
ಮಂಗಳೂರು, ಸೆ.21: ನಗರದ ಪ್ರತಿಷ್ಠಿತ ‘ಇನ್-ಲ್ಯಾಂಡ್ ಗ್ರೂಪ್’ ಸಂಸ್ಥೆಯು ತನ್ನ ನೂತನ ಪ್ರೀಮಿಯಂ ವಸತಿ ಯೋಜನೆ ಯಾದ ‘ಇನ್-ಲ್ಯಾಂಡ್ ಯೂಫೋರಿಯಾ’ಗೆ ನಗರದ ಕದ್ರಿಯ ಆರ್ಯ ಸಮಾಜ ರಸ್ತೆಯಲ್ಲಿ ಇಂದು (ಸೆ.21ರಂದು) ಚಾಲನೆ ನೀಡಲಾಯಿತು.
ಮಂಗಳೂರಿನ ಬಾಳಂಭಟ್ ಕ್ಷೇತ್ರದ ಪುರೋಹಿತರಾದ ಶ್ರೀ ಗಿರಿಧರ್ ಭಟ್ ಅವರು ಭುಮಿಪೂಜೆ ನೆರವೇರಿಸಿದರು. ಬೆಂದೂರು ಚರ್ಚ್ನ ಧರ್ಮಗುರು ವಾಲ್ಟರ್ ಡಿ’ಸೋಜಾ ಪ್ರಾರ್ಥಿಸಿದರು. ಪಾಣೆಮಂಗಳೂರು ಖತೀಬ್ ಮೌಲನಾ ಪಿ.ಎಸ್. ಮುಹಮ್ಮದ್ ಖಾಮಿಲ್ ಸಖಾಫಿ ಅವರು ಆಶೀರ್ವದಿಸಿದರು.
ಅಥಿತಿಗಳಾಗಿ ಯೆನೊಪೊಯ ಗ್ರೂಪ್ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕ ಶ್ರೀ ವೈ. ಅಬ್ದುಲ್ಲಾ ಕುಂಜ್ಞಿ, ಉದ್ಯಮಿ ಶ್ರೀ ಸುಧೀರ್ ಶೆಟ್ಟಿ, ಸಿಕೋ ಆಸೀಫ್, ಚಾರ್ಟೆಡ್ ಅಕೌಂಟೆಂಟ್ ಶ್ರೀ ಎಸ್ ಎಸ್ ನಾಯಕ್, ಪ್ರಮುಖರಾದ ಶ್ರೀ ವಿ ಯು. ಜಾರ್ಜ್, ಶ್ರೀ ಸುರೇಶ್ ಪೈ, ಶ್ರೀ ಕೆ.ಪಿ ಜಗದೀಶ್ ಅಧಿಕಾರಿ, ಶ್ರೀ ಅನಿಲ್ ಹೆಗ್ಡೆ, ಶ್ರೀ ಸನತ್ ಕುಮಾರ್ , ಬಿ. ಆರ್. ಭಟ್ ಪಾಲ್ಗೊಂಡಿದ್ದರು.
ಇನ್-ಲ್ಯಾಂಡ್ ಗ್ರೂಪ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ನಿರ್ದೇಶಕರಾದ ಮೆರಾಜ್ ಯೂಸುಫ್ ಹಾಗೂ ವಹಾಜ್ ಯೂಸುಫ್ ಉಪಸ್ಥಿತರಿದ್ದರು. ಅಲಿಶಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.
—————–
ಗುಣಮಟ್ಟ,ವಿಶ್ವಾಸ, ಪಾರದರ್ಶಕತೆ ಮತ್ತು ಶ್ರೇಷ್ಠತೆಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಅತ್ಯುತ್ತಮ ಯೋಜನೆ : ಸಿರಾಜ್ ಅಹ್ಮದ್
ಮಂಗಳೂರಿನ ವಸತಿ ಕ್ಷೇತ್ರದಲ್ಲಿ ಗುಣಮಟ್ಟದ ಹಾಗೂ ಪ್ರತಿಷ್ಠಿತ ವಸತಿ ಯೋಜನೆಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಇನ್-ಲ್ಯಾಂಡ್ ಗ್ರೂಪ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ಅವರು ಈ ವೇಳೆ ಮಾತನಾಡಿ, ಗುಣಮಟ್ಟ,ವಿಶ್ವಾಸ, ಪಾರದರ್ಶಕತೆ ಮತ್ತು ಶ್ರೇಷ್ಠತೆಯ ಮೌಲ್ಯಗಳನ್ನು ಅಳವಡಿಸಿಕೊಂಡ ಮತ್ತೊಂದು ಅತ್ಯುತ್ತಮ ಯೋಜನೆಯಾದ ‘ಇನ್- ಲ್ಯಾಂಡ್ ಯೂಫೋರಿಯಾ’ವನ್ನು ಜನತೆಗೆ ನೀಡುವ ಸಂಕಲ್ಪವನ್ನು ನಮ್ಮ ಸಂಸ್ಥೆ ಮಾಡಿದೆ.
‘ಉನ್ನತ ಜೀವನಶೈಲಿಯ ಹೊಸ ಆಯಾಮ’ ಎಂಬ ಪರಿಕಲ್ಪನೆಯೊಂದಿಗೆ ವಿನ್ಯಾಸಗೊಳ್ಳುತ್ತಿರುವ ‘ಇನ್-ಲ್ಯಾಂಡ್ ಯೂಫೋರಿಯಾ’, ಐಷಾರಾಮಿ ಜೀವನಶೈಲಿ, ಆಧುನಿಕ ಸೌಲಭ್ಯಗಳು, ವಿಶಾಲ ಸ್ಥಳಾವಕಾಶ ಹಾಗೂ ಖಾಸಗಿತನಕ್ಕೆ ಆದ್ಯತೆ ನೀಡುವ ಕುಟುಂಬಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣಗೊಳ್ಳಲಿದೆ ಎಂದರು.
ಮಂಗಳೂರಿನ ಪ್ರಮುಖ ವಸತಿ ಪ್ರದೇಶಗಳಲ್ಲಿ ಒಂದಾಗಿರುವ ಕದ್ರಿಯ ಆರ್ಯ ಸಮಾಜ ರಸ್ತೆಯಲ್ಲಿರುವ ಈ ಯೋಜನೆಯು ನಗರದ ಪ್ರಮುಖ ಪ್ರದೇಶಗಳಿಗೆ ಉತ್ತಮ ಸಂಪರ್ಕದೊಂದಿಗೆ ಶಾಂತ ಹಾಗೂ ನೆಮ್ಮದಿಯ ವಾತಾವರಣವನ್ನು ಒದಗಿಸಲಿದೆ.
ವಿಶಾಲ 3 ಬಿಎಚ್ಕೆ ನಿವಾಸಗಳು: 12 ಅಂತಸ್ತಿನ ಪ್ರೀಮಿಯಂ ಟವರ್ನಲ್ಲಿ 2,475 ಹಾಗೂ 2,740 ಚದರ ಅಡಿ ವಿಸ್ತೀರ್ಣದ 3 ಬಿಎಚ್ಕೆ ಐಷಾರಾಮಿ ನಿವಾಸಗಳು ಇರಲಿವೆ.ಪ್ರತಿ ನಿವಾಸದಲ್ಲಿ ಎಲ್ಲಾ ಬೆಡ್ರೂಂಗಳಿಗೆ ಅಟ್ಯಾಚ್ಡ್ ಬಾತ್ರೂಮ್, ಪೌಡರ್ ರೂಮ್, ಅಟ್ಯಾಚ್ಡ್ ಟಾಯ್ಲೆಟ್ , ಮನೆ ಸಹಾಯಕರ ಕೊಠಡಿ ಹಾಗೂ ಎರಡು ಕವರ್ಡ್ ಕಾರ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.
ಪ್ರತಿ ಮಹಡಿಯಲ್ಲಿ ಕೇವಲ ಎರಡು ಅಪಾರ್ಟ್ಮೆಂಟ್ಗಳು ಇರುವುದರಿಂದ ನಿವಾಸಿಗಳಿಗೆ ಹೆಚ್ಚಿನ ಖಾಸಗಿತನ, ವಿಶಾಲತೆ ಹಾಗೂ ನೆಮ್ಮದಿಯ ವಾತಾವರಣ ದೊರೆಯಲಿದೆ. ಆಧುನಿಕ ವಾಸ್ತುಶಿಲ್ಪ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ‘ಇನ್-ಲ್ಯಾಂಡ್ ಯೂಫೋರಿಯಾ’ವನ್ನು ರೂಪಿಸಲಾಗುತ್ತಿದೆ ಎಂದು ಸಿರಾಜ್ ಅಹ್ಮದ್ ಅವರು ತಿಳಿಸಿದರು.
ಸಂಸ್ಥೆಯ ನಿರ್ದೇಶಕರಾದ ಮೆರಾಜ್ ಯೂಸುಫ್ ಅವರು ಮಾತನಾಡಿ, ವಿಶ್ವಮಟ್ಟದ ಸೌಲಭ್ಯಗಳ ಸಮಗ್ರ ಅನುಭವ ನಿವಾಸಿಗಳ ಜೀವನಶೈಲಿಗೆ ಮತ್ತಷ್ಟು ಮೆರುಗು ನೀಡುವಂತೆ ಯೋಜನೆಯಲ್ಲಿ ರೂಫ್ಟಾಪ್ ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್, ಮಕ್ಕಳಿಗಾಗಿ ಪ್ರತ್ಯೇಕ ಈಜುಕೊಳ, ಸುಸಜ್ಜಿತ ಜಿಮ್ನಾಷಿಯಂ, ಮಕ್ಕಳ ಆಟದ ಸ್ಥಳ, ಭವ್ಯ ಪ್ರವೇಶ ದ್ವಾರ ಹಾಗೂ ಎಂಟ್ರನ್ಸ್ ಹಾಲ್ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಪ್ರೀಮಿಯಂ ಟವರ್ನಲ್ಲಿ 11 ಅಡಿ ಫ್ಲೋರ್-ಟು-ಫ್ಲೋರ್ ಎತ್ತರ, ವಾಸ್ತುಸಮ್ಮತ 24 ನಿವಾಸಗಳು, ಆಕ್ಸೆಸ್ ಕಂಟ್ರೋಲ್ ಹೊಂದಿರುವ ಸ್ವಯಂಚಾಲಿತ ಲಿಫ್ಟ್ಗಳು , ವೀಡಿಯೊ ಡೋರ್ ಫೋನ್, 24*7 ಸಿಸಿಟಿವಿ, ಇಂಟರ್ಕಾಂ , ಸಂಪೂರ್ಣ ಪವರ್ ಬ್ಯಾಕಪ್ ಹಾಗೂ ಸಮಗ್ರ ಅಗ್ನಿ ಸುರಕ್ಷತಾ ವ್ಯವಸ್ಥೆ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಇನ್-ಲ್ಯಾಂಡ್ ಗ್ರೂಪ್ನ ಮತ್ತೋರ್ವ ನಿರ್ದೇಶಕ್ ವಹಾಜ್ ಯೂಸುಫ್ ಅವರು ಮಾತನಾಡಿ, ಕದ್ರಿಯ ಆರ್ಯ ಸಮಾಜ ರಸ್ತೆಯಲ್ಲಿರುವ ‘ಇನ್-ಲ್ಯಾಂಡ್ಯೂಫೋರಿಯಾ’ ಯೋಜನೆಯು ಪ್ರಮುಖ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಶಾಪಿಂಗ್ ಕೇಂದ್ರಗಳು, ಧಾರ್ಮಿಕ ಕೇಂದ್ರಗಳು ಹಾಗೂ ನಗರದ ಇತರ ಅಗತ್ಯ ಸೌಲಭ್ಯಗಳಿಗೆ ಸುಲಭ ಸಂಪರ್ಕ ಹೊಂದಿದೆ. ನಗರದ ಪ್ರಮುಖ ಪ್ರದೇಶಗಳಿಗೆ ಉತ್ತಮ ಸಂಪರ್ಕದೊಂದಿಗೆ ಶಾಂತ ಹಾಗೂ ನೆಮ್ಮದಿಯ ವಾತಾವರಣವನ್ನು ಒದಗಿಸುವುದು ಯೋಜನೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ವಿಶ್ವಾಸದ ಪರಂಪರೆಯನ್ನು ಮುಂದುವರಿಸುತ್ತಿರುವ ಇನ್-ಲ್ಯಾಂಡ್ ಗ್ರೂಪ್ ಗುಣಮಟ್ಟದ ನಿರ್ಮಾಣ, ಸಮಯಬದ್ಧ ಕಾಮಗಾರಿ, ಗ್ರಾಹಕರ ತೃಪ್ತಿ ಹಾಗೂ ವಿಶ್ವಾಸಕ್ಕೆ ಹೆಸರುವಾಸಿಯಾದೆ. ಮಂಗಳೂರಿನ ಪ್ರೀಮಿಯಂ ವಸತಿ ಕ್ಷೇತ್ರದಲ್ಲಿ ಹಲವು ಮಹತ್ವದ ಯೋಜನೆಗಳನ್ನು ಅಭಿವೃದ್ಧಿಪಡಿಸಿದೆ.
‘ಇನ್-ಲ್ಯಾಂಡ್ ಯೂಫೋರಿಯಾ’ದ ಭೂಮಿಪೂಜೆಯೊಂದಿಗೆ ಸಂಸ್ಥೆಯ ಮತ್ತೊಂದು ಮಹತ್ವದ ಪ್ರೀಮಿಯಂ ವಸತಿ ಯೋಜನೆ ಶುಭಾರಂಭವಾಗಲಿದ್ದು, ಮಂಗಳೂರಿನ ಉನ್ನತ ಮಟ್ಟದ ವಸತಿ ಜೀವನಶೈಲಿಗೆ ಮತ್ತೊಂದು ಹೊಸ ಆಯಾಮವನ್ನು ಪರಿಚಯಿಸಲಿದೆ ಎಂದು ಹೇಳಿದರು.
_Sathish Kapikad