ಪ್ರವರ್ತಕರು ಮತ್ತು ಅಧ್ಯಕ್ಷರು, ಎಂಆರ್‌ಜಿ ಗ್ರೂಪ್, ರವೀಂದ್ರನಾಥ ಆಳ್ವ, ಪಾಲುದಾರರು, ಕುಮಾರಸ್ವಾಮಿ ಮಿನರಲ್ಸ್, ಬಳ್ಳಾರಿ, ಕಿಶೋರ್ ಆಳ್ವ, ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಅಧ್ಯಕ್ಷರು, ಅದಾನಿ ಸಮೂಹ, ಕರ್ನಾಟಕ, ರೆ. ಫಾ. ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಧರ್ಮಗುರುಗಳು, ಮಂಗಳೂರು ಧರ್ಮಪ್ರಾಂತ್ಯ, ಡಾ. ಎಂ.ಎಸ್. ಆಳ್ವ, ಮುಂಬೈ, ರಾಮಚಂದ್ರ ಶೆಟ್ಟಿ, ಕೊಡ್ಡಣ್‌ಗುತ್ತು, ಶ್ರೀನಿವಾಸ ಆಳ್ವ, ಮಿಜಾರುಗುತ್ತು, ಶ್ರೀಪತಿ ಭಟ್, ಉದ್ಯಮಿಗಳು, ಮೂಡುಬಿದಿರೆ, ಕುಲದೀಪ ಎಂ., ಚೌಟರ ಅರಮನೆ, ಮೂಡುಬಿದಿರೆ, ಡಾ. ಪಿ.ಜಿ.ಆರ್. ಸಿಂಧ್ಯಾ, ರಾಜ್ಯ ಪ್ರಧಾನ ಆಯುಕ್ತರು, ಭಾರತ್ ಸೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಕೆ. ಅಭಯಚಂದ್ರ ಜೈನ್, ಮಾಜಿ ಸಚಿವರು, ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ವಿಧಾನಪರಿಷತ್ ಸದಸ್ಯರು, ಡಾ. ಶಾಂತಾರಾಮ್ ಶೆಟ್ಟಿ, ಸ್ಥಾಪಕ ಅಧ್ಯಕ್ಷರು, ತೇಜಸ್ವಿನಿ ಆಸ್ಪತ್ರೆ, ಮಂಗಳೂರು, ಡಾ. ಕಿರಣ್ ಕೆ.ವಿ. ಆಚಾರ್ಯ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮೂಳೆಚಿಕಿತ್ಸಾ ವಿಭಾಗ, ಕೆಎಂಸಿ, ಮಣಿಪಾಲ, ಜಯಶ್ರೀ ಅಮರನಾಥ ಶೆಟ್ಟಿ,
    ಆಡಳಿತ ಮಂಡಳಿ ಸದಸ್ಯರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ,
    ಡಾ. ಅಮರಶ್ರೀ, ಅಧ್ಯಕ್ಷರು, ಅಮರನಾಥ್ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್, , ಡಾ. ಶಿವಶರಣ್ ಶೆಟ್ಟಿ, ನಿಕಟಪೂರ್ವ ಸಿಂಡಿಕೇಟ್, ಡಾ. ವೈಶಾಲಿ ಶ್ರೀಜಿತ್, ಸೆನೆಟ್ ಸದಸ್ಯರು, ಪ್ರವೀಣ್ ಕುಮಾರ್, ಆಡಳಿತ ನಿರ್ದೇಶಕರು, ಬಿಮಾಲ್ ಬಿಲ್ಡ್‌ಕಾನ್ ಪ್ರೈ.ಲಿ., ಪಂಕಜಾ ಶಂಕರ ನಾಯಕ್, ಸ್ಥಾಪಕಾಧ್ಯಕ್ಷರು, ಡಾ. ಶಂಕರ್ ನಾಯಕ್ ಚಾರಿಟೆಬಲ್ ಟ್ರಸ್ಟ್, ಮಂಜರಿ ಪ್ರವೀಣ್ ಸಲ್ದಾನ, ಸಲ್ದಾನ ಮತ್ತು ಅಸೋಸಿಯೇಟ್ಸ್, ಎಂ.ಬಿ.ಪುರಾಣಿಕ್, ಕಿಶೋರ್ ಆಳ್ವ,
    ಡಾ.ಎಂ.ಎಸ್.ಆಳ್ವ , ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮುಸ್ತಫಾ ಎಸ್.ಎಂ., ವ್ಯವಸ್ಥಾಪಕ ನಿರ್ದೇಶಕರು, ಭಾರತ್ ಇನ್‌ಫ್ರಾಟೆಕ್ ಪ್ರೈ., ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮತ್ತು ಡಾ.ವಿನಯ್ ಆಳ್ವ ಹಾಗೂ ಗ್ರೀಷ್ಮಾ ವಿವೇಕ್ ಆಳ್ವ, ಹನ್ನಾ ವಿನಯ್ ಆಳ್ವ , ಉದ್ಯಮಿ ಶ್ರೀಪತಿ ಭಟ್ ಮತ್ತಿತರ ಗಣ್ಯರು ಇದ್ದರು.

    _Sathish Kapikad 

    Share. Facebook Twitter Pinterest LinkedIn Email WhatsApp
    Previous Articleಸುರತ್ಕಲ್‌ ಬಂಟರ ಭವನದಲ್ಲಿ ಪ್ರಪ್ರಥಮ ಬಾರಿಗೆ ಸೆಪ್ಟೆಂಬರ್ 25ರಿಂದ 27ರವರೆಗೆ  ಕೃಷಿ ಮೇಳ–ಆಹಾರ ಮೇಳ, ಹೋಳಿಗೆ ಹಬ್ಬ ಹಾಗೂ ಸಸ್ಯೋತ್ಸವ*
    Next Article ಆಳ್ವಾಸ್ ಮೆಡಿಕಲ್ ಕಾಲೇಜು ಮೂಲಕ ಶಿಕ್ಷಣ ಪ್ರೇಮಿಗಳ ಬೇಡಿಕೆ, ಆಳ್ವರ ಕನಸು, ಜನರ ಅಪೇಕ್ಷೆ ಈಡೇರಿದೆ.ಆಳ್ವರ ಸಾಧನೆಗೆ ಅವರೇ ಸಾಟಿ : ಸಂಸದ ಕ್ಯಾಪ್ಟನ್ ಚೌಟ 

    Related Posts

    ಕರಾವಳಿ

    ನವಂಬರ್ 1ರಂದು ಸುರತ್ಕಲ್ ಬಂಟರ ಭವನದಲ್ಲಿ ರಂಗುರಂಗಿನ ರಂಗೋತ್ಸವ – ಸಂಗೀತ ಗಾನಸುಧೆ – ಶ್ರೀಮತಿ ಸತ್ಯಭಾಮ ನಾಟಕ : ಲಕ್ಷ್ಮಣ್ ಕುಮಾರ್ ಮಲ್ಲೂರ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ

    October 27, 2026
    ಕರಾವಳಿ

    ಪಿಲಿಕುಳದ ಕೆರೆಯಲ್ಲಿ ಬೆಳಸಿದ ಬಲಿಷ್ಠ ಮೀನುಗಳ ಪ್ರದರ್ಶನ ಹಾಗೂ ಮಾರಾಟ: ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ಯಶಸ್ವಿ 

    October 26, 2026
    ಕರಾವಳಿ

    ಮಂಗಳ ಕ್ರೀಡಾಂಗಣಕ್ಕೆ 20 ಕೋಟಿ ಅನುದಾನ : ಅಭಿವೃದ್ಧಿ ಯೋಜನೆ ಅನುಷ್ಠಾನದ ಬಗ್ಗೆ ಮೂಡಾ ಅಧ್ಯಕ್ಷರ ನೇತೃತ್ವದಲ್ಲಿ ಸಭೆ 

    October 25, 2026
    Add A Comment
    Leave A Reply Cancel Reply

    Top Posts

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    About Us
    About Us

    Email : skmedianews@gmail.com
    Phone : +91 95914 89084

    Most Popular

      ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ : ಸರಕಾರಿ ಲೇಡೀಗೋಶನ್ ಆಸ್ಪತ್ರೆ ಮತ್ತು ಕೆ.ಎಂ.ಸಿ.ತಜ್ಞರ ಜಂಟಿ ಪರಿಶ್ರಮದಿಂದ ಪುನರ್ಜನ್ಮ ಪಡೆದ ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿ ಮಹಿಳೆ

    September 27, 2026

    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮಹಾನ್ ಅಂಗದಾನ : ಜೀವನದ ಒಂದು ಉಡುಗೊರೆ – ಪ್ರಕಾಶ್ ಆಚಾರ್ಯ ಕುಟುಂಬಕ್ಕೆ ಗೌರವ ಪೂರ್ವಕ ಕೃತಜ್ಞತೆ ಅರ್ಪಣೆ

    September 19, 2026

    ಯೂತ್ ಕಾಂಗ್ರೆಸ್ ಮುಖಂಡನ ಕೋಟ್ಯಾಂತರ ರೂ. ಹನಿಟ್ರ್ಯಾಪ್ ಪ್ರಕರಣ: ಕಠಿಣ ಕಾನೂನು ಕ್ರಮಕ್ಕೆ “ಬಿಜೆವೈಎಂ” ಆಗ್ರಹ

    June 9, 2026
    Our Picks
    Facebook X (Twitter) Instagram Pinterest
    • ಮುಖಪುಟ
    • ಕರ್ನಾಟಕ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    © 2026 SK Media News. Designed by Blueline Computers.

    Type above and press Enter to search. Press Esc to cancel.