
ಮಂಗಳೂರು, ಸೆಪ್ಟಂಬರ್.16 : ಮಂಗಳೂರಿನ ಎಂ.ಜಿ ರಸ್ತೆಯಲ್ಲಿ ಬೆಸೆಂಟ್ ಕಾಲೇಜು ಸಮೀಪದ ಕಲಾಕುಂಜ ವೃತ್ತದಲ್ಲಿರುವ ಮಂಗಳೂರಿನ ಅತೀ ದೊಡ್ಡ ಹಾಗೂ ಪ್ರಸಿದ್ಧ ಹಾರ್ಡ್ವೇರ್ ಸಂಸ್ಥೆ ಬಸ್ತಿಕರ್ ಎಂಟರ್ಪ್ರೈಸಸ್ಗೆ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಐಂದ್ರಿತಾ ರೇ ಅವರು ಮಂಗಳವಾರ ಭೇಟಿ ನೀಡಿದರು.
ಈ ವೇಳೆ ಭಾರತದ ಅತ್ಯಂತ ದೊಡ್ಡ ಮತ್ತು ವಿಶ್ವಾಸಾರ್ಹ ಬಣ್ಣ ತಯಾರಿಕಾ ಕಂಪನಿ ಏಷ್ಯನ್ ಪೇಂಟ್ಸ್ (Asian Paints) ನವರು ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿರುವ ಎರಡು ರೀತಿಯ ವಿಶೇಷ ಬಣ್ಣ (Paints)ಗಳನ್ನು ನಟಿ ಐಂದ್ರಿತಾ ರೇ ಅವರು ಬಿಡುಗಡೆಗೊಳಿಸಿದರು.

ಐಂದ್ರಿತಾ ರೇ ಅವರು ಮಂಗಳವಾರ ಬಸ್ತಿಕರ್ ಎಂಟರ್ಪ್ರೈಸಸ್ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಏಷ್ಯನ್ ಪೇಂಟ್ಸ್ (Asian Paints) ನವರ ಏಷ್ಯನ್ ಪೇಂಟ್ಸ್ ಅಪೆಕ್ಸ್ ಡಸ್ಟ್ ಪ್ರೂಫ್ (Asian Paints Apex Advanced Dust Proof Exterior Emulsion White 20L) ಹಾಗೂ ಏಷ್ಯನ್ ಪೇಂಟ್ಸ್ ರಾಯಲ್ ಗ್ಲಿಟ್ಜ್ ರಿಸರ್ವ್ ಲಕ್ಸರಿ ಎಮಲ್ಷನ್ ( Asian Paints Royale Glitz Reserve Luxury Emulsion) ಎಂಬ ಎರಡು ಮಾದರಿಯ ಬಣ್ಣ (Paints)ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಈ ಸಂದರ್ಭ ಬಸ್ತಿಕರ್ ಎಂಟರ್ಪ್ರೈಸಸ್ನ ಮಾಲ್ಹಕರಾದ ಶ್ರೀ ಬಸ್ತಿ ವೆಂಕಟೇಶ್ ಶೆಣೈ, ಶ್ರೀಮತಿ ಬಸ್ತಿ ವಂದನ ಶೆಣೈ, ಶ್ರೀ ಬಸ್ತಿ ವಿಖ್ಯಾತ್ ಶೆಣೈ ಶ್ರೀಮತಿ ಬಸ್ತಿ ವಿಭಾ ಶೆಣೈ, ಏಷ್ಯನ್ ಪೇಂಟ್ಸ್ನ ಯೂನಿಟ್ (Unit Head) ಮುಖ್ಯಸ್ಥರಾದ ಸೊಹೈಲ್ ಅಹ್ಮದ್ ಉಪಸ್ಥಿತರಿದ್ದರು. ಆರ್.ಜೆ ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರ್ವಾಹಿಸಿದರು.

ಅಪೆಕ್ಸ್ ಡಸ್ಟ್ ಪ್ರೂಫ್ ಹಾಗೂ ರಾಯಲ್ ಗ್ಲಿಟ್ಜ್ Reserve ಬಗ್ಗೆ :
ಏಷ್ಯನ್ ಪೇಂಟ್ಸ್ ಅಪೆಕ್ಸ್ ಡಸ್ಟ್ ಪ್ರೂಫ್ (Asian Paints Apex Dust Proof) ಎಂಬುದು ನೀರಿನ ಆಧಾರಿತ, ನಯವಾದ ಹೊರಗೋಡೆಯ ಫಿನಿಶ್ ಆಗಿದ್ದು, ಇದು ‘ನ್ಯಾನೋ-ಬ್ಲಾಕ್’ (Nano-Block) ತಂತ್ರಜ್ಞಾನದ ಮೂಲಕ ಗೋಡೆಗಳ ಮೇಲೆ ಸೂಕ್ಷ್ಮ ಧೂಳಿನ ಕಣಗಳು ಅಂಟಿಕೊಳ್ಳುವುದನ್ನು ತಡೆಯುತ್ತದೆ.
ಏಷ್ಯನ್ ಪೇಂಟ್ಸ್ ರಾಯಲ್ ಗ್ಲಿಟ್ಜ್ ರಿಸರ್ವ್ ಲಕ್ಸರಿ ಎಮಲ್ಷನ್ ಒಂದು ಅಲ್ಟ್ರಾ ಶೀನ್ ಇಂಟೀರಿಯರ್ ಪೇಂಟ್ ಆಗಿದ್ದು ಅದು ಗೋಡೆಗಳಿಗೆ ಶ್ರೀಮಂತ ಐಷಾರಾಮಿ ಫಿನಿಶ್ ನೀಡುತ್ತದೆ. ಇದು ಗೋಡೆಗಳನ್ನು ಸುಂದರವಾಗಿಡಲು ಸಾಟಿಯಿಲ್ಲದ ಕಲೆ ನಿವಾರಕ ಗುಣವನ್ನು ನೀಡುತ್ತದೆ. ಇದು ಟೆಫ್ಲಾನ್ನೊಂದಿಗೆ ಐಷಾರಾಮಿಯನ್ನು ಒದಗಿಸುತ್ತದೆ: ಅಲಂಕಾರ ಮತ್ತು ಕಾರ್ಯಕ್ಷಮತೆಯ ಪ್ರಪಂಚದ ಅತ್ಯುತ್ತಮ ಸಂಯೋಜನೆಯಾಗಿದೆ.
_Sathish Kapikad


